ನಾವು ಬೆಳೆದಿದ್ದೇವೆ ನಮ್ಮ ಸುತ್ತಮುತ್ತಲಿನ ಅನೇಕ ಭೌತಿಕ ವಸ್ತುಗಳ ಜೊತೆಗಿನ ಸಂವಹನದೊಂದಿಗೆ ಅವುಗಳಲ್ಲಿ ಅಗಾಧವಾದ ಸಂಖ್ಯೆಯ ವಸ್ತುಗಳನ್ನು ನಾವು ದಿನನಿತ್ಯ ಬಳಸುತ್ತೇವೆ. ಅನೇಕ ಗಣಕ ಸಂಬಂಧೀ ವಸ್ತುಗಳಿವೆ, ಇವುಗಳ ಬಳಕೆ ಆನಂದದಾಯಕವಾದದ್ದು. ನಾವು ವಸ್ತುಗಳ ಬಗೆಗೆ ಮಾತನಾಡುವಾಗ ಒಂದು ಇನ್ನೊಂದಕ್ಕೆ ಸ್ವಯಂಚಾಲಿತವಾಗಿ ಸಂಬಂಧಿಸಿದ್ದಾಗಿದೆ ಮತ್ತು ಅದೇ ನಮ್ಮ ಭಾವ-ಭಂಗಿಗಳು. ನಾವು ಇವುಗಳನ್ನು ಹೇಗೆ ಬಳಸುತ್ತೇವೆ, ನಾವು ಇವುಗಳನ್ನು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಬಳಸುವುದು ಹೇಗೆ? ನಾವು ಭಾವ ಭಂಗಿಗಳನ್ನು ಇವುಗಳ ಸಂವಹನದಲ್ಲಿ ಮಾತ್ರ ಬಳಸುವುದಲ್ಲ, ನಾವು ಇವುಗಳನ್ನು ಇನ್ನೊಬ್ಬರೊಂದಿಗೆ ಸಂವಹನದ ಸಂದರ್ಭದಲ್ಲೂ ಬಳಸುತ್ತೇವೆ. ನಮಸ್ಕರಿಸುವ ಭಂಗಿ, ಕೆಲವರನ್ನು ಗೌರವಿಸುವಾಗ ಅಥವಾ-- ಭಾರತದಲ್ಲಿ ನಾನು ಕ್ರಿಕೆಟ್ನ ಬಗೆಗೆ ಮಕ್ಕಳಿಗೆ ತಿಳಿಸಬೇಕೆಂದಿಲ್ಲ!! "ನಾಲ್ಕು ರನ್"ನ ಭಾವ-ಭಂಗಿ ಅವರಿಗೆ ತಿಳಿದಿದೆ. ಅದು ಅವರ ದಿನನಿತ್ಯದ ಬದುಕಿನಲ್ಲಿ ಕಲಿತದ್ದು
ಹಾಗಾಗಿ ನಾನು ಇದರಲ್ಲಿ ಆಸಕ್ತಿ ಹೆಚ್ಚಿಸಿಕೊಂಡೆ, ಮೊದಲಿನಿಂದಲೂ, ಅದು ಹೇಗೆ-- ನಮ್ಮ ಜ್ಞಾನವು ಹೇಗೆ ವಸ್ತುಗಳ ಜೊತೆಗಿನ ದಿನನಿತ್ಯದ ಸಂವಹನದಲ್ಲಿನ ಭಾವ ಭಂಗಿಗಳು ಮತ್ತು ನಾವು ಈ ವಸ್ತುಗಳನ್ನು ಹೇಗೆ ಬಳಸುತ್ತೇವೆ ಎಂಬ ಬಗ್ಗೆ, ಡಿಜಿಟಲ್ ವಿಶ್ವದಲ್ಲಿ ನಮ್ಮಲ್ಲಿ ಪರಸ್ಪರ ಸಂವಹನ ಮಾಡಬಹುದು ಕೀಬೋರ್ಡ್ ಮತ್ತು ಮೌಸ್ ಮಾತ್ರ ಬಳಸುವುದರಿಂದಲ್ಲ! ನಾನು ನನ್ನ ಗಣಕಯಂತ್ರವನ್ನು ಬಳಸದೆ ಇದನ್ನು ಮಾಡಬಹುದೇ? ಅದೇ ಕ್ರಮದಲ್ಲಿ ಭೌತಿಕ ವಿಶ್ವದೊಂದಿಗೆ ಸಂವಹನ ನಡೆಸಬಹುದೇ?
ಹಾಗಾಗಿ ಇದರ ಬಗೆಗಿನ ಹುಡುಕಾಟದಲ್ಲಿ ಎಂಟು ವರ್ಷಗಳ ಹಿಂದೆ ನನ್ನನ್ನು ತೊಡಗಿಸಿಕೊಂಡೆ, ಮತ್ತು ಇದಕ್ಕಾಗಿ ನಾನು ಮೌಸ್ ಒಂದನ್ನು ಮಾತ್ರ ಬಳಸಿದೆ ಗಣಕಯಂತ್ರ ಬಳಸಿದೆ ಅನ್ನೋದಕ್ಕಿಂತ, ನಿಜವಾಗಿ ಅದನ್ನು ತೆರೆದೆ. ಬಹಳಷ್ಟು ಜನಗಳಿಗೆ ತಿಳಿದಿರಬಹುದು ಹಿಂದೆ ನಾವು ಬಳಸುತ್ತಿದ್ದ ಮೌಸ್ನಲ್ಲಿ ಒಂದು ಬಾಲ್ ಇರುತ್ತಿತ್ತು, ಮತ್ತು ಅದರಲ್ಲಿ ಎರಡು ರೋಲರ್ಗಳು ಇರುತ್ತಿತ್ತು ಅದು ಗಣಕಯಂತ್ರವನ್ನು ಬಾಲ್ ಚಲಿಸುವಾಗ ನಿರ್ದೇಶಿಸುತ್ತಿತ್ತು ಹಾಗೂ ಮೌಸ್ ಚಲಿಸಿದಂತೆ ಅದು ವರ್ತಿಸುತ್ತಿತ್ತು ಹಾಗಾಗಿ, ನಾನು ಆ ಎರಡು ರೋಲರ್ಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ ನನಗೆ ಇನ್ನಷ್ಟು ರೋಲರ್ಗಳು ಬೇಕಾದ ಕಾರಣ ನನ್ನ ಗೆಳೆಯನ ಬಳಿಯಿಂದ ಮೌಸ್ ತಂದೆನು ಆದರೆ ಇನ್ನೂ ಹಿಂತಿರುಗಿಸಿಲ್ಲ! ಮತ್ತು ಈಗ ನನ್ನ ಬಳಿ ನಾಲ್ಕು ರೋಲರ್ಗಳು ಇವೆ. ಆಸಕ್ತಿದಾಯಕವಾದದ್ದೇನೆಂದರೆ, ನಾನು ಇದನ್ನು ಏನು ಮಾಡಿದೆ ಎಂಬುದು, ನಾನು ಮುಖ್ಯವಾಗಿ ಅದರಿಂದ ರೋಲರ್ಗಳನ್ನು ಹೊರತೆಗೆದೆ ಮತ್ತು ಅವುಗಳನ್ನು ಒಂದು ರೇಖೆಯಂತೆ ಜೋಡಿಸಿದೆ ಇದು ಕೆಲವು ತಂತಿಗಳನ್ನು ಮತ್ತು ಪುಲ್ಲೀ ಮತ್ತು ಕೆಲವು ಸುರುಳಿಗಳನ್ನು ಹೊಂದಿದೆ. ನಾನು ಇವುಗಳನ್ನು ಬಳಸಿ ಭಾವ ಭಂಗಿಗಳ ಜೊತೆಗೆ ಸಂಪರ್ಕ ಏರ್ಪಡಿಸುವ ಸಾಧನ ತಯಾರಿಸಿದೆ ಇದು ಮೂಲತಃ ಚಲನ ಸಂವೇದಿ ಸಾಧನ. ಕೇವಲ ಎರಡು ಡಾಲರ್ ಬೆಲೆಯದ್ದು! ಹಾಗೆ, ನಾನು ನನ್ನ ಭೌತಿಕ ಜಗತ್ತಿನಲ್ಲಿ ಯಾವುದನ್ನಾದರೂ ಚಲಿಸಿದರೆ ಅದು ಗಣಕ ವಿಶ್ವದಲ್ಲಿ ಪುನಃ ನಕಲಾಗುತ್ತದೆ! ಇದು ನಾನು ಎಂಟು ವರ್ಷಗಳ ಹಿಂದೆ ತಯಾರಿಸಿದ ಈ ಪುಟ್ಟ ಸಾಧನದಿಂದ. ಅಂದರೆ ಕ್ರಿ. ಶ. ೨೦೦೦ದಲ್ಲಿ.
ಏಕೆಂದರೆ ನಾನು ಎರಡು ವಿಶ್ವಗಳನ್ನು ಒಟ್ಟುಗೂಡಿಸಲು ಬಯಸಿದ್ದೆ, ನಾನು ಸ್ಟಿಕ್ಕಿ ಟಿಪ್ಪಣಿಗಳ ಬಗ್ಗೆ ಯೋಚಿಸಿದೆ. ನಾನು ಇದರ ಬಗ್ಗೆಯೂ ಯೋಚಿಸಿದೆ "ಏಕೆ ಇದನ್ನು ಅಂದರೆ ಸ್ಟಿಕ್ಕಿ ಟಿಪ್ಪಣಿಗಳನ್ನು ಭೌತಿಕ ಸ್ಪರ್ಶದಿಂದ ಗಣಕ ವಿಶ್ವಕ್ಕೆ ವರ್ಗಾಯಿಸಲು ಸಾಧ್ಯವಿಲ್ಲವೇ ಎಂದು. ಒಂದು ಸಂದೇಶವನ್ನು ನನ್ನ ತಾಯಿ ಸ್ಟಿಕ್ಕಿ ಟಿಪ್ಪಣಿಗಳನ್ನು ಬಳಸಿ ಬರೆದರೆ ಅದೂ ಕಾಗದದಲ್ಲಿ ಅದು ನನ್ನ ಜಂಗಮವಾಣಿಗೆ ಸಂದೇಶವಾಗಿ ಬರಬಹುದೇ? ಅಥವಾ ಸಭೆಯ ಬಗೆಗಿನ ಜ್ಞಾಪನ ನನ್ನ ಗಣಕ ಪಂಚಾಂಗ ಸ್ವಚಾಲಿತವಾಗಿ ವಿನಿಮಯವಾಗುವಂತೆ ಒಂದು ನಿಮ್ಮ ಕಾರ್ಯಗಳ ಪಟ್ಟಿಯು ನಿಮ್ಮೊಂದಿಗೆ ಗಣಕಕ್ಕೆ ವಿನಿಮಯವಾಗಬೇಕು. ಇಷ್ಟು ಮಾತ್ರವಲ್ಲ ಗಣಕ ವಿಶ್ವದೊಂದಿಗೆ ಹುಡುಕಬಹುದು ಸಹ ಅಥವಾ ನಿಮ್ಮ ಪ್ರಶ್ನೆಗಳಿಗೆ ಧ್ವನಿಯ ಮೂಲಕವೂ ಉತ್ತರ ಹುಡುಕಬಹುದು "ಡಾ|ಸ್ಮಿತ್ರವರ ವಿಳಾಸವೇನು?" ಮತ್ತು ಗಣಕ ಅದಕ್ಕೆ ಉತ್ತರಗಳನ್ನು ಹುಡುಕಿ ಮುದ್ರಿಸಿ ಕೊಡುತ್ತದೆ ಇದು ಈ ಕಾರಣದಿಂದ ಕಾಗದವನ್ನು ಕೊಟ್ಟು ಉತ್ತರ ಪಡಕೊಂಡಂತೆ ಕೇವಲ ಕಾಗದದಿಂದ ಮಾಡಿದಂತಹುದು.
ನನ್ನ ಇನ್ನೊಂದು ಸಂಶೋಧನೆಯಲ್ಲಿ, ಒಂದು ಮೂರು ಆಯಾಮಗಳಲ್ಲಿ ಬರೆಯುವ ಲೇಖನಿ ನಿರ್ಮಾಣದ ಬಗ್ಗೆ ಯೋಚಿಸಿದೆ. ಹಾಗಾಗಿ ಇದರಲ್ಲಿ ಯಶಸ್ವಿಯಾದೆ ಸಹ ಇದು ವಿನ್ಯಾಸಗಾರರಿಗೆ ಮತ್ತು ವಾಸ್ತುಶಿಲ್ಪಿಗಳಿಗೆ ಸಹಾಯಕವಾದುದಾಗಿದೆ ನಾನು ಕೇವಲ ಮೂರು ಆಯಾಮಗಳ ಬಗೆಗೆ ಮಾತ್ರ ಯೋಚಿಸಿದ್ದಲ್ಲ ಆದರೆ ಅವರು ಅದರ ಸಹಾಯದಿಂದ ಚಿತ್ರಿಸಬಹುದು ಸಹಾ ಹಾಗಾಗಿ ಇದು ಒಂದು ಅರ್ಥದಲ್ಲಿ ಬಹಳ ಅರ್ಥಗರ್ಭಿತವಾದುದು.
ಮತ್ತೆ ನಾನು ಯೋಚಿಸಿದೆ "ಗೂಗಲ್ ನಕಾಶೆ ತಯಾರಿ ಅಂತೆಯೇ ಭೌತಿಕ ವಿಶ್ವದ ನಕಾಶೆ. ನಾನು ಕೆಲವು ಪದಗಳನ್ನು ಬ್ರೌಸರ್ನಲ್ಲಿ ಟೈಪಿಸುವುದಕ್ಕಿಂತ ಆ ವಸ್ತುಗಳನ್ನು ಗಣಕದ ಮೇಲೆ ಇಡುವಂತಹುದು. ನಾನು ಒಂದು ಬೋರ್ಡಿಂಗ್ ಪಾಸ್ ಅನ್ನು ಗಣಕದ ಮೇಲಿಟ್ಟಾಗ ಅದು ವಿಮಾನ ಯಾವ ಗೇಟ್ನಲ್ಲಿ ಇದೆ ಎಂದು ಹೇಳುತ್ತದೆ. ಒಂದು ಕಾಫೀ ಕಪ್ನ್ನು ಮೇಲಿಟ್ಟರೆ ಇನ್ನಷ್ಟು ಎಲ್ಲಿ ಸಿಗುತ್ತದೆ ಎಂಬ ಬಗ್ಗೆ ಮಾಹಿತಿ ದೊರೆಯುತ್ತದೆ, ಅಥವಾ ನಿಮ್ಮ ಕಾಫೀ ಕಪ್ನ್ನು ಎಲ್ಲಿ ಎಸೆಯಬಹುದು ಎಂಬ ಮಾಹಿತಿಯೂ ಲಭ್ಯ.
ಇವೆಲ್ಲಾ ನನ್ನ ಹಿಂದಿನ ಕೆಲವು ಸಂಶೋಧನೆಗಳು. ಆದರೆ... ನನ್ನ ನಿಜವಾದ ಗುರಿ ಈ ಎರಡು ವಿಶ್ವಗಳನ್ನು ಕೊನೆಯಿಲ್ಲದೆ ಸೇರಿಸುವುದು. ಈ ಎಲ್ಲಾ ಪ್ರಯೋಗಗಳಲ್ಲಿ ಒಂದು ವಿಷಯವು ಸಾಮಾನ್ಯವಾದುದಾಗಿದೆ: ನಾನು ಭೌತಿಕ ವಿಶ್ವವನ್ನು ಡಿಜಿಟಲ್ ವಿಶ್ವದ ಒಂದು ಭಾಗವಾಗಿ ತರಲು ಪ್ರಯತ್ನಿಸುತ್ತಿದ್ದೆ. ನಾನು ಕೆಲವು ವಸ್ತುಗಳನ್ನು ಅವುಗಳ ಭಾಗಗಳನ್ನು ಈಗ ತೆಗೆದುಕೊಳ್ಳುತ್ತೇನೆ. ಅಥವಾ ನಮ್ಮ ನಿಜ ಜೀವನದ ಯಾವುದಾದರೂ ಅಂತರ್ಬೋಧ ಶಕ್ತಿ, ಮತ್ತು ಅವುಗಳನ್ನು ಗಣಕ ವಿಶ್ವಕ್ಕೆ ತರುವ ಬಗ್ಗೆ, ಏಕೆಂದರೆ ನಮ್ಮ ಗುರಿ ನಮ್ಮ ಲೆಕ್ಕಾಚಾರವನ್ನು ಇನ್ನಷ್ಟು ಅರ್ಥಗರ್ಭಿತವನ್ನಾಗಿಸುವುದು.
ಆದರೆ ಮತ್ತೆ ಅರಿವಾಯಿತು ನಾವು ಮನುಷ್ಯರು ನಿಜವಾಗಿ ಲೆಕ್ಕಾಚಾರದ ಬಗೆಗೆ ಆಸಕ್ತಿ ಬೆಳೆಸಿಕೊಂಡಿಲ್ಲ ಎಂಬುದು. ನಾವು ನಿಜವಾಗಿ ಮಾಹಿತಿಯ ಬಗ್ಗೆ ಮತ್ತು ಇತರ ವಸ್ತುಗಳ ಬಗೆಗೆ ಅರಿಯುವುದರ ಬಗ್ಗೆ ಆಸಕ್ತಿ ಹೊಂದಿದ್ದೇವೆ. ಮತ್ತು ನಮ್ಮ ಸುತ್ತ ಮುತ್ತಲಿನ ಕ್ರಿಯಾತ್ಮಕ ಚಲನಶೀಲ ವಸ್ತುಗಳ ಬಗೆಗೆ ತಿಳಿದುಕೊಳ್ಳಲು ಬಯಸಿದ್ದೇವೆ.
ಹಾಗಾಗಿ ನಾನು ಯೋಚಿಸಿದೆ ಕಳೆದ ವರ್ಷ- ಕಳೆದ ವರ್ಷದ ಪ್ರಾರಂಭದಲ್ಲಿ -- ನಾನು ಯೋಚಿಸಲಾರಂಭಿಸಿದೆ " ನಾನೇಕೆ ಇದರ ವ್ಯತಿರಿಕ್ತ ಹಾದಿಯಲ್ಲಿ ಇದನ್ನು ತಲುಪಬಾರದು" ಎಂದು ಬಹುಶಃ " ನಾನು ಗಣಕ ಲೋಕಕ್ಕೆ ಹೇಗೆ ಇದನ್ನು ಕೊಂಡೊಯ್ಯಬಹುದೆಂದು ಮತ್ತು ನನ್ನ ಭೌತಿಕ ವಿಶ್ವವನ್ನು ಹೇಗೆ ಗಣಕ ವಿಶ್ವದಲ್ಲಿ ಚಿತ್ರಿಸಬಹುದು?" ಎಂದು ಪಿಕ್ಸೆಲ್ಗಳು ಆಯತಾಕೃತಿಯಲ್ಲಿ ನಿರ್ಬಂಧಿಸಲ್ಪಟ್ಟಿವೆ, ಗಾತ್ರದಲ್ಲಿ ಹಿರಿದಾಗಿವೆ ಅವುಗಳು ನಮ್ಮ ಕಿಸೆಗೆ ಹೊಂದುವಂತಿರಬೇಕು. ಮತ್ತು ನಿರ್ಬಂಧಗಳನ್ನು ಏಕೆ ಕಿತ್ತೆಸೆಯಲು ಸಾಧ್ಯವಿಲ್ಲ ಎಂದು ಯೋಚಿಸಿ ಅದನ್ನು ದಿನ ನಿತ್ಯದ ಬಳಕೆಯತ್ತ ಪೂರೈಸಲು ನಾವು ಬೇರೆ ಭಾಷೆಯನ್ನು ಕಲಿಯುವ ಅವಶ್ಯಕತೆ ಇಲ್ಲದೆ ಈ ಪಿಕ್ಸೆಲ್ ಬಳಕೆ ಸಾಧ್ಯವೇ ಎಂದು ಯೋಚಿಸಿದೆ.
ಹಾಗಾಗಿ ಕನಸನ್ನು ನನಸಾಗಿಸಲು ನಾನು ಬಹಳ ದೊಡ್ಡ ಪ್ರೊಜೆಕ್ಟರ್ ಒಂದನ್ನು ತಲೆಯ ಮೇಲಿಟ್ಟುಕೊಳ್ಳುವ ಬಗೆಗೆ ಯೋಚಿಸಿದೆ. ಹಾಗಾಗಿ ನೀವು ಈಗ ಅರಿತಿರಬಹುದು ಇದನ್ನು ಏಕೆ ಓವರ್ ಹೆಡ್ ಪ್ರೊಜೆಕ್ಟರ್ ಎನ್ನುವರು ಎಂದು ಅಲ್ಲವೇ? ಆದರೆ ನಾನು ಬಹಳವಾಗಿ ಯೋಚಿಸಿದೆ, ನನ್ನ ಬೈಕ್ನ ಹೆಲ್ಮೆಟ್ ಯಾಕೆ ಬಳಸಬಾರದೆಂದು! ಅದನ್ನೇ ಒಂದಿಷ್ಟು ಸರಿಪಡಿಸಿ ನನ್ನ ಪ್ರೊಜೆಕ್ಟರ್ ಅದರ ಮೇಲೆ ಸರಿಯಾಗಿ ನಿಂತುಕೊಳ್ಳುವಂತೆ ಮಾಡಿದೆ. ಹಾಗಾಗಿ ಈಗ ನಾನು-- ನನ್ನ ಸುತ್ತ ಮುತ್ತಲಿನ ಜಗತ್ತನ್ನು ಡಿಜಿಟಲ್ ಜ್ಞಾನದ ಆಕರವಾಗಿ ಬಳಸಬಹುದು.
ಆದರೆ ಬಳಿಕ, ನನಗೆ ಬಳಿಕ ಅರಿವಾಯಿತು, ನಾನು ಪಿಕ್ಸೆಲ್ ಗಳ ಜೊತೆ ಮಾತನಾಡಬೇಕಿತ್ತು ಎಂದು. ಹಾಗಾಗಿ ಒಂದು ಸಣ್ಣ ಕೆಮೆರಾವನ್ನು ಅದರ ಮೇಲಿಟ್ಟೆ, ಅದು ಒಂದು ಅದ್ಭುತ ಗಣಕನೇತ್ರದಂತೆ ಕಾರ್ಯವೆಸಗಿತು. ಬಳಿಕ ನಾನು ಅದನ್ನು ಅಭಿವೃದ್ಧಿಪಡಿಸುವುದರತ್ತ ದಾಪುಗಾಲಿಟ್ಟೆ, ಈಗ ಗ್ರಾಹಕರು ಬಯಸುವ/ಬಳಸುವ ಪೆಂಡೆಂಟ್ ರೂಪದ ವಸ್ತು ಇದು, ಇದನ್ನು ನೀವು ಬಹಳಷ್ಟು ಜನ ಆರನೆಯ ಇಂದ್ರಿಯ ಎಂದೇ ಕರೆಯುತ್ತೀರಿ.
ಆದರೆ ಈ ತಂತ್ರಜ್ಞಾನದ ಹಿಂದಿನ ಅತ್ಯಂತ ಕುತೂಹಲಕಾರಿ ಅಂಶವೆಂದರೆ ಇದು ನಿಮ್ಮೊಂದಿಗೆ ಗಣಕ ವಿಶ್ವವನ್ನೇ ಕೊಂಡೊಯ್ಯುತ್ತದೆ. ನೀವೇಲ್ಲೇ ಚಲಿಸಿದರೂ. ನೀವು ನಿಮ್ಮ ಸುತ್ತಮುತ್ತಲಿನ ಯಾವುದೇ ಮೇಲ್ಮೈಯಲ್ಲಿ ಒಂದು ಮಾಧ್ಯಮವಾಗಿ ಇದನ್ನು ಬಳಸಬಹುದು. ಇದರ ಕೆಮೆರಾ ನಿಮ್ಮ ಭಂಗಿಗಳನ್ನು ಸೆರೆಹಿಡಿಯುತ್ತದೆ ನೀವು ನಿಮ್ಮ ಕೈಗಳಿಂದ ಏನು ಮಾಡುತ್ತಿದ್ದೀರಾ ಎಂಬುದನ್ನು ಗಮನಿಸಿ ಆ ಭಂಗಿಯನ್ನು ಅರ್ಥೈಸಿಕೊಳ್ಳುತ್ತದೆ. ಮತ್ತು ನಿಜವಾಗಿ ನೀವಿಲ್ಲಿ ಕೆಲವು ಬಣ್ಣದ ಮಾರ್ಕರ್ ಗಳನ್ನು ಗಮನಿಸುತ್ತಿದ್ದೀರಿ ಇದು ಈ ಸಾಧನದ ಮೊದಲ ಆವೃತ್ತಿಯಲ್ಲಿ ಬಳಸಿದ ತಂತ್ರಜ್ಞಾನ. ನಿಮ್ಮ ಸುತ್ತಲಿನ ಗೋಡೆಯಲ್ಲಿ ನೀವೀಗ ಚಿತ್ರಿಸಬಹುದು. ಗೋಡೆ ಕಂಡ ಕ್ಷಣ ಅಲ್ಲೇ ನಿಂತು ಚಿತ್ರಿಸಲು ಪ್ರಾರಂಭಿಸಬಹುದು. ಆದರೆ ಕೇವಲ ಒಂದು ಬೆರಳಿನಿಂದ ಇದು ಸಾಧ್ಯವೇ ಎನ್ನಬೇಕಿಲ್ಲ, ಇಲ್ಲಿ ನಿಮ್ಮ ಎರಡೂ ಕೈಗಳನ್ನು ಬಳಸುವ ಸ್ವಾತಂತ್ರ್ಯ ನೀಡಲಾಗಿದೆ!! ಹಾಗಾಗಿ ಚಿತ್ರವನ್ನು ದೊಡ್ಡ-ಸಣ್ಣ ಮಾಡಲು ನಿಮ್ಮೆರಡೂ ಕೈಗಳನ್ನು ಬಳಸಬಹುದು ಕೇವಲ ಚಿತ್ರದ ಮೇಲೆ ಚಿವುಟುವುದರಿಂದಲೂ ಇದು ಸಾಧ್ಯ! ನಿಮ್ಮ ಛಾಯಾಚಿತ್ರ ಗ್ರಾಹಕ (ಕೆಮೆರಾ)ವು ನಿಜವಾಗಿ-- ಎಲ್ಲಾ ಚಿತ್ರಗಳನ್ನು ಪಡೆದುಕೊಂಡು -- ಅದನ್ನು ಕೂಲಂಕುಷವಾಗಿ ಬಣ್ಣ ಸಹಿತವಾಗಿ ಗುರುತಿಸಿ ಸಣ್ಣ ಪುಟ್ಟ ಲೆಕ್ಕಾಚಾರಗಳನ್ನು ತನ್ನೊಳಗೆ ಮುಗಿಸುತ್ತದೆ. ಆದರೆ ತಾಂತ್ರಿಕವಾಗಿ ಇದು ಕ್ಲಿಷ್ಟಕರವಾದದ್ದು, ಆದರೆ ಇದು ಕೊಡುವ ಉತ್ಪಾದನೆಯು ಬಳಕೆಗೆ ಬಹಳ ಯೋಗ್ಯವಾದುದಾಗಿದೆ.
ಆದರೆ ನಾನು ಬಹಳ ಹರ್ಷದಿಂದ ಹೇಳುವುದೇನೆಂದರೆ ನೀವಿದನ್ನು ಹೊರಾಂಗಣದಲ್ಲೂ ಬಳಸಬಹುದು. ನಿಮ್ಮ ಕೆಮೆರಾವನ್ನು ಕಿಸೆಯಿಂದ ಹೊರತೆಗೆವ ಬದಲು, ನೀವು ಛಾಯಾಚಿತ್ರ ತೆಗೆಯುವಂತೆ ನಟಿಸಿದರಾಯಿತು, ನಿಮಗಾಗಿ ಇದೊಂದು ಛಾಯಾಚಿತ್ರವನ್ನು ಕೊಡುತ್ತದೆ.
ಬಳಿಕ ನಾನು ಎಲ್ಲಾದರೊಂದು ಗೋಡೆ ಹುಡುಕಿ, ಛಾಯಾಚಿತ್ರಗಳನ್ನು ಹುಡುಕಲಾರಂಭಿಸುತ್ತೇನೆ ಅಥವಾ ನನಗೆ ಆ ಚಿತ್ರಗಳನ್ನು ಬದಲಿಸ ಬೇಕೆಂದರೆ, ಅಥವಾ ಗೆಳೆಯನಿಗೆ ಮಿಂಚಂಚೆಯ ಮೂಲಕ ಕಳಿಸಬೇಕೆಂದರೆ ಅದೂ ಸಾಧ್ಯ! ಹಾಗಾಗಿ ನಾವಲ್ಲಿ ಒಂದು ಹೊಸ ಶಕೆಯನ್ನು ನೋಡುತ್ತೇವೆ ಗಣಕೀಕರಣವೂ ನಿಜವಾಗಿ ಭೌತಿಕ ವಿಶ್ವದೊಂದಿಗೆ ವಿಲೀನವಾಗಬೇಕು. ಅಥವಾ ನಿಮಗೆ ಯಾವ ಮೇಲ್ಮೈಯೂ ಸಿಗಲಿಲ್ಲವೆಂದಾದಲ್ಲಿ, ನಿಮ್ಮ ಅಂಗೈಯನ್ನೆ ಬಳಸಿ ಸರಳ ಕಾರ್ಯಗಳನ್ನು ಮಾಡಬಹುದು. ಇಲ್ಲಿ ನಾನು ಒಂದು ದೂರವಾಣಿ ಸಂಖ್ಯೆಗೆ ನನ್ನ ಅಂಗೈ ಬಳಸಿ ಕರೆ ಮಾಡುತ್ತೇನೆ ನಿಮ್ಮ ಕೆಮೆರಾವು ಕೇವಲ ನಿಮ್ಮ ಕೈಯ ಚಲನೆಯನ್ನು ಅರ್ಥ ಮಾಡಿಕೊಳ್ಳುವುದಲ್ಲದೆ ಬಹಳ ಆಶ್ಚರ್ಯಜನಕವಾಗಿ, ನೀವು ನಿಮ್ಮ ಕೈಯಲ್ಲಿ ಏನು ಹಿಡಿದಿರುವಿರಿ ಎಂಬುದನ್ನೂ ಗುರುತಿಸುತ್ತದೆ.
ಇಲ್ಲಿ ಈ ಉದಾಹರಣೆಯನ್ನು ಗಮನಿಸಿ ನಾವಿಲ್ಲಿ ಪುಸ್ತಕದ ಹೊರಪುಟವನ್ನು ಹೊಂದಿಸುತ್ತಿದ್ದೇವೆ ಇದು ಹಲವಾರು ಸಾವಿರ ಅಥವಾ ಮಿಲಿಯನ್ ಪುಸ್ತಕಗಳನ್ನು ಅಂತರ್ಜಾಲದಿಂದ ಹುಡುಕಿ, ಇದಾವ ಪುಸ್ತಕ ಎಂಬುದನ್ನು ಪತ್ತೆ ಹಚ್ಚುತ್ತದೆ. ಒಮ್ಮೆ ಇದು ಈ ಮಾಹಿತಿಯನ್ನು ಪತ್ತೆ ಹಚ್ಚಿದರೆ, ಇದು ಪುಸ್ತಕದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ವಿಮರ್ಶೆಯನ್ನು ಹುಡುಕುತ್ತದೆ, ಒಂದುವೇಳೆ ನ್ಯೂಯಾರ್ಕ್ ಟೈಮ್ಸ್ ಅದರ ಧ್ವನಿ ವಿಮರ್ಶೆ ಹೊಂದಿದ್ದಲ್ಲಿ, ನೀವು ಪುಸ್ತಕದ ಮೂಲಕ ಅದನ್ನು ಆಲಿಸಬಹುದು, ನೇರವಾಗಿ ನಿಮ್ಮ ಕಿವಿಗಳಿಂದ ಮನಮುಟ್ಟುವಂತೆ! ("ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಸಿದ್ಧ ಚರ್ಚೆ ...")
ಇದು ಒಬಾಮಾ ಅವರ ಕಳೆದ ವಾರದ ಎಂ ಐ ಟಿಯ ಭೇಟಿ. (".... ಮತ್ತು ನಾನು ಎಂ ಐ ಟಿಯ ಅತ್ಯುತ್ತಮ ಅವಕಾಶಕ್ಕೆ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ....") ನಾನು ಇಲ್ಲಿ ಒಂದು ಈ ಮಾತುಕತೆಯ ನೇರ ಪ್ರಸಾರದ ಚಲನಚಿತ್ರವನ್ನು ಹೊರಗಡೆ ಅದೂ ಒಂದು ವಾರ್ತಾಪತ್ರಿಕೆಯ ಹೊರಭಾಗದಲ್ಲಿ ನೋಡುತ್ತಿದ್ದೇನೆ. ನಿಮ್ಮ ವಾರ್ತಾ ಪತ್ರಿಕೆಯು ಹವಾಮಾನದ ಬಗ್ಗೆ ನೇರ ಮಾಹಿತಿಯನ್ನು ನಿಮಗೆ ಹಂಚಬಹುದು ಅತ್ಯುತ್ತಮ ಮಾಹಿತಿಯನ್ನು ನಿಮ್ಮ ಗಣಕ ಯಂತ್ರ ನಿಮಗೆ ನೀಡುವಂತೆ ಹಾಗಾಗಲು ಕಾರಣ?
ನಾನು ಹಿಂತಿರುಗುವಾಗ, ನನ್ನ ಬೋರ್ಡಿಂಗ್ ಪಾಸ್ ಬಳಸಬೇಕಾಗುತ್ತದೆ ನನ್ನ ವಿಮಾನವು ಎಷ್ಟು ತಡವಾಗಿ ಹೊರಡುತ್ತದೆ ಎಂಬುದನ್ನೂ ತಿಳಿಯಲು, ಏಕೆಂದರೆ ಆ ಅಮೂಲ್ಯವಾದ ಸಮಯದಲ್ಲಿ, ನನ್ನ ಐಫೋನ್ ಅನ್ನು ಬಳಸುವ ಕಾತರವಿರಬಹುದು!, ಅಥವಾ ಒಂದು ನಿರ್ದಿಷ್ಟವಾದ ಚಿಹ್ನೆಯನ್ನು ಪರೀಕ್ಷಿಸುವ ಅವಸರವಿರಬಹುದು. ನಾನು ಈ ತಂತ್ರಜ್ಞಾನವನ್ನು ಈ ರೀತಿಯಲ್ಲಿ ಬಳಸಲಾಗುವುದಿಲ್ಲ ಭಾವಿಸುತ್ತೇನೆ -- ಸರಿ ತಾನೇ? (ನಗು). ಇದು ಜನರೊಂದಿಗೆ ಸಂವಹನ ನಡೆಸುವ ವಿಧಾನವನ್ನು ಮಾತ್ರವಲ್ಲದೇ, ಭೌತಿಕ ಜಗತ್ತಿನೊಂದಿಗೆ ವ್ಯವಹರಿಸುವ ವಿಧಾನವನ್ನು ಬದಲಿಸಿದೆ. ಬಹಳ ವಿನೋದದ ವಿಷಯವೆಂದರೆ ನನ್ನ ಬೋಸ್ಟನ್ ಮೆಟ್ರೋ ಪ್ರಯಾಣ, ನಾನು ರೈಲಿನ ಒಳಭಾಗದಲ್ಲಿ ಪಾಂಗ್ ಆಟವಾಡುತ್ತಿದ್ದೆ ಅದೂ ನೆಲದಲ್ಲಿ ಸರಿ ತಾನೇ? (ನಗು) ಮತ್ತು ನಾನು ಯೋಚಿಸಿದೆ ಊಹನೆಗೂ ಒಂದು ಮಿತಿಯಿದೆಯೇ? ನೀವು ಏನನ್ನು ಯೋಚಿಸುತ್ತೀರೋ ಅದನ್ನು ಮಾಡಲು ಸಾಧ್ಯವೇ ಎಂದು. ಆದರೆ ಇಂತಹ ತಂತ್ರಜ್ಞಾನ ಎಲ್ಲವನ್ನೂ ನಿಜ ಜೀವನದಲ್ಲಿ ಸಾಧ್ಯವಾಗಿಸುತ್ತದೆ.
ಆದರೂ ನೀವು ವಾದಿಸಬಹುದು, ಅದು ಏನೆಂದರೆ ಎಲ್ಲ ಕಾರ್ಯಗಳು ಮುಗಿಸಲು ಚಲನೆಯಿಂದ ಸಾಧ್ಯವಿಲ್ಲ ಎಂದು. ಉದಾಹರಣೆಗೆ ಲೆಕ್ಕಾಚಾರಗಳು, ಲೇಖನದ ಸಂಪಾದನೆ ಇತ್ಯಾದಿ ಮತ್ತು ಇವುಗಳನ್ನು ಮಾಡುವ ವಿಧಾನ ಹೇಗೆ ಎಂದು. ಆದರೆ ನೀವು ಬಹಳ ಆಶ್ಚರ್ಯ ಪಡುವ ಮುಂದಿನ ಪೀಳಿಗೆಯ ಟಾಬ್ಲೆಟ್ ಗಣಕಯಂತ್ರಗಳ ಬಗ್ಗೆ ಅದಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅದನ್ನೇ ಕಾಡು ಕುಳಿತುಕೊಳ್ಳುವುದಕ್ಕಿಂತ, ನಾನು ನನ್ನದೇ ಆದ ಕಾಗದದಿಂದಲೇ ಬಳಸಲು ಸಾಧ್ಯವಾದ ಟಾಬ್ಲೆಟ್ ಗಣಕಯಂತ್ರ ತಯಾರಿಸಿದೆ. ನಾನು ಇಲ್ಲಿ ಕೆಮೆರಾವನ್ನು ಕಳಚಿದೆ-- ಎಲ್ಲ ವೆಬ್ ಕೆಮೆರಾಗಳಲ್ಲಿ ಧ್ವನಿ ಗ್ರಾಹಕವು ಅಡಕವಾಗಿದೆ. ಆ ಧ್ವನಿ ಗ್ರಾಹಕವನ್ನು ನಾನು ಬೇರ್ಪಡಿಸಿದೆ, ಮತ್ತು ನಾನು ಅದನ್ನು-- ಕಾಗದಕ್ಕೆ ಕ್ಲಿಪ್ನಂತೆ ಅಳವಡಿಸಿದೆ. ಮತ್ತು ಕಾಗದ ಅಂದರೆ ಸಾಧಾರಣವಾಗಿ ನಿತ್ಯ ಜೀವನದಲ್ಲಿ ಬಳಸುವಂತಹುದೇ ಆಗಿತ್ತು. ನಾನು ಈಗ ಕಾಗದಲ್ಲಿ ಸ್ಪರ್ಶದಿಂದ ಮೂಡಿಸಿದ ಧ್ವನಿ ಅದೇ ಅನುಕ್ರಮದಲ್ಲಿ ನನಗೆ ಅರಿವಾಗುತ್ತಿತ್ತು. ಆದರೆ ಕೆಮೆರಾವು ನನ್ನ ಬೆರಳನ್ನು ಅನುಸರಿಸುತ್ತಿತ್ತು.
ನೀವು ಚಲನಚಿತ್ರವನ್ನು ವೀಕ್ಷಿಸಬಹುದು. (ಶುಭ ಅಪರಾಹ್ನ. ನನ್ನ ಹೆಸರು ರಸೆಲ್...... ಮತ್ತು ಗುಂಪು ೫೪ರಲ್ಲಿ ಪಾಳುಭೂಮಿ ಅನ್ವೇಷಕ.)
ಮತ್ತು ನೀವು ಆಟವನ್ನೂ ಆಡಬಹುದು. (ಕಾರ್ ಯಂತ್ರ) ಇಲ್ಲಿ ಕೆಮೆರಾವು ನೀವು ಹೇಗೆ ಕಾಗದವನ್ನು ಹಿಡಿದುಕೊಂಡಿದ್ದೀರಿ ಎಂಬುದನ್ನೂ ಗಮನಿಸುತ್ತದೆ ಮತ್ತು ನೀವು ಕಾರ್ ರೇಸ್ ಆಡುವಂತೆ ಮಾಡುತ್ತದೆ! (ಚಪ್ಪಾಳೆ)
ನೀವು ಬಹಳಷ್ಟು ಜನ ಅಂತರ್ಜಾಲ ಜಾಲಾಟದ ಬಗ್ಗೆ ಯೋಚಿಸಿರಬಹುದು, ಇದೂ ಸಾಧ್ಯ. ನೀವು ಅಂತರ್ಜಾಲದ ಯಾವುದೇ ಜಾಲತಾಣವನ್ನು ಜಾಲಾಡಬಹುದು. ಮತ್ತು ಸಣ್ಣ ಕಾಗದದ ಚೂರಿನೊಂದಿಗೆ ಯಾವುದೇ ಲೆಕ್ಕಾಚಾರವನ್ನು ಸಹ ಮಾಡಬಹುದು. ನಿಮಗೆ ಅವಶ್ಯಕತೆ ಬಿದ್ದಾಗಲೆಲ್ಲಾ! ಮತ್ತೂ ಆಶ್ಚರ್ಯದಾಯಕವಾಗಿ, ನಾನು ಇದನ್ನು ಮತ್ತಷ್ಟು ಚಲನಶೀಲವಾಗಿಸುವುದರಲ್ಲಿ ಆಸಕ್ತಿ ಬೆಳೆಸಿದೆ. ನಾನು ನನ್ನ ಮೇಜಿನ ಕಾಗದ ಬಳಸುವಾಗ ಮಾಹಿತಿಯನ್ನು ಚಿವುಟಿ ನನ್ನ ಗಣಕಯಂತ್ರಕ್ಕೆ ಹಿಂದಿರುಗಿಸಬಹುದು ಹಾಗೆಯೇ ನನ್ನ ಗಣಕಯಂತ್ರವನ್ನು ಸಹ.
ಕೇವಲ ಗಣಕಯಂತ್ರಗಳು ಮಾತ್ರ ಏಕೆ? ನಾವು ಕಾಗದದ ಚೂರುಗಳಲ್ಲೂ ಆಟವಾಡಬಹುದು!! ನಿಜಕ್ಕೂ ಕಾಗದದ ಚೂರುಗಳೊಂದಿಗಿನ ಆಟ ಮಜಾ ನೀಡುತ್ತದೆ!! ಇಲ್ಲಿ ನಾನೊಂದು ಮಾಹಿತಿಯ ತುಣುಕೊಂದನ್ನು ಆರಿಸಿದ್ದೇನೆ ಅದನ್ನು ನನ್ನ ಆಯ್ಕೆಯ ಇನ್ನೊಂದು ಮಾಹಿತಿಯ ತುಣುಕಿನ ಮೇಲೆ ಇರಿಸುತ್ತೇನೆ-- ಅಂದರೆ ಇಲ್ಲಿ ಮಾಹಿತಿಯ ಸಂಪಾದನೆ ಆಗುತ್ತಿದೆ ಅದನ್ನೇ ನಾನು ಇಲ್ಲಿ ಮಾಡುತ್ತಿದ್ದೇನೆ. ಸರಿ, ಮತ್ತು ನಾನೀಗ ಓಕೆ, ಇದು ಬಹಳ ಚೆನ್ನಾಗಿದೆ ಇದರ ಮುದ್ರಣ ಮಾಡಬೇಕು ಎಂದೆನಿಸಿದೆ. ಹಾಗೆ ಮಾಡಿದೆ ಅದರ ಪ್ರತಿ ಇದೀಗ ನೀವು ನೋಡುತ್ತಿರುವಿರಿ-- ಇಲ್ಲಿ ಕೆಲಸ ಬಹಳ ಸುಲಭವಾಗಿ ಮುಗಿಯಿತು, ಮತ್ತು ಬಳಸಿದ ವಿಧಾನವೂ ಅಷ್ಟೇ ಸರಳ. ಆದರೆ ಸುಮಾರು ೨೦ ವರ್ಷಗಳ ಹಿಂದೆ, ಈಗ ನಾವು ಈ ರೀತಿ ಎರಡು ವಿಭಿನ್ನ ಲೋಕಗಳ ನಡುವೆ ಕೊಂಡಿ ಬೆಳೆಸುವ ಮೊದಲು ಇದು ಕ್ಲಿಷ್ಟಕರವಾಗಿತ್ತು.
ಹಾಗಾಗಿ ನಾನು ಯೋಚಿಸಿದೆ, ಈ ದಿನ ನಿತ್ಯದ ಮಾಹಿತಿಯನ್ನು ಒಟ್ಟುಗೂಡಿಸುವುದರ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳುವುದರ ಬಗ್ಗೆ ಇದು ನಿಜಕ್ಕೂ ಈ ಭೌತಿಕ ಡಿಜಿಟಲ್ ವಿಶ್ವಗಳ ನಡುವಿನ ಬಿಕ್ಕಟ್ಟನ್ನು ನಿವಾರಿಸುವುದು ಮಾತ್ರವಲ್ಲ, ಇವುಗಳ ನಡುವಿನ ಅಂತರವನ್ನು ನಿವಾರಿಸುತ್ತದೆ, ಆದರೆ ಇದು ನಮಗೆ ಸ್ವಲ್ಪ ಮಟ್ಟಿನಲ್ಲಿ ಸಹಾಯಕವೂ ಆಗಿದೆ. ಮಾನವರಾಗಿಯೇ ಉಳಿದುಕೊಳ್ಳಲು, ಮತ್ತು ಭೌತಿಕ ವಿಶ್ವದೊಂದಿಗಿನ ಸಂಪರ್ಕ ಹೆಚ್ಚಿಸಿಕೊಂಡು. ಇನ್ನೊಂದು ಯಂತ್ರದ ಮುಂದಿರುವಾಗ ಮಾನವರನ್ನು ಯಂತ್ರಗಳನ್ನಾಗಿ ಪರಿವರ್ತಿಸುವುದನ್ನು ತಡೆಯುವುದರಲ್ಲೂ ಸಹಕಾರಿ.
ಕ್ರಿಸ್ ಆಂಡರ್ಸನ್: ಹಾಗಾಗಿ ಪ್ರಣವ್, ಮೊದಲಿಗೆ ನೀವೊಬ್ಬ ಪ್ರತಿಭಾನ್ವಿತ ಎಂದು ಹೇಳಬಯಸುತ್ತೇನೆ. ಇದು ನಿಜಕ್ಕೂ ನಿಜಕ್ಕೂ ಅಮೂಲ್ಯವಾದುದು. ನೀವು ಇದರಿಂದ ಏನು ಮಾಡಬಯಸುತ್ತಿರಿ? ಯಾವುದಾದರೂ ಕಂಪನಿ ತೆರೆಯುವ ಯೋಚನೆ ಇದೆಯೇ? ಅಥವಾ ಒಬ್ಬ ಸಂಶೋಧಕನಾಗಿಯೇ ಉಳಿಯಬಯಸುತ್ತೀರಾ?
ಪ್ರಣವ್: ಈಗಾಗಲೇ ಹಲವು ಕಂಪನಿಗಳು-- ನಿಜವಾಗಿ ಸಹಕರಿಸಿದ ಮೀಡಿಯಾ ಲಾಬ್-- ಇದನ್ನು ಇನ್ನೊಂದು ದಿಕ್ಕಿನಲ್ಲಿ ಕೊಂಡೊಯ್ಯುವುದರತ್ತ ಯೋಚಿಸುತ್ತಿವೆ. ಮೊಬೈಲ್ ದೂರವಾಣಿ ಸೇವಾದಾರರು ಇದನ್ನು ಭಾರತದ ಸ್ವಯಂ ಸೇವಾ ಸಂಸ್ಥೆಗಳು ಯೋಚಿಸಿರುವ ವಿಧಾನದ ಬದಲು ಲಾಭದಾಯಕವಾಗುವತ್ತ ಚಿಂತಿಸುತ್ತಿವೆ. ಯಾರು ಆಗ ಇದನ್ನು 'ಆರನೆಯ ಇಂದ್ರಿಯ' ಮಾಡುವುದರತ್ತ ಯೋಚಿಸುತ್ತಾರೆ? ನಾವು ಪಂಚೇಂದ್ರಿಯಗಳನ್ನು ಹೊಂದಿದ್ದು ಅವುಗಳಿಲ್ಲದ ಜನರಿಗೆ ಅಂದರೆ ಯಾರಿಗೆ ಮಾತನಾಡಲು ಅಸಾಧ್ಯವೋ, ಈ ತಂತ್ರಜ್ಞಾನ ಅವರಿಗೆ ಹೊಸ ವಿಧಾನದಲ್ಲಿ ಮಾತನಾಡುವ ಸ್ವಾತಂತ್ರ್ಯ ಕೊಡುತ್ತದೆ. ಅದು ಧ್ವನಿವರ್ಧಕದ ಮೂಲಕವಾದರೂ.
ಕ್ರಿಸ್: ನಿಮ್ಮ ಸ್ವಂತ ಯೋಚನೆಗಳೇನು? ಎಂ ಐ ಟಿಯಲ್ಲಿ ಉಳಿಯುವಿರೋ ಅಥವಾ ಈ ತಂತ್ರಜ್ಞಾನದ ಮೂಲಕ ಬೇರೇನನ್ನಾದರೂ ಮಾಡಬಯಸುವಿರೋ?
ಪ್ರಣವ್: ನಾನು ಇದನ್ನು ಜನ ಸಾಮಾನ್ಯರಿಗೆ ತಲುಪಿಸಬಯಸುತ್ತೇನೆ ಯಾರು ಬೇಕಾದರೂ ಅವರದೇ ಆದ ಆರನೆಯ ಇಂದ್ರಿಯ ತಯಾರಿಸುವಂತೆ, ಏಕೆಂದರೆ ಇದರ ಯಂತ್ರಾಂಶಗಳ ತಯಾರಿ ಕ್ಲಿಷ್ಟಕರವಲ್ಲ ಅಥವಾ ಸ್ವತಂತ್ರವಾಗಿ ತಯಾರಿಸಲು ಅಡಚಣೆಯೂ ಇಲ್ಲ. ನಾವು ಇದಕ್ಕಾಗಿ ಈ ತಂತ್ರಾಂಶವನ್ನು ಉಚಿತವಾಗಿ ನೀಡಬಯಸುತ್ತೇವೆ, ಇದು ಬಹುಶಃ ಬರುವ ತಿಂಗಳಿಂದ ಲಭ್ಯವಾಗಬಹುದು.
ಕ್ರಿಸ್: ನೀವು ಭಾರತಕ್ಕೆ ಈ ಯೋಜನೆಯೊಂದಿಗೆ ಹಿಂತಿರುಗಲು ಬಯಸಿದ್ದೀರಾ?
ಕ್ರಿಸ್: ನಿಮ್ಮ ಎಂ ಐ ಟಿಯ ಮುಂದಿನ ಯೋಜನೆಗಳು? ಮತ್ತು ಭಾರತ? ನೀವು ಇದನ್ನು ಹೇಗೆ ಹೊಂದಿಸುತ್ತೀರಿ?
ಪ್ರಣವ್: ಇಲ್ಲದಕ್ಕೆ ಬೇಕಾದಷ್ಟು ಶಕ್ತಿಯಿದೆ, ಮತ್ತು ಕಲಿಯುವುದಕ್ಕೂ ಇದೆ. ನೀವು ಇಲ್ಲಿ ವೀಕ್ಷಿಸಿದ ಎಲ್ಲ ಕೆಲಸಗಳನ್ನು ನಾನು ಭಾರತದಲ್ಲಿಯೇ ಕಲಿತೆ. ಮತ್ತು ಹಣಕಾಸಿನ ವಿಚಾರದ ಬಗೆಗೆ ಭಾರತವೆ ಉತ್ತಮ! ಈ ಮಾದರಿ ಸುಮಾರು $೩೦೦ ಬೆಲೆ ಬಾಳುವಂತಹುದು. ಸುಮಾರು $೨೦,೦೦೦ರಷ್ಟು ಬೆಲೆಬಾಳುವ ಮೇಜು ಇತ್ಯಾದಿ. ಅಥವಾ ಸುಮಾರು $೨ರಷ್ಟು ಬೆಲೆಬಾಳುವ ಮೌಸ್ ಇತ್ಯಾದಿ ನಾವು ಇದನ್ನು ತಯಾರಿಸುವಾಗ ಸುಮಾರು $೫೦೦೦ದಷ್ಟು ಮೌಲ್ಯ ಹೊಂದಿತ್ತು. ಹಾಗಾಗಿ ಒಂದು ಸಮ್ಮೇಳನದಲ್ಲಿ ನಾವಿದನ್ನು ನಮ್ಮ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂರಿಗೆ ತೋರಿಸಿದೆವು, ಆಗ ಅವರು "ನಾವಿದನ್ನು ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದಲ್ಲಿ ಬಳಸೋಣ" ಎಂದು ಹೇಳಿ ಪ್ರೋತ್ಸಾಹಿಸಿದರು. ಹಾಗೆ ನಾನು ಇದನ್ನು ಜನ ಸಾಮಾನ್ಯರಿಗೆ ತಲುಪಿಸುವುದರತ್ತ ಕಾರ್ಯಪ್ರವೃತ್ತನಾದೆ ಇದನ್ನು ಕೇವಲ ಪ್ರಯೋಗಾಲಯದಲ್ಲಿ ಇರಿಸುವುದಕ್ಕಿಂತ ಪ್ರಯೋಜನವಾಗುತ್ತದೆ ಎಂದು ಭಾವಿಸಿದೆ.
ಸಿಎ: ನಾವು TEDಯಲ್ಲಿ ಸಂದರ್ಶಿಸಿದ ವ್ಯಕ್ತಿಗಳ ಆಧಾರದಲ್ಲಿ ನೀವು ವಿಶ್ವದ ಅತ್ಯದ್ಭುತ ಸಂಶೋಧಕರಲ್ಲೊಬ್ಬರು ಎಂಬುದನ್ನು ನಾನು ಹೇಳಬಯಸುತ್ತೇನೆ. ನೀವು TEDಗೆ ಬಂದಿರುವುದು ನಿಜಕ್ಕೂ ಸಂತಸದಾಯಕವಾದದ್ದು. ಕೃತಜ್ಞತೆಗಳು ಅದು ನಿಜಕ್ಕೂ ಅತ್ಯದ್ಭುತ.
You can share this video by copying this HTML to your clipboard and pasting into your blog or web page. This video will play with subtitles.
You either have JavaScript turned off or have an old version of the Adobe Flash Player. To view this rating widget you
need to get the latest Flash player.
If your browser allows only "trusted sites" to execute Javascript, you should add the "googleapis.com" domain to your whitelist to allow our Flash detection to work properly.
Got an idea, question, or debate inspired by this talk? Start a TED Conversation.
TED ಭಾರತ ಮೈಸೂರಿನಲ್ಲಿ ನಡೆಸಿದ ಆರನೆಯ ಇಂದ್ರಿಯದ ಬಗೆಗಿನ ಪ್ರಣವ್ ಮಿಸ್ಟ್ರಿಯವರೊಂದಿಗಿನ ಮಾತುಕತೆ ಭೌತಿಕ ವಿಶ್ವ ಹಾಗೂ ಯಾಂತ್ರಿಕ ವಿಶ್ವದೊಂದಿಗಿನ ಸಂವಹನ ಹಾಗೂ ಸಂಗಣಕದೊಂದಿಗೆ ವರ್ತನೆಯ ಕುರಿತು ತಿಳಿಸುತ್ತದೆ. ಇದರಲ್ಲಿ ಪ್ರಣವ್ ಈ ತಂತ್ರಜ್ಞಾನವನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಮುಕ್ತ ತಂತ್ರಾಂಶವಾಗಿಸುವ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
Pranav Mistry is the inventor of SixthSense, a wearable device that enables new interactions between the real world and the world of data. Full bio »
Translated into Kannada by Raghu Rama
Reviewed by Abhishek Baikadi
Comments? Please email the translators above.
08:42 Posted: Mar 2009
Views 6,981,383 | Comments 672
Just follow the guidelines outlined under our Creative Commons license.
This comment will be attributed to . Not ? Sign Out.