ನೀವು ಇಲ್ಲಿದ್ದೀರೆಂದರೆ -- ನನಗೆ ಸಂತೋಷವಾಗುತ್ತದೆ -- ನೀವೆಲ್ಲ ಕೇಳಿದ್ದೀರ ಸಂಪೋಷಣಾ ಅಭಿವೃದ್ಧಿ ಹೇಗೆ ನಮ್ಮನ್ನು ನಮ್ಮಿಂದಲೇ ರಕ್ಷಿಸುತ್ತದೆ ಎಂದು. ಆದರೆ, ನಾವು TED ಯಲ್ಲಿಲ್ಲ, ನಮಗೆ ಆಗಾಗ ಹೇಳಲಾಗುತ್ತದೆ ಸಂಪೋಷಣಾ ನೀತಿ ಕಾರ್ಯಸೂಚಿ ಸಾಧ್ಯವಾಗುವುದಿಲ್ಲ, ಅದರಲ್ಲೂ, ನ್ಯೂಯಾರ್ಕ್ನಂತಹ ದೊಡ್ಡ ಪಟ್ಟಣ ಪ್ರದೇಶಗಳಲ್ಲಿ. ಮತ್ತು ಹೀಗಾಗಲು ಕಾರಣ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವಂಥ ಅಧಿಕಾರ ಉಳ್ಳವರಿಗೆ, ನಿಜವಾಗಿಯೂ ತಾವು ಸಂಕಷ್ಟದಲ್ಲಿದ್ದೇವೆಂದು ಅನ್ನಿಸುವುದಿಲ್ಲ.
ನಾನು ಈ ದಿನ ಇಲ್ಲಿ ಏಕಿದ್ದೇನೆಂದರೆ, ಭಾಗಶಃ, ಒಂದು ನಾಯಿಯ ಕಾರಣದಿಂದ: ಒಂದು ಪರಿತ್ಯಕ್ತ ನಾಯಿ ಮರಿ, ಮಳೆಯಲ್ಲಿ, 1998ರಲ್ಲಿ ನನಗೆ ಸಿಕ್ಕಿತು. ಅದು ನಾನು ಊಹಿಸಿದ್ದಕ್ಕಿಂತ ದೊಡ್ಡ ನಾಯಿಯಾಯಿತು. ಅದು ನನ್ನ ಜೀವನದಲ್ಲಿ ಬಂದಾಗ, ನಾವು ದೊಡ್ಡ ಪ್ರಯೋಜನವಿಲ್ಲದ ಸೌಲಭ್ಯದ ವಿರುದ್ಧ ಹೋರಾಡುತ್ತಿದ್ದೆವು ಅದು ಈಸ್ಟ್ ರಿವರ್ ವಾಟರ್ ಫ್ರಂಟ್ ಬಗ್ಗೆ, ನಮ್ಮ ನ್ಯೂಯಾರ್ಕ್ ನಗರದ ಚಿಕ್ಕ ಪ್ರದೇಶ ಈಗಾಗಲೇ ಇಡೀ ನಗರದ ಶೇಕಡ 40 ವಾಣಿಜ್ಯ ತ್ಯಾಜ್ಯವನ್ನು ನಿರ್ವಹಿಸುತ್ತಿದೆ. ಒಂದು ಚರಂಡಿ ತ್ಯಾಜ್ಯವನ್ನು ಘನೀಕರಿಸುವ ಸ್ಥಾವರ, ಒಂದು ಚರಂಡಿ ರೊಜ್ಜು ಸ್ಥಾವರ, ನಾಲ್ಕು ಶಕ್ತಿ ಉತ್ಪನ್ನ ಸ್ಥಾವರಗಳು, ಪ್ರಪಂಚದ ಅತಿ ದೊಡ್ಡ ಆಹಾರ ವಿತರಣೆ ಕೇಂದ್ರ, ಜೊತೆಗೆ ಪ್ರತಿ ವಾರ 60:00ಕ್ಕೂ ಹೆಚ್ಚು ಡೀಸೆಲ್ ಟ್ರಕ್ನಷ್ಟು ತ್ಯಾಜ್ಯ ತರುವ ಇತರ ಕೈಗಾರಿಕೆಗಳು. ಈ ಪ್ರದೇಶ ನಗರದಲ್ಲಿ ಜನರು ಮತ್ತು ಪಾರ್ಕುಗಳಿಗೆ ಇರುವ ಅನುಪಾತ ಕಡಿಮೆ ಹೊಂದಿದೆ.
ಹಾಗಾಗಿ ನನ್ನನ್ನು ಪಾರ್ಕುಗಳ ಇಲಾಖೆ ಸಂಪರ್ಕಿಸಿದಾಗ ವಾಟರ್ ಫ್ರಂಟ್ ಯೋಜನೆಗಳನ್ನು ಪ್ರಾರಂಭಿಸಲು ಸುಮಾರು $10:00 ಸೀಡ್ ಗ್ರಾಂಟ್ ಉಪಕ್ರಮ ಲಭ್ಯವಿದೆಯೆಂದು ತಿಳಿಯಿತು. ಅವರಲ್ಲಿ ನಿಜವಾಗಲೂ ಕಾಳಜಿಯಿದೆ, ಆದರೆ ಸ್ವಲ್ಪ ಭೋಳೆತನವಿದೆ. ನಾನು ನನ್ನ ಜೀವನಪೂರ್ತಿ ಇಲ್ಲಿಯೇ ಜೀವಿಸಿದ್ದೇನೆ, ಆದರೆ ನದಿಯ ಹತ್ತಿರ ಸುಳಿಯಲು ಸಾಧ್ಯವಾಗುತ್ತಿರಲಿಲ್ಲ ಏಕೆಂದರೆ ನಾನು ಆಗಲೇ ತಿಳಿಸಿದ ಸುಂದರ ಕಾರಣಗಳಿಂದಾಗಿ. ನಂತರ, ಒಂದು ದಿನ ಮುಂಜಾನೆ ನನ್ನ ನಾಯಿಯ ಜೊತೆ ನಿಧಾನವಾಗಿ ನಡೆಯುತ್ತಿದ್ದಾಗ ಅದು ನನ್ನನ್ನು ಅನಧಿಕೃತವಾಗಿ ಹಾಕಿರಬಹುದೆಂದೆನಿಸುವ ಒಂದು ಕುಪ್ಪೆಯ ಕಡೆ ಎಳೆಯಿತು. ಅಲ್ಲಿ ಕಳೆ ಮತ್ತು ಕಸದ ಕುಪ್ಪಗಳು ಮತ್ತು ಇಲ್ಲಿ ಹೇಳಲಾಗದಂತಹ ಇತರ ತ್ಯಾಜ್ಯಗಳು ತುಂಬಿದ್ದವು, ಆದರೆ ಅದು ನನ್ನನ್ನು ಎಳೆಯುತ್ತಲೇ ಇತ್ತು -- ಹಾಗೂ ಉಸಿರು ಬಿಗಿ ಹಿಡಿದುಕೊಳ್ಳಿ, ಅದರ ಕೊನೆಯಲ್ಲಿ ಇದೇ ನದಿಯಿತ್ತು. ನನಗನ್ನಿಸಿತು ಎಲ್ಲರೂ ಮರೆತಿರುವ ನನ್ನನ್ನು ಅಲ್ಲಿಗೆ ಕರೆತಂದ ನಾಯಿಯನ್ನು ಪರಿತ್ಯಜಿಸಿದಂತೆ ಪರಿತ್ಯಾಗವಾಗಿರುವ ಈ ರಸ್ತೆಯ ಕೊನೆಯನ್ನು ರಕ್ಷಿಸುವುದು ಸೂಕ್ತ ಎಂದು. ಹಾಗೆಯೇ ನನಗೆ ತಿಳಿದಿತ್ತು ಇದು ಹೊಸ ಸೌತ್ ಬ್ರಾಂಕ್ಸ್ನ ಸಮುದಾಯ ಪ್ರೇರಿತ ಪುನಶ್ಚೇತನಕ್ಕೆ ಒಂದು ಉತ್ತಮ ಪ್ರಾರಂಭವಾಗುತ್ತದೆ ಎಂದು.
ಮತ್ತು ನನ್ನ ನಾಯಿಯಂತೆ ನನ್ನ ಈ ಕಲ್ಪನೆ ಕೂಡ ನಾನಂದುಕೊಂಡದ್ದಕ್ಕಿಂತ ದೊಡ್ಡದಾಯಿತು. ಇದಕ್ಕೆ ಸಾಕಷ್ಟು ಬೆಂಬಲ ದೊರಕಿಸಿಕೊಂಡೆವು. ಹಾಗೂ ಹಂಟ್ಸ್ ರಿವರ್ ಸೈಡ್ ಪಾರ್ಕ್, ಸೌತ್ ಬ್ರಾಂಕ್ಸ್ನ 60 ವರ್ಷಗಳಿಗೂ ಹೆಚ್ಚು ಕಾಲದ ಅಸ್ತಿತ್ವದಲ್ಲಿ ಮೊಟ್ಟಮೊದಲ ವಾಟರ್ ಫ್ರಂಟ್ ಪಾರ್ಕ್ ಆಯಿತು. ನಾವು ಆ $10:00 ಸೀಡ್ ಗ್ರಾಂಟ್ನ್ನು 300 ಪಟ್ಟು ಹೆಚ್ಚಿಸಿ ಅದನ್ನು ಒಂದು $3 ಮಿಲಿಯನ್ ಪಾರ್ಕ್ ಮಾಡಲು.
ಮತ್ತು, ಈ ಋತುವಿನ ನಂತರ ನಾನು ವಾಸ್ತವವಾಗಿ -- ನನ್ನನ್ನು ಪ್ರೀತಿಸಿದವರ ಜೊತೆ ಮದುವೆ ವಾಗ್ದಾನ ಬದಲಾಯಿಸಿಕೊಳ್ಳುತ್ತೇನೆ. ತುಂಬಾ ಧನ್ಯವಾದಗಳು (ಚಪ್ಪಾಳೆ) ಅವನು ನನ್ನ ಬಟಗಳನ್ನು ಅಲ್ಲಿ ಹಿಂದೆ ಒತ್ತುತ್ತಾನೆ, ಯಾವಾಗಲೂ ಆತ ಅದನ್ನೇ ಮಾಡುತ್ತಾನೆ. (ನಗು). (ಚಪ್ಪಾಳೆ)
ಆದರೆ ಪರಿಸರ ನ್ಯಾಯ ಸಮುದಾಯಗಳಲ್ಲಿ ಜೀವಿಸುತ್ತಿರುವ ನಮ್ಮಂಥವರು ಕಲ್ಲಿದ್ದಲು ಗಣಿಗಳಲ್ಲಿ ಕ್ಯಾನರಿ ಪಕ್ಷಿಗಳಿದ್ದಂತೆ. ನಾವು ಸಮಸ್ಯೆಯನ್ನು ಈಗ ಅನುಭವಿಸುತ್ತಿದ್ದೇವೆ, ಹಾಗೂ ಸ್ವಲ್ಪ ಕಾಲದಿಂದ ಹೊಂದಿದ್ದೇವೆ. ಪರಿಸರ ನ್ಯಾಯ, ಈ ಪದದ ಅರ್ಥ ಗೊತ್ತಿಲ್ಲದಿರುವ ನಿಮ್ಮಲ್ಲಿ ಕೆಲವರಿಗೆ, ಅದರ ಅರ್ಥ ಹೀಗಿರುತ್ತದೆ: ಯಾವುದೇ ಸಮುದಾಯ ಹೆಚ್ಚು ಪರಿಸರ ತೊಂದರೆಗಳ ಜವಾಬ್ದಾರಿ ಹೊರಬಾರದು ಮತ್ತು ಇತರ ಯಾವುದೇ ಪರಿಸರ ಲಾಭಗಳಿಗಿಂತ ಕಡಿಮೆ ಲಾಭ ಪಡೆಯಕೂಡದು.
ದುರದೃಷ್ಟವೆಂದರೆ, ಜನಾಂಗ ಮತ್ತು ವರ್ಗ ನಂಬಲರ್ಹ ಸೂಚಕಗಳು, ಎಲ್ಲಿ ಎಲ್ಲಿ ಉದ್ಯಾನವನಗಳು ಮತ್ತು ವೃಕ್ಷಗಳಂಥ ಒಳ್ಳೆಯ ವಸ್ತುಗಳು ಸಿಗುತ್ತವೆ, ಹಾಗೂ ಎಲ್ಲಿ ಕೆಟ್ಟ ವಸ್ತುಗಳು ಸಿಗುತ್ತವೆ, ವಿದ್ಯುತ್ ಸ್ಥಾವರಗಳು ಮತ್ತು ಪ್ರಯೋಜನವಿಲ್ಲದ ಸೌಲಭ್ಯಗಳು. ಅಮೆರಿಕದಲ್ಲಿ ಒಬ್ಬ ಕಪ್ಪು ವ್ಯಕ್ತಿಯಾಗಿ ನನಗೆ, ಒಬ್ಬ ಬಿಳಿಯನ ಎರಡು ಪಟ್ಟು ವಾಯು ಮಾಲಿನ್ಯ ನನ್ನ ಆರೋಗ್ಯಕ್ಕೆ ದೊಡ್ಡ ಅಪಾಯ ತಂದೊಡ್ಡುವ ಸಂಭವವಿದೆ. ನಾನು ಒಂದು ವಿದ್ಯುತ್ ಸ್ಥಾವರ ಅಥವಾ ರಾಸಾಯನಿಕ ಸ್ಥಾವರದ ಸಮೀಪ ನಡೆಯುವ ಸಾಧ್ಯತೆ ಐದು ಪಟ್ಟು ನಿಜ -- ಅದು ನಾನು ಮಾಡುತ್ತಲೇ ಇರುತ್ತೇನೆ. ಈ ಭೂ-ಉಪಯೋಗ ನಿರ್ಧಾರಗಳು ಪ್ರತಿಕೂಲ ಪರಿಸ್ಥಿತಿಗಳನ್ನು ಸೃಷ್ಟಿಮಾಡಿವೆ, ಇದರಿಂದ ಬೊಜ್ಜು, ಮಧುಮೇಹ ಮತ್ತು ಅಸ್ತಮಾ ಸಮಸ್ಯೆಗಳು ಉಂಟಾಗಿವೆ. ಯಾಕೆ ಯಾರಾದರೂ ವಿಷಪೂರಿತ ವಾತಾವರಣದಲ್ಲಿ ವೇಗವಾಗಿ ನಡಿಗೆ ಮಾಡಲು ತಮ್ಮ ಮನೆಯನ್ನು ಬಿಟ್ಟು ಬರುತ್ತಾರೆ? ನಮ್ಮ ಶೇಕಡ 27 ಬೊಜ್ಜು ದರ ತುಂಬಾ ಜಾಸ್ತಿ, ಈ ದೇಶದಲ್ಲಿ ಕೂಡ, ಹಾಗೂ ಇದರಲ್ಲಿಯೇ ಮಧುಮೇಹ ಕೂಡ ಬರುತ್ತದೆ. ನಾಲ್ಕರಲ್ಲಿ ಒಂದು ದಕ್ಷಿಣ ಬ್ರಾಂಕ್ಸ್ನ ಮಗುವಿಗೆ ಅಸ್ತಮಾ ಇದೆ. ನಮ್ಮ ಅಸ್ತಮಾ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವ ದರ ರಾಷ್ಟ್ರೀಯ ಸರಾಸರಿಗಿಂತ ಏಳು ಪಟ್ಟು ಹೆಚ್ಚು. ಈ ಪರಿಣಾಮಗಳು ಎಲ್ಲರ ಹಾದಿಗಳಲ್ಲೂ ಬರುತ್ತಿವೆ. ಹಾಗೂ ನಾವು ಘನತ್ಯಾಜ್ಯಕ್ಕಾಗಿ ಸಾಕಷ್ಟು ಪಾವತಿಸುತ್ತೇವೆ, ಮಾಲಿನ್ಯದಿಂದ ಬರುವ ಆರೋಗ್ಯ ಸಮಸ್ಯೆಗಳು ಹಾಗೂ ಅಸಹ್ಯತೆಗಳಿಗೆ ತೆರುವ ಬೆಲೆ ಎಂದರೆ, ನಮ್ಮ ಪ್ರತಿಭಾನ್ವಿತ ಯುವ ಕಪ್ಪು ಮತ್ತು ಲ್ಯಾಟಿನ್ ಯುವಪುರುಷರನ್ನು ಕೆಲಸ ಮಾಡದಂತೆ ಬಂಧಿಸಿಡುವ ವೆಚ್ಚವೇ ಆಗಿದೆ. ನಮ್ಮ ನಿವಾಸಿಗಳಲ್ಲಿ ಶೇಕಡ 50ರಷ್ಟು ಬಡತನದ ರೇಖೆಯಲ್ಲಿ ಅಥವಾ ಅದರ ಕೆಳಗಿದ್ದಾರೆ. ನನ್ನಂತಹ ಶೇಕಡ 25ರಷ್ಟು ಜನ ನಿರುದ್ಯೋಗಿಗಳು. ಕಡಿಮೆ ಆದಾಯವಿರುವ ನಾಗರಿಕರು ಸಾಮಾನ್ಯವಾಗಿ ಪ್ರಾಥಮಿಕ ಆರೈಕೆಗೆ ತುರ್ತು ಕೊಠಡಿ ಭೇಟಿಗಳನ್ನು ಮಾಡುತ್ತಾರೆ. ಇದು ತೆರಿಗೆದಾರರಿಗೆ ಬಹಳ ದುಬಾರಿಯಾಗುತ್ತದೆ ಹಾಗೂ ಅದೇ ಅನುಪಾತದಲ್ಲಿ ಲಾಭತರುವುದಿಲ್ಲ. ಬಡಜನರು ಇನ್ನೂ ಬಡವರಾಗಿರುವುದೇ ಅಲ್ಲದೆ ಇನ್ನೂ ಅನಾರೋಗ್ಯದಿಂದಿದ್ದಾರೆ.
ಸುದೈವದಿಂದ, ನನ್ನಂತೆ ಬಹಳ ಜನ ಅಲ್ಪಾವಧಿಯಲ್ಲಿ ಸಣ್ಣ-ವರಮಾನ ವರ್ಣ ಸಮುದಾಯಗಳ ಜೀವನದ ಜೊತೆ ರಾಜಿಮಾಡಿಕೊಳ್ಳದೆ ಪರಿಹಾರಗಳಿಗಾಗಿ ಶ್ರಮಿಸುತ್ತಿದ್ದಾರೆ, ಹಾಗೂ ಅವು ದೀರ್ಘಾವಧಿಯಲ್ಲಿ ನಮ್ಮನ್ನೇನೂ ನಾಶಮಾಡುವುದಿಲ್ಲ. ನಮಗ್ಯಾರಿಗೂ ಅದು ಬೇಡ, ಆದರೂ ನಾವೆಲ್ಲರೂ ಅದನ್ನು ಹೊಂದಿದ್ದೇವೆ. ನಾವೆಲ್ಲರೂ ಸಾಮಾನ್ಯವಾಗಿ ಹೊಂದಿರುವುದೇನು ಹೇಳಿ?
ಸರಿ, ಮೊಟ್ಟಮೊದಲನೆಯದಾಗಿ, ನಾವೆಲ್ಲರೂ ನಂಬಲಾಗದಷ್ಟು ಸುಂದರವಾಗಿದ್ದೇವೆ -- (ನಗು) -- ಹೈಸ್ಕೂಲ್, ಕಾಲೇಜ್, ಸ್ನಾತಕೋತ್ತರ ಪದವಿ ಹೊಂದಿದ್ದೇವೆ, ಆಸಕ್ತಿದಾಯಕ ಸ್ಥಳಗಳಿಗೆ ಪ್ರಯಾಣ ಮಾಡಿದ್ದೇವೆ, ಚಿಕ್ಕ ಹರೆಯದಲ್ಲಿ ಮಕ್ಕಳನ್ನು ಹೊಂದಿಲ್ಲ, ಆರ್ಥಿಕವಾಗಿ ಸದೃಢವಾಗಿದ್ದೇವೆ, ಯಾವತ್ತೂ ಜೈಲಿಗೆ ಹೋಗಿಲ್ಲ. ಸರಿ. ಒಳ್ಳೆಯದು. (ನಗು).
ಆದರೆ, ಕಪ್ಪು ಮಹಿಳೆಯಾಗಿರುವುದಲ್ಲದೇ ನಾನು ನಿಮಗಿಂತ ಹಲವು ರೀತಿಗಳಲ್ಲಿ ಭಿನ್ನಳಾಗಿದ್ದೇನೆ. ನಾನು ನನ್ನ ನೆರೆಯಲ್ಲಿ ಅರ್ಧದಷ್ಟು ಕಟ್ಟಡಗಳು ಬೆಂಕಿಯಿಂದ ಉರಿದುಬಿದ್ದಿರುವುದನ್ನು ನೋಡಿದ್ದೇನೆ. ನನ್ನ ದೊಡ್ಡಣ್ಣ ಲೆನ್ನಿ ವಿಯೆಟ್ನಾಮ್ನಲ್ಲಿ ಯುದ್ಧಮಾಡಿದ, ಆದರೆ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿಯೇ ಗುಂಡೇಟಿಗೆ ತುತ್ತಾದ. ಜೀಸಸ್. ನಾನು ನಮ್ಮ ರಸ್ತೆಯಲ್ಲಿ ಒಂದು ಮುರುಕಲು ಮನೆಯಲ್ಲಿ ಬೆಳೆದೆ. ಹೌದು, ನಾನೊಬ್ಬ ಘೆಟ್ಟೊದಿಂದ ಬಂದ ಬಡ ಕಪ್ಪು ಮಗು. ಈ ಸಂಗತಿಗಳು ನನ್ನನ್ನು ನಿಮ್ಮಿಂದ ವಿಭಿನ್ನಳನ್ನಾಗಿ ಮಾಡುತ್ತವೆ. ಆದರೆ ನಮ್ಮಲ್ಲಿರುವ ಒಂದೇ ರೀತಿಯ ವಿಚಾರಗಳು ನನ್ನ ಸಮುದಾಯದ ಬಹಳ ಜನರಿಂದ ನನ್ನನ್ನು ಬೇರ್ಪಡಿಸುತ್ತವೆ, ಹಾಗೂ ನಾನು ಈ ಎರಡು ಪ್ರಪಂಚಗಳ ನಡುವೆ ಇದ್ದೇನೆ, ಮತ್ತೊಂದರಲ್ಲಿ ನ್ಯಾಯಕ್ಕಾಗಿ ಹೋರಾಡುವಷ್ಟು ಎದೆಗಾರಿಕೆಯೊಂದಿಗೆ.
ಅಂದರೆ, ವಿಚಾರಗಳು ನಮಗೆ ಭಿನ್ನವಾಗಿವೆ, ಹೇಗೆ? 40ರ ದಶಕದ ಅಂತ್ಯದಲ್ಲಿ, ನನ್ನ ತಂದೆ -- ಒಬ್ಬ ಮನುಷ್ಯರನ್ನು ಕೊಂಡೊಯ್ಯುವ ಕೂಲಿ, ಒಬ್ಬ ಗುಲಾಮನ ಮಗ -- ದಕ್ಷಿಣ ಬ್ರಾಂಕ್ಸ್ನ ಹಂಟ್ಸ್ ಪಾಯಿಂಟ್ ಭಾಗದಲ್ಲಿ ಒಂದು ಮನೆಯನ್ನು ಕೊಂಡ, ಮತ್ತು ಕೆಲವು ವರ್ಷಗಳ ನಂತರ ನನ್ನ ತಾಯಿಯನ್ನು ವಿವಾಹವಾದನು. ಆ ಸಮಯದಲ್ಲಿ, ನಮ್ಮ ಸಮುದಾಯ ಬಿಳಿಯರಿಂದ ತುಂಬಿತ್ತು, ಕೆಲಸಗಾರ-ವರ್ಗದ ನೆರೆಹೊರೆ. ನನ್ನ ತಂದೆ ಒಂಟಿಯಾಗಿರಲಿಲ್ಲ. ಅವನಂತೆ ಇತರರು ತಮ್ಮದೇ ಆದ ಅಮೆರಿಕನ್ ಕನಸುಗಳನ್ನು ಕಾಣುತ್ತಿದ್ದರು, ದಕ್ಷಿಣ ಬ್ರಾಂಕ್ಸ್ನಲ್ಲಿ ಹಾಗೂ ದೇಶದಲ್ಲಿ ಹಲವು ಕಡೆ ಬಿಳಿಯರೊಂದಿಗೆ ಜಗಳ ಸರ್ವೇಸಾಮಾನ್ಯವಾಯಿತು. ಬ್ಯಾಂಕ್ಗಳು ಕೆಂಪು ಗೆರೆ ಹಾಕುತ್ತಿದ್ದರು, ಅದರ ಪ್ರಕಾರ ನಗರದ ಕೆಲವು ಭಾಗಗಳು, ನಮ್ಮದೂ ಸೇರಿದಂತೆ, ಯಾವುದೇ ರೀತಿಯ ಹೂಡಿಕೆಗೆ ಮಿತಿಯೊಳಗಿರಲಿಲ್ಲ. ಹಲವು ಜನ ಮನೆ ಮಾಲಿಕರು ಅವರ ಕಟ್ಟಡಗಳಿಗೆ ಬೆಂಕಿ ಹಚ್ಚಿ ಇನ್ಶೂರೆನ್ಸ್ ಹಣ ಪಡೆಯುವುದು ಆ ಪರಿಸ್ಥಿತಿಗಳಲ್ಲಿ ಮನೆ ಮಾರುವುದಕ್ಕಿಂತ ಲಾಭಕರ ಎಂದು ನಂಬಿದ್ದರು -- ಸತ್ತ ಅಥವಾ ಗಾಯಗೊಂಡ ಮಾಜಿ ಬಾಡಿಗೆದಾರರ ಪರಿವೆಯೇ ಇರಲಿಲ್ಲ.
ಹಂಟ್ಸ್ ಪಾಯಿಂಟಿನಲ್ಲಿದ್ದ ಸಮುದಾಯ ಹಿಂದೆ ಕೆಲಸಕ್ಕೆ ನಡೆದುಹೋಗುತ್ತಿದ್ದರು, ಆದರೆ ಈಗ ನಿವಾಸಿಗಳಿಗೆ ಕೆಲಸವೂ ಇಲ್ಲ, ನಡೆದುಹೋಗಲು ಮನೆಯೂ ಇಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಭರಾಟೆ ನಮ್ಮ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಿತು. ನ್ಯೂಯಾರ್ಕ್ ರಾಜ್ಯದಲ್ಲಿ, ರಾಬರ್ಟ್ ಮೋಸಸ್ ಹೆದ್ದಾರಿ ವಿಸ್ತರಣೆ ಆಂದೋಳನದ ಮುಂದಾಳತ್ವವನ್ನು ಆಕ್ರಮಣಕಾರಿಯಾಗಿ ವಹಿಸಿದ. ಅದರ ಪ್ರಾಥಮಿಕ ಗುರಿಗಳಲ್ಲಿ ಒಂದು ವೆಸ್ಟ್ ಚೆಸ್ಟರ್ ಕೌಂಟಿಯ ಶ್ರೀಮಂತ ಸಮುದಾಯಗಳ ನಿವಾಸಿಗಳು ಮ್ಯಾನ್ ಹಟ್ಟನ್ಗೆ ಸುಲಭವಾಗಿ ಪ್ರಯಾಣಮಾಡಲು ಅನುಕೂಲ ಒದಗಿಸುವುದು. ಮಧ್ಯದಲ್ಲಿರುವ ಸೌತ್ ಬ್ರಾಂಕ್ಸ್ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಹಲವು ಬಾರಿ ನಿವಾಸಿಗಳಿಗೆ ಕಟ್ಟಡಗಳನ್ನು ನೆಲಸಮ ಮಾಡುವುದಕ್ಕೆ ಮೊದಲು ಒಂದು ತಿಂಗಳಿಗಿಂತ ಕಡಿಮೆ ಅವಧಿಯ ಸೂಚನೆ ಕೊಡಲಾಗುತ್ತಿತ್ತು. 600:00 ಜನ ನೆಲೆಯಿಲ್ಲದಂತಾದರು. ಕೇವಲ ದಳ್ಳಾಳಿಗಳು ಮತ್ತು ಮಾದಕವಸ್ತುಗಳ ಮಾರಾಟಗಾರರು ಮತ್ತು ವೇಶ್ಯೆಯರು ಸೌತ್ ಬ್ರಾಂಕ್ಸಿಗೆ ಸೇರಿದವರೆಂಬುದು ಸಾಮಾನ್ಯ ತಿಳಿವಳಿಕೆಯಾಗಿತ್ತು. ಹಾಗೂ ನಿಮ್ಮ ಚಿಕ್ಕಂದಿನ ದಿನಗಳಿಂದಲೂ ನಿಮ್ಮ ಸಮುದಾಯದಿಂದ ಒಳ್ಳೆಯದೇನೂ ಬರುವುದಿಲ್ಲ ಎಂದು ನಿಮಗೆ ಹೇಳಲಾಗಿದೆ, ಅದು ಕೆಟ್ಟದ್ದು ಮತ್ತು ಕುರೂಪ, ಅದು ನಿಮ್ಮ ಮೇಲೆ ಹೇಗೆ ಪರಿಣಾಮವಾಗುವುದಿಲ್ಲ? ಹಾಗಾಗಿ ಈಗ, ನನ್ನ ಕುಟುಂಬದ ಆಸ್ತಿಗೆ ಯಾವ ಬೆಲೆಯೂ ಇರಲಿಲ್ಲ, ಅದು ನಮ್ಮ ಮನೆ ಎಂಬುದೊಂದನ್ನು ಬಿಟ್ಟರೆ. ಅದೃಷ್ಟವೆಂದರೆ ನನಗೆ, ಆ ಮನೆ ಮತ್ತು ಅದರೊಳಗಿದ್ದ ಪ್ರೀತಿ, ಜೊತೆಗೆ ಉದ್ದಕ್ಕೂ ಅಧ್ಯಾಪಕರು, ಸಲಹೆಗಾರರು ಮತ್ತು ಸ್ನೇಹಿತರ ಸಹಾಯ ನನಗೆ ಸಾಕಾಗಿತ್ತು.
ಈಗ, ಈ ಕಥೆ ಏಕೆ ಅಷ್ಟು ಮುಖ್ಯ? ಏಕೆಂದರೆ ಯೋಜನೆ ದೃಷ್ಟಿಯಿಂದ, ಆರ್ಥಿಕ ಅವನತಿ ಪರಿಸರ ಅವನತಿಗೆ ಜನ್ಮಕೊಡುತ್ತದೆ, ಇದು ಸಾಮಾಜಿಕ ಅವನತಿಗೆ ಜನ್ಮಕೊಡುತ್ತದೆ. 1960ರ ದಶಕದಲ್ಲಿ ಪ್ರಾರಂಭವಾದ ಬಂಡವಾಳ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಸಂಭವಿಸಬಹುದಾದ ಎಲ್ಲ ಪರಿಸರ ಸಂಬಂಧಿ ಅನ್ಯಾಯಗಳಿಗೆ ಬುನಾದಿ ಹಾಕಿತು. ಓಬೀರಾಯನ ಕಾಲದ ವಲಯ ವಿಂಗಡಣೆ ಮತ್ತು ಭೂ-ಉಪಯೋಗ ಕಾಯಿದೆಗಳನ್ನು ನನ್ನ ನೆರೆಹೊರೆಯಲ್ಲಿ ಕಲುಷಿತಗೊಳಿಸುವ ಸೌಲಭ್ಯಗಳನ್ನು ತುಂಬುವುದನ್ನು ಮುಂದುವರೆಸಲು ಈ ದಿನಕ್ಕೂ ಉಪಯೋಗಿಸಲಾಗುತ್ತಿದೆ. ಭೂ-ಉಪಯೋಗ ನೀತಿಯನ್ನು ರೂಪಿಸುವಾಗ ಈ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೆ? ಈ ನಿರ್ಧಾರಗಳ ಭಾಗವಾಗಿರುವ ವೆಚ್ಚಗಳೆಷ್ಟು? ಇವನ್ನು ಯಾರು ಭರಿಸುತ್ತಾರೆ? ಯಾರಿಗೆ ಲಾಭ? ಸ್ಥಳೀಯ ಸಮುದಾಯ ಅನುಭವಿಸುವ ನೋವಿಗೆ ಏನಾದರೂ ಸಮರ್ಥನೆಯಿದೆಯೆ? ಇದು "ಯೋಜನೆ" -- ಉಲ್ಲೇಖದಲ್ಲಿ -- ನಮ್ಮ ಹಿತಾಸಕ್ತಿಯೇನೂ ಮನಸ್ಸಿನಲ್ಲಿರಲಿಲ್ಲ.
ಒಮ್ಮೆ ನಮಗೆ ಇದರ ಅರಿವಾದ ಕೂಡಲೇ ನಾವು ನಮ್ಮದೇ ಯೋಜನೆ ಮಾಡಿಕೊಳ್ಳಲು ಸಮಯ ಬಂದಿದೆ ಎಂದು ನಿರ್ಧರಿಸಿದೆವು. ನಾನು ಈ ಮೊದಲು ಹೇಳಿದ ಚಿಕ್ಕ ಉದ್ಯಾನವನ ಮೊದಲನೆಯದು ಸೌತ್ ಬ್ರಾಂಕ್ಸ್ನಲ್ಲಿ ಹಸಿರು ಆಂದೋಲನ ಪ್ರಾರಂಭದ ಮೊದಲ ಹೆಜ್ಜೆ. ನಾನು ಒಂದೂ ಕಾಲು ದಶಲಕ್ಷದ ಫೆಡರಲ್ ಟ್ರಾನ್ಸ್ಪೋರ್ಟೇಶನ್ ಅನುದಾನಕ್ಕೆ ಬರೆದುಕೊಂಡೆ ಪ್ರತ್ಯೇಕ ಬೈಕ್ ಹಾದಿಯೊಂದಿಗೆ ಒಂದು ವಾಟರ್ ಫ್ರಂಟ್ ಸಮತಲ ಪ್ರದೇಶವನ್ನು ವಿನ್ಯಾಸಮಾಡಲು. ಭೌತಿಕ ಅಭಿವೃದ್ಧಿಗಳು ಸಾರಿಗೆ ಸುರಕ್ಷತೆ ಬಗ್ಗೆ ಸಾರ್ವಜನಿಕ ನೀತಿ ಬಿತ್ತರಿಸುವಲ್ಲಿ ಸಹಾಯ ಮಾಡುತ್ತವೆ, ತ್ಯಾಜ್ಯ ವಸ್ತುಗಳ ಸ್ಥಳ ಮತ್ತು ಇತರ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ, ಸಮುದಾಯದ ಜೀವನ ಮಟ್ಟದಲ್ಲಿ ರಾಜಿಯ ಅಗತ್ಯವಿರುವುದಿಲ್ಲ. ಅವುಗಳು ದೈಹಿಕವಾಗಿ ಚಟುವಟಿಕೆಯಿಂದಿರಲು ಅವಕಾಶಗಳನ್ನು ಒದಗಿಸುತ್ತವೆ, ಹಾಗೂ ಸ್ಥಳೀಯ ಆರ್ಥಿಕ ಅಭಿವೃದ್ಧಿ ಕೂಡ ಸಾಧ್ಯ.♫ ಬೈಕ್ ಅಂಗಡಿಗಳು, ಜ್ಯೂಸ್ ಅಂಗಡಿಗಳ ಬಗ್ಗೆ ಯೋಚಿಸಿ. ಮೊದಲನೆ ಹಂತದ ಕಾಮಗಾರಿಗೆ ನಮಗೆ $20 ಮಿಲಿಯನ್ ದೊರಕಿತು. ಇದು ಲಾಫಾಯೆಟ್ ಅವೆನ್ಯೂ -- ಹಾಗೂ ಇದನ್ನು ಭೂಪ್ರದೇಶ ವಿನ್ಯಾಸಗಾರರು ಮಾಥ್ಯೂಸ್-ನೀಲ್ಸನ್ ವಿನ್ಯಾಸಗೊಳಿಸಿದ್ದಾರೆ. ಒಮ್ಮೆ ಈ ಹಾದಿ ನಿರ್ಮಾಣವಾದರೆ, ಅದು ಸೌತ್ ಬ್ರಾಂಕ್ಸ್ ಮತ್ತು 400 ಎಕರೆಗಳಿಗೂ ಹೆಚ್ಚು ವಿಸ್ತಾರವಾದ ರಾಂಡಾಲ್ ಐಲ್ಯಾಂಡ್ ಪಾರ್ಕಿಗೆ ಸಂಪರ್ಕವುಂಟಾಗುತ್ತದೆ. ಸಧ್ಯಕ್ಕೆ ನಮ್ಮನ್ನು 25 ಅಡಿ ಆಳದ ನೀರು ಬೇರ್ಪಡಿಸಿದೆ, ಆದರೆ ಈ ಸಂಪರ್ಕ ಅದನ್ನು ಬದಲಾಯಿಸುತ್ತದೆ.
ನಾವು ನೈಸರ್ಗಿಕ ಪರಿಸರವನ್ನು ಪಾಲನೆ ಮಾಡುತ್ತಿದ್ದರೆ, ಅದರ ಸಮೃದ್ಧಿ ನಮಗೆ ಇನ್ನಷ್ಟು ಹಿಂದಿರುಗಿಸಿ ಕೊಡುತ್ತದೆ. ನಾವು ಬ್ರಾಂಕ್ಸ್ ಎಕೊಲಾಜಿಕಲ್ ಸ್ಟೀವರ್ಡ್ ಶಿಪ್ ಟ್ರೈನಿಂಗ್ ಎಂಬ ಒಂದು ಯೋಜನೆಯನ್ನು ನಿರ್ವಹಿಸುತ್ತಿದ್ದೇವೆ, ಇದು ಪರಿಸರ ಪುನರ್ ಸ್ಥಾಪನೆ ಕ್ಷೇತ್ರದಲ್ಲಿ ತರಬೇತಿ ಕೊಡುತ್ತದೆ, ಹಾಗಾಗಿ ನಮ್ಮ ಸಮುದಾಯದ ಜನರು ಈ ಒಳ್ಳೆ ವೇತನ ಸಿಗುವ ಕೆಲಸಗಳಿಗೆ ಸ್ಪರ್ಧೆ ಮಾಡಲಿ ಎಂದು. ಸ್ವಲ್ಪ ಸ್ವಲ್ಪವಾಗಿ, ನಾವು ಈ ಪ್ರದೇಶದಲ್ಲಿ ಗ್ರೀನ್ ಕಾಲರ್ ಕೆಲಸಗಳನ್ನು ಬಿತ್ತುತ್ತಿದ್ದೇವೆ -- ಆಗ ಜನರು ತಮ್ಮ ಪರಿಸರದಲ್ಲಿ ಆರ್ಥಿಕ ಮತ್ತು ವೈಯುಕ್ತಿಕ ಪಣವಿಟ್ಟಿರುತ್ತಾರೆ. ಶೆರಿಡನ್ ಎಕ್ಸ್ ಪ್ರೆಸ್ ವೇ ರಾಬರ್ಟ್ ಮೋಸೆಸ್ ಯುಗದ ಸಮರ್ಪಕವಾಗಿ ಉಪಯೋಗಿಸದ ಒಂದು ಅವಶೇಷ, ಅದು ವಿಭಾಗಿಸಿದ ನೆರೆಹೊರೆಯ ಬಗ್ಗೆ ಯಾವುದೇ ಕಾಳಜಿ ಇಲ್ಲದೇ ಕಟ್ಟಿದ್ದು. ಭರಾಟೆ ಸಮಯದಲ್ಲಿ ಕೂಡ ಅದನ್ನು ಉಪಯೋಗಿಸುವುದಿಲ್ಲ. ಸಮುದಾಯ ಒಂದು ಪರ್ಯಾಯ ಸಾಗಾಣಿಕೆ ಯೋಜನೆ ಸಿದ್ಧಪಡಿಸಿತು. ಅದು ಹೆದ್ದಾರಿಯನ್ನು ತೆಗೆದುಹಾಕುವ ಅವಕಾಶ ಹೊಂದಿತ್ತು. ಈಗ ನಮಗೆ ಎಲ್ಲ ಭಾಗೀದಾರರನ್ನು ಒಟ್ಟಿಗೆ ಸೇರಿಸುವ ಅವಕಾಶ ಒದಗಿದೆ ಹೇಗೆ 28 ಎಕರೆ ಪ್ರದೇಶವನ್ನು ಪಾರ್ಕಿಗಾಗಿ ಉತ್ತಮವಾಗಿ ಉಪಯೋಗಿಸಬೇಕೆಂದು ಮರುದೃಷ್ಟಿ ಹಾಯಿಸಲು, ಹಾಗೂ ಹೊಂದಬಹುದಾದ ನೆಲೆ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು.
ನಾವು ನಗರದ -- ನ್ಯೂಯಾರ್ಕ್ ನಗರದ ಮೊದಲ ಹಸಿರು ಛಾವಣಿ ಕೂಡ ನಿರ್ಮಿಸಿದ್ದೇವೆ ನಮ್ಮ ಕಛೇರಿಗಳ ಸೂರಿನ ಮೇಲೆ ಪ್ರದರ್ಶನ ಯೋಜನೆ ಇದೆ. ತಂಪು ಸೂರುಗಳು ಅತ್ಯಂತ ಪ್ರತಿಫಲನ ಮೇಲ್ಮೈ ಆಗಿದ್ದು ಅದು ಸೌರ ತಾಪವನ್ನು ಹೀರುವುದಿಲ್ಲ ಹಾಗೂ ಅದನ್ನು ಕಟ್ಟಡ ಮತ್ತು ವಾತಾವರಣಕ್ಕೆ ವರ್ಗಾಯಿಸುತ್ತವೆ. ಹಸಿರು ಸೂರುಗಳೆಂದರೆ ಮಣ್ಣು ಮತ್ತು ಜೀವಂತ ಸಸ್ಯಗಳು. ಎರಡನ್ನು ಪೆಟ್ರೋಲಿಯಂ ಆಧಾರಿತ ಸೂರಿನ ವಸ್ತುಗಳ ಬದಲಿಗೆ ಉಪಯೋಗಿಸಬಹುದು ಅದು ಶಾಖವನ್ನು ಹೀರುತ್ತದೆ, ನಗರದ "ಶಾಖ ದ್ವೀಪ"ಕ್ಕೆ ತಂಪು ಕೊಡುಗೆ ನೀಡುತ್ತದೆ ಮತ್ತು ಸೂರ್ಯನ ಶಾಖದಡಿ ನಾಮಾವಶೇಷವಾಗುತ್ತವೆ, ಮತ್ತು ಅದನ್ನು ನಾವು ಉಸಿರಾಡುತ್ತೇವೆ. ಹಸಿರು ಸೂರುಗಳು ಶೇಕಡ 75 ಮಳೆನೀರನ್ನು ಉಳಿಸಿಕೊಳ್ಳುತ್ತವೆ, ಹಾಗಾಗಿ ಅವು ನಗರದ ಹೆಚ್ಚುವರಿ ನೀರು ವಿಲೆವಾರಿ ವೆಚ್ಚಗಳನ್ನು ಕಡಿಮೆಮಾಡುತ್ತವೆ -- ಅಂತಹ ಸದುಪಾಯಗಳು ಸಾಮಾನ್ಯವಾಗಿ ನಮ್ಮಂತಹ ಸಮುದಾಯ ಪರಿಸರ ನ್ಯಾಯ ಪ್ರದೇಶಗಳಲ್ಲಿರುತ್ತವೆ. ಹಾಗೂ ಅವು ನಮ್ಮ ಪುಟ್ಟ ಸ್ನೇಹಿತರಿಗೆ ನೆಲೆಸಲು ಜಾಗ ಒದಗಿಸುತ್ತವೆ! ಆದ್ದರಿಂದ -- (ನಗು).-- ಎಷ್ಟು ತಂಪು! ಏನಾದರಾಗಲಿ, ನಮ್ಮ ಪ್ರದರ್ಶನ ಯೋಜನೆ ನಮ್ಮ ಸ್ವಂತ ಹಸಿರು ಸೂರು ನಿರ್ಮಾಣ ವ್ಯಾಪಾರಕ್ಕೆ ನೆಗೆತ ಹಲಿಗೆಯಾಯಿತು, ಸೌತ್ ಬ್ರಾಂಕ್ಸ್ಗೆ ಉದ್ಯೋಗಗಳು ಮತ್ತು ಸಂಪೋಷಣಾ ಆರ್ಥಿಕ ಚಟುವಟಿಕೆಯನ್ನು ತಂದಿತು. (ನಗು). (ಚಪ್ಪಾಳೆ). ಅದು ನನಗೂ ಇಷ್ಟ.
ಹೇಗಾದರಾಗಲಿ, ಇಲ್ಲಿ ಗುಡಾರಗಳನ್ನು ಕಟ್ಟಬಾರದೆಂದು ಕ್ರಿಸ್ ಹೇಳಿದ್ದಾರೆಂದು ನನಗೆ ತಿಳಿದಿದೆ, ನಿಮ್ಮೆಲ್ಲರ ಆಸಕ್ತಿ ನನ್ನ ಕಡೆ ಇರುವುದರಿಂದ: ನಮಗೆ ಹೂಡಿಕೆದಾರರು ಬೇಕಾಗಿದ್ದಾರೆ. ಗುಡಾರದ ಕೊನೆ. ಅಪ್ಪಣೆ ಕೇಳುವುದಕ್ಕಿಂತ ಕ್ಷಮೆ ಕೇಳುವುದು ಉತ್ತಮ. ಎಂತಾದರೂ -- (ನಗು). (ಚಪ್ಪಾಳೆ).
ಓಕೆ. ಕಟ್ರೀನಾ. ಕಟ್ರೀನಾಗೆ ಮೊದಲು ಸೌತ್ ಬ್ರಾಂಕ್ಸ್ ಮತ್ತು ನ್ಯೂ ಆರ್ಲಿಯಾನ್ಸ್ ಒಂಬತ್ತನೆ ವಾರ್ಡ್ ಬಹಳ ವಿಚಾರಗಳಲ್ಲಿ ಒಂದೇ ಇದ್ದುವು. ಎರಡೂ ಬಣ್ಣದ ಬಡ ಜನರಿಂದ ತುಂಬಿ ತುಳುಕುತ್ತಿತ್ತು, ಎರಡೂ ಸಾಂಸ್ಕೃತಿಕ ಬದಲಾವಣೆಗೆ ಬಿಸಿತಾಣ: ಹಿಪ್ ಹಾಪ್ ಬಗ್ಗೆ ಚಿಂತಿಸಿ. ಎರಡೂ ಕೂಡ ಎರಡೂ ಕೈಗಾರಿಕೆಗಳನ್ನು ಬೆಂಬಲಿಸುವ ಎರಡು ವಾಟರ್ ಫ್ರಂಟ್ ಸಮುದಾಯಗಳು ಹಾಗೂ ಒಬ್ಬರಿಗೊಬ್ಬರು ಹತ್ತಿರ ಇರುವ ನಿವಾಸಿಗಳು. ಕಟ್ರೀನಾ ಯುಗದ ನಂತರ ನಮ್ಮಲ್ಲಿ ಇನ್ನೂ ಏಕತೆಗಳಿವೆ. ಹೆಚ್ಚೆಂದರೆ ನಮ್ಮನ್ನು ಉದಾಸೀನ ಮಾಡುತ್ತಾರೆ ಹಾಗೂ ದೂಷಣೆಮಾಡುತ್ತಾರೆ ಹಾಗೂ ನಿಂದಿಸುತ್ತಾರೆ, ಇನ್ನೂ ಹೆಚ್ಚೆಂದರೆ ಬೇಜವಾಬ್ದಾರಿ ಕಾನೂನು ಪಾಲಕರು, ವಿನಾಶಕಾರಿ ವಿಂಗಡಣೆ ನೀತಿ ಮತ್ತು ಸರ್ಕಾರದ ಬಿಗಿಯಿಲ್ಲದ ಹೊಣೆಗಾರಿಕೆ ಇದಕ್ಕೆ ಕಾರಣ. ಒಂಬತ್ತನೆಯ ವಾರ್ಡ್ ಅಥವಾ ಸೌತ್ ಬ್ರಾಂಕ್ಸ್ನ್ನು ಒಡೆದುಹಾಕುವುದು ಅನಿವಾರ್ಯವಾಗಿರಲಿಲ್ಲ. ಆದರೆ ನಾವು ನಮ್ಮನ್ನೇ ಹೇಗೆ ಮೇಲಕ್ಕೆಳೆದುಕೊಳ್ಳಬಹುದು ಎಂಬುದರ ಬಗ್ಗೆ ಒಳ್ಳೆಯ ಪಾಠ ಕಲಿತೆವು. ನಾವು ನಗರನಾಶದ ರಾಷ್ಟ್ರೀಯ ಗುರುತುಗಳಿಗಿಂತ ಹೆಚ್ಚು. ಅಥವಾ ಪರಿಹರಿಸಬೇಕಾದ ಸಮಸ್ಯೆಗಳ ಬಗ್ಗೆ ಅಧ್ಯಕ್ಷರುಗಳ ಟೊಳ್ಳು ವಾಗ್ದಾನಗಳು ಬಂದುಹೋಗಿವೆ. ನಾವೀಗ ಸಾಗರ ಕೊಲ್ಲಿಯ ತೀರವನ್ನು ಸೌತ್ ಬ್ರಾಂಕ್ಸ್ನ್ನು ಸೊರಗಿಸಿದಂತೆ ಒಂದೆರಡು ದಶಕಗಳು ಸೊರಗಲು ಬಿಡುತ್ತೇವೆಯೆ? ಅಥವಾ ನಾವು ಕ್ರಿಯಾಶೀಲ ಕ್ರಮಗಳನ್ನು ತೆಗೆದುಕೊಂಡು ಮನೆಯಲ್ಲಿ ಅಭಿವೃದ್ಧಿಗೊಂಡಿರುವ ಸಂಪನ್ಮೂಲವಾದ ನನ್ನಂತಹ ಸಮುದಾಯದಲ್ಲಿ ವಿಧಿಯಿಲ್ಲದೆ ಜನಿಸಿರುವ ನೆಲಮಟ್ಟದ ಕಾರ್ಯಕರ್ತರಿಂದ ಕಲಿಯಬೇಕೆ?
ಈಗ ಆಲಿಸಿ, ವ್ಯಕ್ತಿಗಳು ಇದನ್ನು ಮಾಡಬೇಕೆಂದು ಬಯಸುವುದಿಲ್ಲ, ಸಂಸ್ಥೆಗಳು ಅಥವಾ ಸರ್ಕಾರ ಈ ವಿಶ್ವವನ್ನು ಜೀವಿಸಲು ಉತ್ತಮ ಸ್ಥಳವನ್ನಾಗಿಸಲಿ ಎಂದು ನಾನು ಅಪೇಕ್ಷಿಸುವುದಿಲ್ಲ, ಏಕೆಂದರೆ ಅದು ಹಕ್ಕು ಮತ್ತು ನೀತಿ. ಈ ನಿರೂಪಣೆ ನಾನು ಏನನ್ನು ಅನುಭವಿಸಿದ್ದೇನೆ ಎಂಬುದನ್ನು ತೋರಿಸುತ್ತದೆ, ಒಂದು ಸಣ್ಣ ಚೂರಿನಂತೆ. ನಿಮಗಿದೇನೆಂಬ ಸೂಚನೆಯಿಲ್ಲ. ಆದರೆ, ನಿಮಗೆ ತಿಳಿದುಕೊಳ್ಳಲು ಇಷ್ಟವಿದ್ದರೆ ಆಮೇಲೆ ಹೇಳುತ್ತೇನೆ. ಆದರೆ -- ನನಗೆ ಗೊತ್ತು ಅದು ಅಡಿರೇಖೆ, ಅಥವಾ ಒಬ್ಬರಿಗಿರುವ ಅದರ ಪರಿಕಲ್ಪನೆ, ಅಂತ್ಯದಲ್ಲಿ ಜನರನ್ನು ಪ್ರೇರೇಪಿಸುವಂಥದು. ನನಗೆ ಆಸಕ್ತಿಯಿರುವುದು ನಾನು ಕರೆಯುವ "ಟ್ರಿಪಲ್ ಬಾಟಮ್ ಲೈನ್" ಸಂಪೋಷಣಾ ಅಭಿವೃದ್ಧಿ ಉತ್ಪಾದಿಸುವಂಥದು. ಸಂಬಂಧಪಟ್ಟವರೆಲ್ಲರಿಗೂ ಸಕಾರಾತ್ಮಕ ಪ್ರತಿಫಲಗಳನ್ನು ಸೃಷ್ಟಿ ಮಾಡುವ ಸಾಮರ್ಥ್ಯವಿರುವ ಅಭಿವೃದ್ಧಿಗಳು: ಅಭಿವೃದ್ಧಿದಾರರು, ಸರ್ಕಾರ ಮತ್ತು ಈ ಯೋಜನೆಗಳು ಕಾರ್ಯಗತವಾಗುವ ಸಮುದಾಯ. ಈ ಸದ್ಯದಲ್ಲಿ, ನ್ಯೂಯಾರ್ಕ್ ನಗರದಲ್ಲಿ ಇದು ಸಂಭವಿಸುತ್ತಿಲ್ಲ. ಹಾಗೂ ನಾವು ವಿಸ್ತಾರವಾದ ನಗರ ಯೋಜನೆ ಕೊರತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಸರ್ಕಾರದ ಅನುದಾನಗಳ ಕವಾಯಿತು ಅನುಮೋದನೆಯಾಗಿರುವ ದೊಡ್ಡ-ಪೆಟ್ಟಿಗೆಗೆ ಮತ್ತು ಸೌತ್ ಬ್ರಾಂಕ್ಸ್ನಲ್ಲಿ ಸ್ಟೇಡಿಯಂ ಅಭಿವೃದ್ಧಿಗೆ ಹೋಗುತ್ತದೆ, ಆದರೆ ನಗರದ ಏಜೆನ್ಸಿಗಳ ನಡುವೆ ಮುಕ್ತಸ್ಥಳಗಳ ಮೇಲೆ ಹೆಚ್ಚಾದ ಸಾರಿಗೆ, ಮಾಲಿನ್ಯ, ಘನತ್ಯಾಜ್ಯ ಇವುಗಳ ಸಂಯುಕ್ತ ಪ್ರಭಾವಗಳನ್ನು ಎದುರಿಸುವ ವಿಚಾರದಲ್ಲಿ ಹೊಂದಾಣಿಕೆ ಕೊರತೆಯಿದೆ. ಹಾಗೂ ಸ್ಥಳೀಯ ಆರ್ಥಿಕ ಮತ್ತು ಉದ್ಯೋಗ ಅಭಿವೃದ್ಧಿ ಬಗ್ಗೆ ಅವರಿಗಿರುವ ಕಾಳಜಿ ಕೇವಲ ಕುಂಟುನೆಪ, ಅದು ತಮಾಷೆಯಾಗಿಯೂ ಇಲ್ಲ. ಏಕೆಂದರೆ, ಇದರ ಮೇಲೆ, ಪ್ರಪಂಚದ ಶ್ರೀಮಂತ ಕ್ರೀಡಾ ತಂಡ ಪ್ರೀತಿಯಿಂದ ನೋಡಲಾಗುತ್ತಿದ್ದ ಎರಡು ಸಮುದಾಯ ಉದ್ಯಾನವನಗಳನ್ನು ಹಾಳುಮಾಡಿ ರತ್ ಕಟ್ಟಿದ ಮನೆ ತಲೆಎತ್ತಿದೆ. ಈಗ, ನಾನು ಈ ಮೊದಲು ಹೇಳಿದ ಅಂಕಿ ಅಂಶಗಳಿಗಿಂತ ಕಡಿಮೆ ಹೊಂದಿದ್ದೇವೆ. ಸೌತ್ ಬ್ರಾಂಕ್ಸ್ ನಿವಾಸಿಗಳಲ್ಲಿ ಕಾರು ಹೊಂದಿರುವವರು ಶೇಕಡ 25ಕ್ಕಿಂತ ಕಡಿಮೆಯಿದ್ದರೂ, ಈ ಯೋಜನೆಗಳಲ್ಲಿ ಸಾವಿರಾರು ಹೊಸ ಪಾರ್ಕಿಂಗ್ ಸ್ಥಳಗಳು ಸೇರಿವೆ, ಆದರೂ ಸಮೂಹ ಸಾರ್ವಜನಿಕ ಸಾರಿಗೆಯಲ್ಲಿ ಸಾಗಿ. ಈಗ, ಈ ವಿಸ್ತಾರವಾದ ಚರ್ಚೆಗಳಲ್ಲಿ ಏನು ಕೊರತೆಯಿದೆ ಎಂದರೆ ಒಂದು ಅನಾರೋಗ್ಯಕರ, ಪರಿಸರ ಸಂಬಂಧಿ ಸವಾಲೆದುರಿಸುತ್ತಿರುವ ಸಮುದಾಯಕ್ಕೆ ಬೇಕಾಗಿರುವ ಸಂರಚನಾತ್ಮಕ, ಸಂಪೋಷಣಾ ಬದಲಾವಣೆಗಳು ಇವುಗಳ ನಡುವೆ ಲಾಭ-ವೆಚ್ಚಗಳ ವಿಶ್ಲೇಷಣೆ. ನನ್ನ ಏಜೆನ್ಸಿ ಕೊಲಂಬಿಯ ವಿಶ್ವವಿದ್ಯಾಲಯ ಮತ್ತು ಇತರರ ಜೊತೆ ನಿಕಟವಾಗಿ ಕೆಲಸಮಾಡುತ್ತಿದೆ ಈ ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದೇವೆ.
ಈಗ ನಾವು ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳೋಣ. ನಾನು ಅಭಿವೃದ್ಧಿ ವಿರೋಧಿಯಲ್ಲ. ನಮ್ಮದು ಒಂದು ನಗರ. ಇದು ವನ್ಯ ಮೃಗಾಲಯವಲ್ಲ. ಹಾಗೆಯೇ ನಾನು ನನ್ನ ಅಂತರಿಕ ಬಂಡವಾಳಶಾಹಿಯನ್ನು ಅಪ್ಪಿಕೊಂಡಿದ್ದೇನೆ. ಬಹುಶಃ ನೀವೆಲ್ಲರೂ ಅದನ್ನು ಹೊಂದಿದ್ದೀರ, ಇಲ್ಲದಿದ್ದರೆ ನೀವು ಹೊಂದಬೇಕಾಗುತ್ತದೆ. (ನಗು). ಹಾಗಾಗಿ ಅಭಿವೃದ್ಧಿಗಾರರು ಹಣ ಸಂಪಾದಿಸುವುದರಿಂದ ನನಗೆ ಯಾವ ಸಮಸ್ಯೆ ಇಲ್ಲ. ಒಂದು ಸಂಪೋಷಣೀಯ ಸಮುದಾಯ-ಹಿತ ಅಭಿವೃದ್ಧಿಯಿಂದ ಸಾಕಷ್ಟು ಗಳಿಸಬಹುದೆಂಬುದಕ್ಕೆ ಹಿಂದೆ ಸಾಕಷ್ಟು ನಿದರ್ಶನಗಳೂ ಇವೆ. ಜೊತೆಗಾರರಾದ TEDsters ಬಿಲ್ ಮೆಕ್ ಡೊನೌ ಮತ್ತು ಎಮೆರಿ ಲೋವಿನ್ಸ್ -- ಇವರಿಬ್ಬರೂ ನನ್ನ ಹೀರೋಗಳು -- ವಾಸ್ತವವಾಗಿ ಕಾರ್ಯಸಾಧ್ಯವಾಗಿ ಮಾಡಬಹುದೆಂದು ತೋರಿಸಿಕೊಟ್ಟಿದ್ದಾರೆ. ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಬಹುದಾದಂಥ ಸಮುದಾಯಗಳನ್ನು ವಿಸ್ತೃತವಾಗಿ ಶೋಷಣೆ ಮಾಡುವಂತಹ ಅಭಿವೃದ್ಧಿಯಿಂದ ನನಗೆ ಸಮಸ್ಯೆಯಿದೆ. ಅದು ಮುಂದುವರೆಯುತ್ತಿರುವುದು ನಮಗೆ ನಾಚಿಕೆ ತರುವ ಸಂಗತಿ, ಏಕೆಂದರೆ ಭವಿಷ್ಯವನ್ನು ನಿರ್ಮಾಣ ಮಾಡುವ ಹೊಣೆ ನಮ್ಮೆಲ್ಲರದಾಗಿದೆ. ಆದರೆ ನನಗೆ ನಾನೇ ನೆನಪಿಸಿಕೊಳ್ಳುವ ಒಂದು ಅಂಶ ಎಂದರೆ ಇತರ ನಗರಗಳ ಚಿಂತಕರಿಂದ ಕಲಿಯಬಹುದಾದ ಹೆಚ್ಚಿನ ಸಾಧ್ಯತೆಗಳು. ಇದು ಜಾಗತೀಕರಣದ ಬಗ್ಗೆ ನನ್ನ ದೃಷ್ಟಿಕೋನ.
ನಾವು ಬೊಗೋಟಾ ತೆಗೆದುಕೊಳ್ಳೋಣ. ಪಾಪ, ಲ್ಯಾಟಿನೊ, ಸುತ್ತ ಬಂದೂಕುದಾರಿಗಳ ಹಿಂಸಾಚಾರ ಹಾಗು ಮಾದಕದ್ರವ್ಯಗಳು: ಸೌತ್ ಬ್ರಾಂಕ್ಸ್ನ ಖ್ಯಾತಿಗಿಂತ ಬೇರೆಯೇನಲ್ಲ. ಆದರೆ, ಈ ನಗರ 1990ರ ಅಂತ್ಯದಲ್ಲಿ ಅನುಗ್ರಹ ಪಡೆಯಿತು ತುಂಬಾ ಪ್ರಭಾವಶಾಲಿ ಎನ್ರಿಕ್ ಪೆನಲೋಸ ಎಂಬ ಹೆಸರಿನ ಮೇಯರ್ನಿಂದ. ಅವನು ಜನಸಂಖ್ಯೆಯ ಕಡೆ ದೃಷ್ಟಿ ಹಾಯಿಸಿದ. ಕೆಲವೇ ಬೊಗೋಟಾಗಳು ಕಾರು ಹೊಂದಿದ್ದರು, ಆದರೆ ಅಗಾಧವಾದ ನಗರದ ಸಂಪನ್ಮೂಲಗಳನ್ನು ಅವರ ಸೇವೆಗೆ ಮೀಸಲಿಡಲಾಗಿತ್ತು. ನೀವು ಮೇಯರ್ ಆಗಿದ್ದರೆ, ನೀವು ಅದರ ಬಗ್ಗೆ ಏನಾದರೂ ಮಾಡಬಹುದು. ಅವನ ಆಡಳಿತದಲ್ಲಿ ಐದು ಲೇನುಗಳ ಪ್ರಮುಖ ಮುನಿಸಿಪಲ್ ರಸ್ತೆಗಳನ್ನು ಮೂರು ಲೇನ್ಗೆ ಇಳಿಸಲಾಯಿತು ಆ ರಸ್ತೆಗಳಲ್ಲಿ ಪಾರ್ಕಿಂಗ್ ತೆಗೆದುಹಾಕಲಾಯಿತು, ಪಾದಚಾರಿ ಹಾದಿಗಳು ಮತ್ತು ಬೈಕ್ ಲೇನ್ಗಳನ್ನು ಅಗಲ ಮಾಡಲಾಯಿತು, ಸಾರ್ವಜನಿಕ ವ್ಯಾಪಾರ ಸಂಕೀರ್ಣಗಳನ್ನು ನಿರ್ಮಿಸಲಾಯಿತು, ಪ್ರಪಂಚದಲ್ಲೇ ಅತಿ ಸಮರ್ಥವಾದ ಬಸ್ ಸಾರ್ವಜನಿಕ ಸಂಚಾರ ವ್ಯವಸ್ಥೆ ಸೃಷ್ಟಿಸಲಾಯಿತು. ಇಂತಹ ಪ್ರತಿಭಾವಂತ ಪ್ರಯತ್ನಗಳಿಗಾಗಿ ಅವರನ್ನು ಹೆಚ್ಚು ಕಡಿಮೆ ಪದವಿ ವಿಯೋಗ ಮಾಡಲಾಯಿತು. ಆದರೆ, ಜನರು, ದಿನನಿತ್ಯ ಜೀವನದ ಸಮಸ್ಯೆಗಳನ್ನು ಪರಿಷ್ಕರಿಸುವಾಗ ತಮ್ಮ ಹಿತವನ್ನು ಮೊದಲು ಪರಿಗಣಿಸಲಾಗುತ್ತಿದೆ ಎಂಬುದನ್ನು ಅರಿತಾಗ ಆಶ್ಚರ್ಯಕರ ಸಂಗತಿಗಳು ಸಂಭವಿಸಿದವು. ಜನ ಕಸ ಬಿಸಾಕುವುದನ್ನು ನಿಲ್ಲಿಸಿದರು. ಅಪರಾಧದ ದರ ಕಡಿಮೆಯಾಯಿತು. ಏಕೆಂದರೆ ರಸ್ತೆಗಳಲ್ಲಿ ಜನ ತುಂಬಿರುತ್ತಿದ್ದರು. ಅವರ ಆಡಳಿತ ಹಲವಾರು ಕ್ಲಿಷ್ಟ ನಾಗರಿಕ ಸಮಸ್ಯೆಗಳನ್ನು ಒಂದೇ ಬಾರಿಗೆ ಪರಿಹರಿಸಲು ಮುಂದಾಯಿತು ಮತ್ತು ಅದಕ್ಕಾಗಿ ಅಭಿವೃದ್ಧಿಶೀಲ ಮುಂಗಡ ಹಣ ಮೀಸಲಿಡಲಾಯಿತು. ಈ ದೇಶದಲ್ಲಿ ನಮಗೆ ಯಾವ ನೆಪವೂ ಇಲ್ಲ. ನನ್ನನ್ನು ಕ್ಷಮಿಸಿ. ಆದರೆ ಇಲ್ಲಿ ಮುಖ್ಯ ಅಂಶವೆಂದರೆ, ಜನರ ಪ್ರಥಮ ಆದ್ಯತೆ ಕಾರು ಇಟ್ಟುಕೊಳ್ಳಲು ಶಕ್ತರಾದವರಿಗೆ ದಂಡಹಾಕುವ ಉದ್ದೇಶ ಹೊಂದಿರಲಿಲ್ಲ, ಆದರೆ ಎಲ್ಲ ಬೊಗೊಟೋನಿಗಳಿಗೂ ನಗರ ಪುನರ್ ನಿರ್ಮಾಣದಲ್ಲಿ ಭಾಗವಹಿಸಲು ಅವಕಾಶ ಕೊಡುವದಾಗಿತ್ತು. ಅಂತಹ ಅಭಿವೃದ್ಧಿ ಜನಸಂಖ್ಯೆಯ ಹೆಚ್ಚುಭಾಗ ಅದರ ವೆಚ್ಚವನ್ನು ಭರಿಸುವಂತಾಗಬಾರದು, ಇಲ್ಲಿ ಯು.ಎಸ್.ನಲ್ಲಿ ಅಂತಹ ವಿಚಾರವನ್ನು ತೀವ್ರ ಸುಧಾರಣೆ ಎಂದು ಪರಿಗಣಿಸಬಹುದು. ಆದರೆ ಬೊಗೋಟಾದ ಉದಾಹರಣೆ ಅದನ್ನು ಬದಲಾಯಿಸುವ ಶಕ್ತಿ ಹೊಂದಿದೆ.
ಆದರೂ ನಿಮಗೆ ಪ್ರಭಾವವೆಂಬ ಉಡುಗೊರೆಯ ಅನುಗ್ರಹವಿದೆ. ಅದಕ್ಕಾಗಿಯೇ ನೀವು ಇಲ್ಲಿದ್ದೀರ ಹಾಗೂ ನಾವು ಆಡುವ ಬದಲಾವಣೆಯ ಮಾಹಿತಿಗೆ ಬೆಲೆ ಕೊಡುತ್ತೀರ. ಎಲ್ಲ ಸ್ಥಳಗಳಲ್ಲೂ ಸಮಗ್ರ ಸಂಫೋಷಣಾ ಬದಲಾವಣೆಗಳನ್ನು ಬೆಂಬಲಿಸಲು ನಿಮ್ಮ ಪ್ರಭಾವ ಉಪಯೋಗಮಾಡಿ. ಕೇವಲ ಅದರ ಬಗ್ಗೆ TEDನಲ್ಲಿ ಮಾತ್ರ ಮಾತಾಡಬೇಡಿ. ಇದು ನಾನು ಕಟ್ಟುತ್ತಿರುವ ರಾಷ್ಟ್ರವ್ಯಾಪಿ ನೀತಿ ಕಾರ್ಯಕ್ರಮ, ಹಾಗೂ ನಿಮಗೆಲ್ಲಾ ತಿಳಿದಿರುವಂತೆ, ರಾಜಕೀಯಗಳು ವೈಯುಕ್ತಿಕ ವಿಷಯಗಳು. ಹೊಸ ಕಪ್ಪು ಬಣ್ಣವನ್ನು ಹಸಿರು ಬಣ್ಣ ಮಾಡಲು ನನಗೆ ಸಹಾಯಮಾಡಿ. ಸಂಪೋಷಣೆಯನ್ನು ಸಮ್ಮೋಹಕವಾಗಿ ಮಾಡಲು ನನಗೆ ಸಹಕರಿಸಿ. ಅದನ್ನು ನಿಮ್ಮ ಡಿನ್ನರ್ ಮತ್ತು ಕಾಕ್ ಟೈಲ್ ಸಂಭಾಷಣೆಯ ಭಾಗವಾಗಿ ಮಾಡಿ. ಪರಿಸರ ಮತ್ತು ಆರ್ಥಿಕ ನ್ಯಾಯಕ್ಕಾಗಿ ಹೋರಾಡಲು ನನಗೆ ಸಹಾಯಮಾಡಿ. ಮೂರು ಪಟ್ಟು ಲಾಭ ತರುವಂಥ ಹೂಡಿಕೆಗಳನ್ನು ಬೆಂಬಲಿಸಿ. ಎಲ್ಲರನ್ನೂ ಸೇರಿಸುವುದರ ಮೂಲಕ ಸಂಪೋಷಣೆಯನ್ನು ಪ್ರಜಾಭಿಪ್ರಾಯವಾದವಾಗಿ ಮಾಡಲು ಹಾಗೂ ಎಲ್ಲ ಕಡೆಗಳಲ್ಲೂ ಸಮಗ್ರ ಯೋಜನಾ ವ್ಯವಸ್ಥೆಗೆ ಒತ್ತಾಯ ಮಾಡಲು ನನಗೆ ಸಹಾಯಮಾಡಿ. ಓಹ್ ಒಳ್ಳೆಯದು, ನನಗೆ ಇನ್ನೂ ಸ್ವಲ್ಪ ಸಮಯವಿದೆ!
ಇಲ್ಲಿ ಕೇಳಿ -- ಅದೊಂದು ದಿನ ಬೆಳಗಿನ ಉಪಹಾರದ ನಂತರ ನಾನು ಶ್ರೀಯುತ ಗೋರೆ ಅವರೊಂದಿಗೆ ಮಾತಾಡಿದಾಗ ಅವರ ಹೊಸ ಮಾರಾಟ ಕಾರ್ಯತಂತ್ರದಲ್ಲಿ ಪರಿಸರ ನ್ಯಾಯ ಕಾರ್ಯಕರ್ತರನ್ನು ಯಾವ ರೀತಿ ಸೇರಿಸಿಕೊಳ್ಳಲಾಗುತ್ತದೆ ಎಂದು ಕೇಳಿದೆ. ಅವರ ಉತ್ತರ ಒಂದು ಅನುದಾನ ಕಾರ್ಯಕ್ರಮ. ನಾನು ನಿಧಿಗಾಗಿ ಕೇಳುತ್ತಿಲ್ಲವೆಂಬುದು ಅವರಿಗೆ ಅರ್ಥವಾದಂತಿರಲಿಲ್ಲ. ನಾನು ಅವರಿಗೆ ಒಂದು ಪ್ರಸ್ತಾಪ ನೀಡುತ್ತಿದ್ದೆ. (ಚಪ್ಪಾಳೆ).
ನನಗೆ ತೊಂದರೆ ನೀಡಿದ ಅಂಶವೆಂದರೆ ಈಗಲೂ ಈ ಮೇಲು-ಕೀಳೆಂಬ ದೃಷ್ಟಿಕೋನ ಇನ್ನೂ ಇದೆ. ಈಗ, ನನ್ನನ್ನು ತಪ್ಪು ತಿಳಿಯಬೇಡಿ, ನಮಗೆ ಹಣ ಬೇಕು. (ನಗು). ಆದರೆ ನೆಲಮಟ್ಟದ ಗುಂಪುಗಳು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಉಪಸ್ಥಿತರಾಗಿರಬೇಕಾದ ಅಗತ್ಯವಿದೆ. ಶ್ರೀಯುತ ಗೋರೆ ನಮಗೆ ನೆನಪಿಸಿದಂತೆ ನಾವು ಪ್ರತಿದಿನ ಪೋಲುಮಾಡುವ ಶೇಕಡ 90 ಶಕ್ತಿ, ನಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ಕಷ್ಟಪಟ್ಟು ಗಳಿಸಿದ ಅನುಭವದ ಲೆಕ್ಕದಲ್ಲಿಲ್ಲ.(ಚಪ್ಪಾಳೆ).
ನಾನು ಅಷ್ಟು ದೂರದಿಂದ ನಿಮ್ಮನ್ನು ಈ ರೀತಿ ಭೇಟಿಮಾಡಲು ಬಂದಿದ್ದೇನೆ. ದಯಮಾಡಿ ನನ್ನನ್ನು ಪೋಲುಮಾಡಬೇಡಿ. ಜೊತೆಯಲ್ಲಿ ಕೆಲಸಮಾಡುವುದರಿಂದ ನಾವು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ವ್ಯಕ್ತಿಗಳ ಚಿಕ್ಕ ಗುಂಪುಗಳಲ್ಲೊಂದಾಗಬಹುದು ಇವರು ವಿಶ್ವವನ್ನು ನಾವು ಬದಲಾಯಿಸಲು ಸಾಧ್ಯವೆಂಬ ನಂಬಿಕೆ ಇಡುವ ಧೈರ್ಯ ಮತ್ತು ಉದ್ಧಟತನ ಹೊಂದಿದ್ದಾರೆ. ನಾವು ಈ ಸಮಾವೇಶಕ್ಕೆ ಜೀವನದ ಬೇರೆ ಬೇರೆ ಹಂತಗಳಿಂದ ಬಂದಿರಬಹುದು, ಆದರೆ, ನನ್ನನ್ನು ನಂಬಿ, ನಾವೆಲ್ಲರೂ ಆಶ್ಚರ್ಯಕರವಾದ ಶಕ್ತಿಯುತವಾದ ಒಂದು ಅಂಶವನ್ನು ಹಂಚಿಕೊಳ್ಳುತ್ತೇವೆ -- ನಾವು ಕಳೆದುಕೊಳ್ಳುವುದೇನೂ ಇಲ್ಲ, ಎಲ್ಲವೂ ಲಾಭವೇ. ಸೀಯಾವೊ ಬೆಲ್ಲೋಸ್! (ಚಪ್ಪಾಳೆ).
You can share this video by copying this HTML to your clipboard and pasting into your blog or web page. This video will play with subtitles.
You either have JavaScript turned off or have an old version of the Adobe Flash Player. To view this rating widget you
need to get the latest Flash player.
If your browser allows only "trusted sites" to execute Javascript, you should add the "googleapis.com" domain to your whitelist to allow our Flash detection to work properly.
Got an idea, question, or debate inspired by this talk? Start a TED Conversation.
ಭಾವನಾತ್ಮಕವಾದ ಭಾಷಣದಲ್ಲಿ, ಮೆಕ್ಅರ್ಥರ್ ಪುರಸ್ಕಾರ ವಿಜೇತ ಹೋರಾಟಗಾರ್ತಿ ಮೆಜೋರಾ ಕಾರ್ಟೆರ್ ಪರಿಸರ ನ್ಯಾಯಕ್ಕಾಗಿ ಸೌತ್ ಬ್ರಾಂಕ್ಸ್ನಲ್ಲಿ ಆಕೆ ನಡೆಸಿದ ಹೋರಾಟದ ವಿವರ ನೀಡುತ್ತಾರೆ ಮತ್ತು ಹೇಗೆ ಅಲ್ಪಸಂಖ್ಯಾತ ಆಯಕಟ್ಟಿನ ಪ್ರದೇಶಗಳು ನಗರ ನಿರ್ಮಾಣ ಯೋಜನೆಯ ಹುಳುಕುಗಳಿಂದಾಗಿ ತೊಂದರೆ ಅನುಭವಿಸುತ್ತಿವೆ ಎಂಬ ವಿವರಗಳನ್ನು ನೀಡುತ್ತಾರೆ.
Majora Carter redefined the field of environmental equality, starting in the South Bronx at the turn of the century. Now she is leading the local economic development movement across the USA. Full bio »
18:00 Posted: Jan 2008
Views 2,341,645 | Comments 413
20:34 Posted: Oct 2007
Views 239,790 | Comments 56
15:43 Posted: Feb 2008
Views 381,905 | Comments 52
Just follow the guidelines outlined under our Creative Commons license.
This comment will be attributed to . Not ? Sign Out.