10 ವರ್ಷಗಳ ಹಿಂದೆ, ನಾನು ಪ್ರಪಂಚದ ಅಭಿವೃದ್ಧಿ ಬೋಧನೆಯನ್ನು ಸ್ವೀಡಿಶ್ ಪದವಿಪೂರ್ವ ವಿದ್ಯಾರ್ಥಿಗಳಿಗೆ ಮಾಡುವ ಕೆಲಸ ಒಪ್ಪಿಕೊಂಡೆ. ಅದು 20 ವರ್ಷಗಳ ಕಾಲ ಆಫ್ರಿಕಾದಲ್ಲಿ ಹಸಿವಿನ ಬಗ್ಗೆ ಆಫ್ರಿಕನ್ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುತ್ತಿದ್ದಾಗ, ಹಾಗಾಗಿ ನಾನು ಪ್ರಪಂಚದ ಬಗ್ಗೆ ಅಷ್ಟಿಷ್ಟು ತಿಳಿದುಕೊಂಡಿರಬೇಕಾದ ಅಗತ್ಯವಿತ್ತು. ಹಾಗೂ ನಮ್ಮ ವೈದ್ಯಕೀಯ ವಿಶ್ವವಿದ್ಯಾಲಯ, ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ನಲ್ಲಿ ಗ್ಲೋಬಲ್ ಹೆಲ್ತ್ ಎಂಬ ಪದವಿಪೂರ್ವ ಕೋರ್ಸ್ ಪ್ರಾರಂಭಿಸಿದೆ. ಆದರೆ ನಿಮಗೆ ಅಂತಹ ಅವಕಾಶ ದೊರಕಿದರೆ, ನೀವು ಸ್ವಲ್ಪ ಧೈರ್ಯಹೀನರಾಗುತ್ತೀರ. ನಾನಂದುಕೊಂಡೆ, ಈ ವಿದ್ಯಾರ್ಥಿಗಳು ನಮ್ಮಲ್ಲಿಗೆ ಬರುವ ಮೊದಲು ಸ್ವೀಡಿಶ್ ಕಾಲೇಜು ವ್ಯವಸ್ಥೆಗಳಲ್ಲಿ ಅತಿ ಹೆಚ್ಚು ಗ್ರೇಡ್ ಗಳಿಸಿರಬಹುದೆಂದು -- ಅವರಿಗೆ ಎಲ್ಲವೂ ತಿಳಿದಿರಬಹುದು ನಾನೇನು ಅವರಿಗೆ ಬೋಧಿಸುತ್ತೇನೆಂದು. ಆದ್ದರಿಂದ ಅವರು ಬಂದಾಗ ನಾನೊಂದು ಪೂರ್ವ ಪರೀಕ್ಷೆ ನಡೆಸಿದೆ. ಹಾಗೂ ನಾನು ಸಾಕಷ್ಟು ಅರಿತುಕೊಂಡ ಒಂದು ಪ್ರಶ್ನೆ ಇದು. "ಈ ಐದು ಜೊತೆಗಳಲ್ಲಿ ಯಾವ ದೇಶದಲ್ಲಿ ಶಿಶುಮರಣ ದರ ಅತಿ ಹೆಚ್ಚು?"
ಅದನ್ನು ನಾನು ಹೀಗೆ ಹೇಳುತ್ತೇನೆ, ಪ್ರತಿ ಜೊತೆ ದೇಶಗಳಲ್ಲಿ ಒಂದರಲ್ಲಿ ಶಿಶುಮರಣ ದರ ಇನ್ನೊಂದಕ್ಕಿಂತ ಎರಡರಷ್ಟಿದೆ. ಹಾಗೆಂದರೆ ಈ ವ್ಯತ್ಯಾಸ ನಿಶ್ಚಯವಿಲ್ಲದ ಮಾಹಿತಿಗಿಂತ ಹೆಚ್ಚು. ಇಲ್ಲಿ ನಾನು ನಿಮಗೆ ಪರೀಕ್ಷೆ ಇಡುವುದಿಲ್ಲ, ಆದರೆ ಅದು ಟರ್ಕಿ, ಅಲ್ಲಿ ಎಲ್ಲಕಿಂತ ಹೆಚ್ಚು, ಪೋಲೆಂಡ್, ರಷ್ಯಾ, ಪಾಕಿಸ್ತಾನ್ ಮತ್ತು ದಕ್ಷಿಣ ಆಫ್ರಿಕಾ. ಸ್ವೀಡಿಶ್ ವಿದ್ಯಾರ್ಥಿಗಳ ಫಲಿತಾಂಶಗಳು ಹೀಗಿದ್ದವು. ನಾನು ಮಾಡಿದೆ ಅದರಿಂದ ನನಗೆ ತುಂಬಾ ಸಂಕುಚಿತವಾಗಿರುವ ಭರವಸೆ ಅಂತರ ದೊರಕಿತು, ನನಗೆ ಸಂತಸವಾಯಿತು: ಐದು ಸಾಧ್ಯತೆಗಳಲ್ಲಿ 1.8 ಸರಿಯಾದ ಉತ್ತರ. ಅಂದರೆ ಇದರ ಅರ್ಥ ಅಂತಾರಾಷ್ಟ್ರೀಯ ಆರೋಗ್ಯ ಪ್ರೊಫೆಸರ್ ಗೆ ಇಲ್ಲಿ ಅವಕಾಶವಿದೆ -- (ನಗು) ಅದೂ ನನ್ನ ಕೂರ್ಸ್ ಗೆ.
ಆದರೆ, ಒಂದು ದಿನ ತಡರಾತ್ರಿಯಲ್ಲಿ, ನಾನು ವರದಿಯನ್ನು ತಯಾರಿಸುತ್ತಿದ್ದಾಗ ನನ್ನ ಅವಿಷ್ಕಾರದ ಬಗ್ಗೆ ನನಗೆ ಅರಿವಾಯಿತು ಸ್ವೀಡಿಶ್ ಬುದ್ಧಿವಂತ ವಿದ್ಯಾರ್ತಿಗಳಿಗೆ ಸಂಖ್ಯಾನುಸಾರ ಪ್ರಪಂಚದ ಬಗ್ಗೆ ಚಿಂಪಾಂಜಿಗಳಿಗಿಂತ ಕಡಿಮೆ ಗೊತ್ತಿದೆ. (ನಗು) ಏಕೆಂದರೆ ಚಿಂಪಾಂಜಿಗಳಿಗೆ ನಾನು ಎರಡು ಬಾಳೆಹಣ್ಣು ಕೊಟ್ಟು ಶ್ರೀಲಂಕವೇ ಅಥವಾ ಟರ್ಕಿಯೇ ಎಂದು ಕೇಳಿದರೆ ಅರ್ಧ ಉತ್ತರ ಸರಿಯಾಗಿ ಹೇಳುತ್ತವೆ. ಅವುಗಳ ಅರ್ಧದಷ್ಟು ಉತ್ತರಗಳು ಸರಿಯಿರುತ್ತವೆ.
ಆದರೆ ವಿದ್ಯಾರ್ಥಿಗಳು ಆ ಮಟ್ಟದಲ್ಲಿಲ್ಲ. ನನ್ನ ಸಮಸ್ಯೆ ಬುದ್ಧಿಹೀನತೆ ಆಗಿರಲಿಲ್ಲ: ಅದು ಪೂರ್ವಭಾವನೆಗಳು.
ನಾನು ಕರೋಲಿನ್ಸ್ಕಾ ಇನ್ಸ್ಟಿಟ್ಯೂಟ್ ನ ಪ್ರೊಫೆಸರ್ ಗಳನ್ನು ಅನೀತಿಯುತವಾಗಿ ಅಭ್ಯಾಸಮಾಡಿದೆ. (ನಗು) -- ಈ ಸಂಸ್ಥೆ ವೈದ್ಯಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಕೊಡುತ್ತದೆ, ಹಾಗೂ ಅವರು ಅಲ್ಲಿ ಚಿಂಪಾಂಜಿಗೆ ಸಮವಾಗಿದ್ದಾರೆ. (ನಗು) ಸಂಪರ್ಕದ ಅವಶ್ಯಕತೆಯಿದೆಯೆಂದು ನನಗೆ ಅರ್ಥವಾಗಿದ್ದು ಇಲ್ಲಿಯೇ, ಏಕೆಂದರೆ ಪ್ರಪಂಚದಲ್ಲಿ ಏನು ನಡೆಯುತ್ತಿದೆಯೆಂಬ ಮಾಹಿತಿ ಹಾಗೂ ಪ್ರತಿ ರಾಷ್ಟ್ರದ ಶಿಶು ಆರೋಗ್ಯ ಎಲ್ಲರಿಗೂ ತಿಳಿದದ್ದೆ.
ನಾವು ಈ ಸಾಫ್ಟ್ವೇರ್ ಸಿದ್ಧಪಡಿಸಿದೆವು, ಅದು ಹೀಗೆ ತೋರಿಸುತ್ತದೆ: ಇಲ್ಲಿ ಪ್ರತಿ ಗುಳ್ಳೆ ಒಂದು ದೇಶ. ಇಲ್ಲಿ ಕಾಣಿಸುವ ಇದು ಚೀನಾ. ಇದು ಇಂಡಿಯಾ.®® ಗುಳ್ಳೆಯ ಗಾತ್ರ ಜನಸಂಖ್ಯೆ ಸೂಚಿಸುತ್ತದೆ, ಮತ್ತು ಈ ಅಕ್ಷದ ಮೇಲೆ ನಾನು ಫಲವತ್ತತೆ ನಮೂದಿಸುತ್ತೇನೆ. ಏಕೆಂದರೆ ನನ್ನ ವಿದ್ಯಾರ್ಥಿಗಳು, ಪ್ರಪಂಚದ ಕಡೆ ನೋಡಿದಾಗ ಅವರೇನೆಂದರು, ಮತ್ತು ನಾನು ಅವರನ್ನು ಕೇಳಿದೆ, "ನೀವು ಈ ಪ್ರಪಂಚದ ಬಗ್ಗೆ ನಿಜವಾಗಿಯೂ ಏನೆಂದುಕೊಂಡಿದ್ದೀರ?" ಸರಿ, ನಾನು ಕಂಡುಹಿಡಿದದ್ದೆಂದರೆ, ಮುಖ್ಯವಾಗಿ ಪಠ್ಯಪುಸ್ತಕ ಟಿನ್ಟಿನ್. (ನಗು) ಅವರು ಹೇಳಿದರು, "ಪ್ರಪಂಚ ಇನ್ನೂ ಕೂಡ ’ನಾವು’ ಮತ್ತು ’ಅವರು’ ನಾವು ಎಂದರೆ ಪಾಶ್ಚಿಮಾತ್ಯ ವಿಶ್ವ ಹಾಗೂ ಅವರು ಎಂದರೆ ತೃತೀಯ ವಿಶ್ವ."©© "ಪಾಶ್ಚಿಮಾತ್ಯ ವಿಶ್ವ ಎಂದರೇನು?" ಎಂದು ನಾನು ಕೇಳಿದೆ.® "ಅದು, ದೀರ್ಘ ಜೀವನ ಮತ್ತು ಚಿಕ್ಕ ಕುಟುಂಬ, ಹಾಗೂ ತೃತೀಯ ವಿಶ್ವ ಚಿಕ್ಕ ಜೀವನ ಮತ್ತು ದೊಡ್ಡ ಕುಟುಂಬ."
ಆದ್ದರಿಂದ ನಾನು ಇಷ್ಟನ್ನು ಮಾತ್ರ ತೋರಿಸಲು ಸಾಧ್ಯ. ಇಲ್ಲಿ ನಾನು ಫಲವತ್ತತೆ ಬರೆಯುತ್ತೇನೆ:ಒಬ್ಬ ಮಹಿಳೆಗಿರುವ™ ಮಕ್ಕಳ ಸಂಖ್ಯೆ, ಒಂದು, ಎರಡು, ಮೂರು, ನಾಲ್ಕು, ಒಬ್ಬ ಮಹಿಳೆಗೆ ಎಂಟು ಮಕ್ಕಳವರೆಗೂ. 1962 -- 1960 ರಿಂದ ನಮ್ಮಲ್ಲಿ ಒಳ್ಳೆಯ ಮಾಹಿತಿ ಇದೆ -- ಎಲ್ಲ ದೇಶಗಳ ಕುಟುಂಬಗಳ ಗಾತ್ರದ ಬಗ್ಗೆ. ತಪ್ಪಿನ ಸಂಭವ ಬಹಳ ಕಡಿಮೆ. ಇಲ್ಲಿ ನಾನು ಜನನದ ಸಮಯದಲ್ಲಿ ಆಯಸ್ಸಿನ ನಿರೀಕ್ಷೆ ಹಾಕುತ್ತೇನೆ, ಕೆಲವು ದೇಶಗಳಲ್ಲಿ 30 ವರ್ಷಗಳು, ಕೆಲವು 70 ವರ್ಷಗಳವರೆಗೆ. ಹಾಗೂ 1962 ರಲ್ಲಿ, ಇಲ್ಲಿ ಕೆಲವು ದೇಶಗಳ ಗುಂಪು ಇತ್ತು. ಅವು ಕೈಗಾರಿಕೀಕೃತ ರಾಷ್ಟ್ರಗಳಾಗಿದ್ದುವು, ಅಲ್ಲಿ ಚಿಕ್ಕ ಕುಟುಂಬಗಳು ಮತ್ತು ದೀರ್ಘ ಜೀವನ ಇತ್ತು. ಹಾಗೂ ಇವು ಅಭಿವೃದ್ಧಿಶೀಲ ರಾಷ್ಟ್ರಗಳಾಗಿದ್ದುವು: ಅವು ದೊಡ್ಡ ಕುಟುಂಬಗಳನ್ನು ಹೊಂದಿದ್ದವು ಹಾಗೂ ಹೋಲಿಕೆಯಿಂದ ಚಿಕ್ಕ ಜೀವನ ಹೊಂದಿದ್ದವು. ಈಗ, 1962 ರಿಂದೀಚೆಗೆ ಏನಾಗಿದೆ? ನಾವು ಬದಲಾವಣೆ ನೋಡಬಯಸುತ್ತೇವೆ. ಈ ವಿದ್ಯಾರ್ಥಿಗಳು ಸರಿಯೇ? ಈಗಲೂ ಎರಡು ವಿಧದ ರಾಷ್ಟ್ರಗಳಿವೆಯೆ? ಅಥವಾ ಈ ಅಭಿವೃದ್ಧಿಶೀಲ ರಾಷ್ಟ್ರಗಳು ಚಿಕ್ಕ ಕುಟುಂಬ ಹೊಂದಿದ್ದು ಇಲ್ಲಿ ವಾಸಿಸುತ್ತಿವೆಯೆ? ಅಥವಾ ಅವುಗಳು ದೀರ್ಘವಾದ ಜೀವನ ಹೊಂದಿದ್ದು ಅಲ್ಲಿ ವಾಸಿಸುತ್ತಿವೆಯೆ?
ನಾವು ಈಗ ನೋಡೋಣ. ಆಗ ನಾವು ಪ್ರಪಂಚ ಸ್ಥಗಿತಗೊಳಿಸಿದೆವು. ಇವೆಲ್ಲ ಯು.ಎನ್. ಅಂಕಿ ಅಂಶಗಳು ಅವು ದೊರೆಯುತ್ತವೆ. ಈಗ ಪ್ರಾರಂಭಿಸೋಣ. ಇಲ್ಲಿ ನೀವು ನೋಡಬಲ್ಲಿರಾ? ಅಲ್ಲಿ ಚೀನಾ ಇದೆ, ಉತ್ತಮ ಆರೋಗ್ಯದ ಕಡೆ ಸಾಗುತ್ತಿದೆ, ಅಲ್ಲಿ ಅಭಿವೃದ್ಧಿಯಾಗುತ್ತಿದೆ. ಎಲ್ಲ ಹಸಿರು ಲ್ಯಾಟಿನ್ ಅಮೆರಿಕನ್ ದೇಶಗಳು ಚಿಕ್ಕ ಕುಟುಂಬಗಳ ಕಡೆ ಸಾಗುತ್ತಿವೆ. ನಿಮ್ಮ ಈ ಹಳದಿ ಬಣ್ಣಗಳು ಅರೇಬಿಕ್ ರಾಷ್ಟ್ರಗಳು, ಹಾಗೂ ಅವರು ದೊಡ್ಡ ಕುಟುಂಬಗಳನ್ನು ಹೊಂದಿದ್ದಾರೆ, ಆದರೆ ಅವರು -- ದೀರ್ಘ ಜೀವನವಿಲ್ಲ, ದೊಡ್ಡ ಕುಟುಂಬಗಳಿಲ್ಲ ಆಫ್ರಿಕನ್ನರು ಇಲ್ಲಿ ಕೆಳಗೆ ಹಸುರು ಬಣ್ಣ ನೋಡಿ. ಅವರಿನ್ನೂ ಇಲ್ಲಿಯೇ ಇದ್ದಾರೆ. ಇದು ಇಂಡಿಯಾ. ಇಂಡೋನೇಶಿಯಾ ಬಹಳ ವೇಗವಾಗಿ ಸಾಗುತ್ತಿದೆ. (ನಗು) ಹಾಗೂ 80 ರ ದಶಕದಲ್ಲಿ, ಇಲ್ಲಿ ಆಫ್ರಿಕನ್ ದೇಶಗಳ ನಡುವೆ ಬಂಗ್ಲಾದೇಶ ಇದೆ. ಆದರೆ ಈಗ, ಬಂಗ್ಲಾದೇಶ -- 80 ರ ದಶಕದಲ್ಲಿ ಒಂದು ಆಶ್ಚರ್ಯ ಸಂಭವಿಸುತ್ತದೆ: ಇಮಾಮ್ ಗಳು ಕುಟುಂಬ ಯೋಜನೆ ಪ್ರಾರಂಭಿಸುತ್ತಾರೆ. ಅವರು ಆ ಮೂಲೆಗೆ ಏರುತ್ತಾರೆ. ಮತ್ತು 90 ರ ದಶಕದಲ್ಲಿ ಕ್ರೂರವಾದ ಎಚ್.ಐ.ವಿ. ರೋಗ ಕಾಲಿಟ್ಟಿತು ಅದು ಆಫ್ರಿಕನ್ ದೇಶಗಳ ಆಯುರ್ಮಾನವನ್ನು ಕಡಿಮೆಮಾಡುತ್ತದೆ ಹಾಗೂ ಉಳಿದವರೆಲ್ಲರೂ ಆ ಮೂಲೆಗೆ ಸರಿಯುತ್ತಾರೆ, ದೀರ್ಘ ಜೀವನ ಮತ್ತು ಚಿಕ್ಕ ಕುಟುಂಬ ಇರುವಲ್ಲಿ, ಹಾಗೂ ನಾವು ಒಂದು ಸಂಪೂರ್ಣ ಹೊಸ ಪ್ರಪಂಚ ಹೊಂದಿದ್ದೇವೆ. (ಚಪ್ಪಾಳೆ)
ನಾನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಮತ್ತು ವಿಯೆಟ್ನಾಮ್ ಎರಡರ ಮಧ್ಯೆ ಹೋಲಿಕೆ ಮಾಡೋಣ. 1964: ಅಮೆರಿಕಾ ಚಿಕ್ಕ ಕುಟುಂಬ ಹಾಗೂ ದೀರ್ಘ ಜೀವನ ಹೊಂದಿತ್ತು; ವಿಯೆಟ್ನಾಮ್ ದೊಡ್ಡ ಕುಟುಂಬ ಮತ್ತು ಚಿಕ್ಕ ಜೀವನ ಹೊಂದಿತ್ತು. ಮತ್ತು ಹೀಗಾಗುತ್ತದೆ: ಯುದ್ಧದ ಅಂಕಿಅಂಶಗಳ ಪ್ರಕಾರ ಎಲ್ಲ ಸಾವುಗಳನ್ನು ಪರಿಗಣಿಸಿದರೂ, ಆಯುಷ್ಯ ಉತ್ತಮಗೊಂಡಿತ್ತು. ವರ್ಷದ ಕೊನೆಯಲ್ಲಿ ವಿಯೆಟ್ನಾಮ್ ನಲ್ಲಿ ಕುಟುಂಬ ಯೋಜನೆ ಪ್ರಾರಂಭವಾಯಿತು ಹಾಗೂ ಅವರು ಚಿಕ್ಕ ಸಂಸಾರಗಳನ್ನು ಆಯ್ಕೆಮಾಡಿದರು. ಹಾಗೂ ಅಲ್ಲಿ ಯುನೈಟೆಡ್ ಸ್ಟೇಟ್ಸ್ ದೀರ್ಘ ಜೀವನಕ್ಕೆ ಪ್ರಯತ್ನಿಸುತ್ತಿದೆ, ಚಿಕ್ಕ ಕುಟುಂಬ ಹಾಗೆಯೇ ಉಳಿಸಿಕೊಂಡು. ಮತ್ತು ಈಗ 80 ರ ದಶಕದಲ್ಲಿ, ಅವರು ಕಮ್ಯುನಿಸ್ಟ್ ಯೋಜನೆ ಬಿಡುತ್ತಾರೆ ಹಾಗೂ ಮಾರುಕಟ್ಟೆ ವಹಿವಾಟಿಗೆ ಒಲವು ತೋರಿಸುತ್ತಾರೆ, ಹಾಗೂ ಅದು ಸಾಮಾಜಿಕ ಜೀವನಕ್ಕಿಂತ ವೇಗವಾಗಿ ಚಲಿಸುತ್ತದೆ. ಈ ದಿನ ನಾವು ಅದೇ ಆಯುರ್ಮಾನ ಮತ್ತು ಅದೇ ಕುಟುಂಬ ಗಾತ್ರ ಇರುವ ವಿಯೆಟ್ನಾಮ್ ನ್ನು ಹೊಂದಿದ್ದೇವೆ ಈ ವಿಯೆಟ್ನಾಮ್, 2003 ರಲ್ಲಿ ಯುನೈಟೆಡ್ ಸ್ಟೇಟ್ಸ್ 1974 ರಲ್ಲಿ ಯುದ್ಧದ ಅಂತ್ಯದಲ್ಲಿ ಇದ್ದಂತೆ. ನನಗನ್ನಿಸುತ್ತದೆ, ನಾವೆಲ್ಲ -- ನಾವು ಈ ಮಾಹಿತಿಯ ಕಡೆ ನೋಡದಿದ್ದರೆ -- ಏಷಿಯಾದಲ್ಲಿ ಆಗಿರುವ ಮಹತ್ತರ ಬದಲಾವಣೆಗೆ ಕಡಿಮೆ ಬೆಲೆ ಕೊಡುತ್ತೇವೆ, ಅದು ನಾವು ನೋಡಿದ ಆರ್ಥಿಕ ಬದಲಾವಣೆಗೆ ಮೊದಲು ಬಂದ ಸಾಮಾಜಿಕ ಬದಲಾವಣೆ.
ನಾವು ಇನ್ನೊಂದು ರೀತಿಯ ವಿಶ್ಲೇಷಣೆ ಮಾಡೋಣ, ಇಲ್ಲಿ ನಾವು ತೋರಿಸಬಹುದು ಆದಾಯದ ಹಂಚಿಕೆ ಕ್ಷೇತ್ರ. ಇದು ಜನರ ಆದಾಯದ ವಿಶ್ವದ ಹಂಚಿಕೆ. ಒಂದು ಡಾಲರ್, 10 ಡಾಲರ್ ಗಳು ಅಥವಾ 100 ಡಾಲರ್ ಗಳು ದಿನಕ್ಕೆ. ಬಡವ ಮತ್ತು ಶ್ರೀಮಂತ ಇವರ ಮಧ್ಯೆ ಈಗ ಅಂತರವಿಲ್ಲ. ಇದೊಂದು ಕಲ್ಪನೆ. ಇಲ್ಲೊಂದು ಚಿಕ್ಕ ಉಬ್ಬು ಇದೆ. ಆದರೆ ಉದ್ದಕ್ಕೂ ಜನರಿದ್ದಾರೆ. ಹಾಗೆಯೇ ನಾವು ಈ ಆದಾಯ ಎಲ್ಲಿ ಕೊನೆಗೊಳ್ಳುತ್ತದೆ ಎಂದು ನೋಡಿದರೆ -- ಈ ಆದಾಯ -- ಇದು ಶೇಕಡ 100 ಪ್ರಪಂಚದ ಆದಾಯ. ಹಾಗೆಯೇ, ಶೇಕಡ 20 ಅತಿ ಶ್ರೀಮಂತರು, ಇದರಲ್ಲಿ ಶೇಕಡ 74 ತೆಗೆದುಕೊಳ್ಳುತ್ತಾರೆ. ಮತ್ತು ಶೇಕಡ 20 ಅತಿ ಬಡವರು, ಸುಮಾರು ಶೇಕಡ ಎರಡು ತೆಗೆದುಕೊಳ್ಳುತ್ತಾರೆ. ಇದು ಏನು ತೋರಿಸುತ್ತದೆಂದರೆ ಅಭಿವೃದ್ಧಿಶೀಲ ರಾಷ್ಟ್ರಗಳ ಪರಿಕಲ್ಪನೆ ಅನುಮಾನಾಸ್ಪದ. ನಾವು ಸಹಾಯದ ಬಗ್ಗೆ ಆಲೋಚಿಸುತ್ತೇವೆ, ಈ ಜನಗಳು ಇಲ್ಲಿ ಈ ಜನಗಳಿಗೆ ಸಹಾಯ ಮಾಡುವಂತೆ. ಆದರೆ ಮಧ್ಯದಲ್ಲಿ, ನಾವು ವಿಶ್ವ ಜನಸಂಖ್ಯೆ ಹೊಂದಿದ್ದೇವೆ, ಹಾಗೂ ಅವರು ಶೇಕಡ 24 ಆದಾಯ ಹೊಂದಿದ್ದಾರೆ.
ನಾವು ಇದನ್ನು ಇತರ ರೂಪದಲ್ಲಿ ಕೇಳಿದ್ದೇವೆ. ಹಾಗೂ ಇವರು ಯಾರು? ಬೇರೆ ಬೇರೆ ದೇಶಗಳು ಎಲ್ಲಿವೆ? ನಾನು ಆಫ್ರಿಕಾ ತೋರಿಸಬಲ್ಲೆ. ಇದು ಆಫ್ರಿಕಾ. ವಿಶ್ವ ಜನಸಂಖ್ಯೆಯ ಶೇಕಡ 10, ಬಹುತೇಕ ಬಡವರು. ಇದು ಒ.ಇ.ಸಿ.ಡಿ. ಶ್ರೀಮಂತ ದೇಶ. ಯು.ಎನ್. ನ ಕಂಟ್ರಿ ಕ್ಲಬ್. ಹಾಗೂ ಅವರು ಈ ಬದಿಯಲ್ಲಿದ್ದಾರೆ. ಆಫ್ರಿಕಾ ಮತ್ತು ಒ.ಇ.ಸಿ.ಡಿ. ಒಂದರ ಮೇಲೊಂದಿದ್ದಂತೆ. ಹಾಗೂ ಇದು ಲ್ಯಾಟಿನ್ ಅಮೆರಿಕಾ. ಈ ಭೂಮಿಯ ಮೇಲಿರುವುದೆಲ್ಲವೂ ಇಲ್ಲಿದೆ, ಲ್ಯಾಟಿನ್ ಅಮೆರಿಕಾದಲ್ಲಿ ಅತಿ ಬಡವರಿಂದ ಅತಿ ಶ್ರೀಮಂತರವರೆಗೆ ಇದ್ದಾರೆ. ಮತ್ತು ಇದರ ಮೇಲೆ ನಾವು ಪೂರ್ವ ಯೂರೋಪ್ ನ್ನು ಇಡಬಹುದು, ನಾವು ಪೂರ್ವ ಏಷಿಯಾವನ್ನು ಇಡಬಹುದು ಮತ್ತು ನಾವು ದಕ್ಷಿಣ ಏಷಿಯಾ ಇಡುತ್ತೇವೆ. ಹಾಗೂ ನಾವು ಕಾಲದಲ್ಲಿ ಹಿಂದಕ್ಕೆ ಸರಿದರೆ ಇದು ಹೇಗೆ ಕಾಣುತ್ತದೆ,™ ಸುಮಾರು 1970 ಕ್ಕೆ? ಹಾಗೆಯೇ ಇದು ಉಬ್ಬಿಗಿಂತ ಬೇರೆ ರೀತಿ ಇದೆ. ಹಾಗೂ ಸಂಪೂರ್ಣ ಬಡತನದಲ್ಲಿ ಜೀವಿಸಿದ್ದ ಏಷಿಯನ್ನರಿದ್ದಾರೆ. ವಿಶ್ವದಲ್ಲಿದ್ದ ಸಮಸ್ಯೆ ಏಷಿಯಾದಲ್ಲಿದ್ದ ಬಡತನ. ಈಗ ನಾನು ವಿಶ್ವ ಮುಂದಕ್ಕೆ ಚಲಿಸಲು ಬಿಟ್ಟರೆ, ನೀವು ನೋಡುತ್ತೀರ, ಒಂದು ಕಡೆ ಜನಸಂಖ್ಯೆ ಹೆಚ್ಚಾದರೆ, ಏಷಿಯಾದಲ್ಲಿ ನೂರಾರು ಲಕ್ಷಾಂತರ ಜನ ಬಡತನದಿಂದ ಹೊರಕ್ಕೆ ಬರುತ್ತಾರೆ ಹಾಗೂ ಇತರರು ಬಡತನಕ್ಕೆ ತುತ್ತಾಗುತ್ತಾರೆ, ಹಾಗೂ ಇದೇ ಪರಿಸ್ಥಿತಿ ಈಗಲೂ ಇದೆ. ಹಾಗೂ ವರ್ಲ್ಡ್ ಬ್ಯಾಂಕ್ ನ ಅತ್ಯುತ್ತಮ ಕಲ್ಪನೆಯೆಂದರೆ, ಇದು ಸಂಭವಿಸುತ್ತದೆ, ಹಾಗೂ ವಿಭಾಗಿಸಿದ ವಿಶ್ವ ಇರುವುದಿಲ್ಲ. ಬಹಳಷ್ಟು ಜನ ಮಧ್ಯದಲ್ಲಿರುತ್ತಾರೆ.
ಆದರೆ, ಇದು ಲಾಗರಿತಿಮಿಕ್ ಸ್ಕೇಲ್, ಆದರೆ ನಮ್ಮ ಪರಿಕಲ್ಪನೆಯ ಆರ್ಥಿಕ ಸ್ಥಿತಿ ಶೇಕಡ ಅಭಿವೃದ್ಧಿ. ನಾವು ಅದನ್ನು ಶೇಕಡಾವಾರು ಹೆಚ್ಚಳದ ಸಂಭಾವ್ಯತೆ ದೃಷ್ಟಿಯುಂದ ನೋಡುತ್ತೇವೆ. ನಾನು ಇದನ್ನು ಬದಲಾಯಿಸಿ ಕುಟುಂಬ ಆದಾಯದ ಬದುಲಾಗಿ ತಲಾವಾರು ಜಿ.ಡಿ.ಪಿ. ತೆಗೆದುಕೊಂಡರೆ, ಈ ದತ್ತಾಂಶಗಳನ್ನು ಪ್ರಾಂತೀಯ ಆಂತರಿಕ ಉತ್ಪನ್ನ ದತ್ತಾಂಶಗಳಾಗಿ ಪರಿವರ್ತಿಸಿದರೆ, ಹಾಗೂ ನಾನು ಇಲ್ಲಿ ಕೆಳಗಿರುವ ಪ್ರಾಂತಗಳನ್ನು ತೆಗೆದುಕೊಂಡರೆ, ಗುಳ್ಳೆಯ ಗಾತ್ರ ಈಗಲೂ ಜನಸಂಖ್ಯೆಯೇ. ಮತ್ತು ನೀವು ಅಲ್ಲಿ ಒ.ಇ.ಸಿ.ಡಿ. ನೋಡುತ್ತೀರ, ಹಾಗೂ ಇಲ್ಲಿ ಉಪ-ಸಹಾರಾ ಆಫ್ರಿಕಾ ಇದೆ, ಹಾಗೂ ಅಲ್ಲಿ ಅರಬ್ ರಾಜ್ಯಗಳನ್ನು ತೆಗೆಯುತ್ತೇವೆ, ಆಫ್ರಿಕಾ ಮತ್ತು ಏಷಿಯಾದಿಂದ ಬರುವುದನ್ನು ಪ್ರತ್ಯೇಕವಾಗಿರಿಸಿ, ನಾವು ಈ ಅಕ್ಷವನ್ನು ವಿಸ್ತರಿಸಬಹುದು, ಹಾಗೂ ನಾನು ಅದಕ್ಕೆ ಇಲ್ಲಿ ಹೊಸ ಆಯಾಮ ಕೊಡಬಹುದು, ಸಾಮಾಜಿಕ ಮೌಲ್ಯಗಳು, ಶಿಶುಗಳು ಬದುಕುವ ದರ. ಈಗ ಆ ಅಕ್ಷದಲ್ಲಿ ಹಣ ಇದೆ, ಹಾಗೂ ಅಲ್ಲಿ ನಾನು ಮಕ್ಕಳು ಬದುಕುಳಿಯುವ ಸಂಭಾವ್ಯತೆ ಹೊಂದಿದ್ದೇನೆ. ಕೆಲವು ರಾಷ್ಟ್ರಗಳಲ್ಲಿ, ಶೇಕಡ 99.7 ಮಕ್ಕಳು ಐದು ವರ್ಷ ವಯಸ್ಸಿನವರೆಗೆ ಬದುಕಿರುತ್ತವೆ, ಇತರರು, ಕೇವಲ 70 .ಇಲ್ಲಿ ನಾವು ಅಂತರ ಕಾಣುತ್ತೇವೆ ಒ.ಇ.ಸಿ.ಡಿ., ಲ್ಯಾಟಿನ್ ಅಮೆರಿಕಾ, ಪೂರ್ವ ಯೂರೋಪ್, ಪೂರ್ವ ಏಷಿಯಾ, ಅರಬ್ ರಾಜ್ಯಗಳು, ದಕ್ಷಿಣ ಏಷಿಯಾ ಮತ್ತು ಉಪ-ಸಹಾರಾ ಆಫ್ರಿಕಾ, ಇವುಗಳ ನಡುವೆ. ಮಕ್ಕಳು ಬದುಕುವ ದರ ಮತ್ತು ಹಣ ಇವುಗಳಿಗೆ ನೇರ ಸಂಬಂಧ ತುಂಬಾ ಗಟ್ಟಿಯಾಗಿದೆ.
ಆದರೆ, ನಾನು ಉಪ-ಸಹಾರಾ ಆಫ್ರಿಕಾವನ್ನು ವಿಭಾಗ ಮಾಡುತ್ತೇನೆ. ಆರೋಗ್ಯ ಅಲ್ಲಿದೆ ಮತ್ತು ಉತ್ತಮ ಆರೋಗ್ಯ ಅಲ್ಲಿ ಇನ್ನೂ ಮೇಲಿದೆ. ನಾನಿಲ್ಲಿಗೆ ಹೋಗಿ ಉಪ-ಸಹಾರಾ ಆಫ್ರಿಕಾವನ್ನು ಅದರ ರಾಷ್ಟ್ರಗಳಾಗಿ ವಿಭಾಗಿಸಬಹುದು. ಮತ್ತು ಅದು ಒಡೆದಾಗ, ಆ ದೇಶದ ಗುಳ್ಳೆಯ ಗಾತ್ರವೇ ಅದರ ಜನಸಂಖ್ಯೆ. ಅಲ್ಲಿ ಕೆಳಗಡೆ ಸಿಯೇರಾ ಲಿಯೋನ್ ನೋಡಿ. ಅಲ್ಲಿ ಮಾರಿಶಸ್. ಮಾರಿಶಸ್ ಮೊದಲನೆ ದೇಶ ವ್ಯಾಪರ ನಿರ್ಬಂಧಗಳಿಂದ ತಪ್ಪಿಸಿಕೊಂಡದ್ದು, ಹಾಗೂ ಅವರು ತಮ್ಮ ಸಕ್ಕರೆಯನ್ನು ಮಾರಾಟಮಾಡಬಹುದಿತ್ತು. ಯೂರೋಪ್ ಮತ್ತು ಉತ್ತರ ಅಮೆರಕನ್ನರಂತೆ ಅವರು ತಮ್ಮ ಉಡುಪುಗಳನ್ನು ಅದೇ ನಿಬಂಧನೆಗಳ ಪ್ರಕಾರ ಮಾರಾಟ ಮಾಡಬಹುದಿತ್ತು.
ಆಫ್ರಿಕಾದ ನಡುವೆ ದೊಡ್ಡ ವ್ಯತ್ಯಾಸವಿದೆ. ಹಾಗೆಯೇ ಘಾನಾ ಇಲ್ಲಿ ಮಧ್ಯದಲ್ಲಿದೆ. ಸಿಯೇರಾ ಲಿಯೋನ್ ನಲ್ಲಿ, ಮಾನವೀಯ ಸಹಕಾರ. ಇಲ್ಲಿ, ಉಗಾಂಡದಲ್ಲಿ ಅಭಿವೃದ್ಧಿ ಸಹಕಾರ. ಇಲ್ಲಿ ಹೂಡಿಕೆಗೆ ಸಮಯ, ಅಲ್ಲಿ ನೀವು ರಜಾದಿನ ಕಳೆಯಲು ಹೋಗಬಹುದು. ಇದು ಅತಿದೊಡ್ಡ ವ್ಯತ್ಯಾಸ ಆಫ್ರಿಕಾದಲ್ಲಿ, ನಾವು ಹೋಗುವುದು ಅಪರೂಪ -- ಅಲ್ಲಿ ಎಲ್ಲವೂ ಸಮಾನವೇ. ನಾನಿಲ್ಲಿ ದಕ್ಷಿಣ ಏಷಿಯಾ ವಿಭಾಗಿಸುತ್ತೇನೆ. ಇಲ್ಲಿ ಮಧ್ಯದಲ್ಲಿರುವ ದೊಡ್ಡ ಗುಳ್ಳೆ ಇಂಡಿಯಾ. ಆದರೆ ಅಫಘಾನಿಸ್ತಾನ ಮತ್ತು ಶ್ರೀಲಂಕಾಗಳ ನಡುವೆ ದೊಡ್ಡ ವ್ಯತ್ಯಾಸವಿದೆ. ನಾನು ಅರಬ್ ರಾಷ್ಟ್ರಗಳನ್ನು ವಿಭಾಗಿಸಬಲ್ಲೆ. ಅವರು ಹೇಗಿದ್ದಾರೆ? ಒಂದೇ ವಾತಾವರಣ, ಒಂದೇ ಸಂಸ್ಕೃತಿ, ಒಂದೇ ಧರ್ಮ. ದೊಡ್ಡ ವ್ಯತ್ಯಾಸ. ಅಕ್ಕಪಕ್ಕದವರ ಜೊತೆ ಕೂಡ. ಯೇಮೆನ್, ಸಿವಿಲ್ ಯುದ್ಧ. ಯುನೈಟೆಡ್ ಅರಬ್ ಎಮಿರೇಟ್ಸ್, ಹಣ, ಸರಿಸಮವಾಗಿ ಮತ್ತು ಚೆನ್ನಾಗಿ ಬಳಸಲಾಗಿದೆ. ಕಲ್ಪನೆಯಂತೆ ಅಲ್ಲ. ಅದರಲ್ಲಿ ಆ ದೇಶದಲ್ಲಿರುವ ಇತರ ದೇಶಗಳ ಕೆಲಸಗಾರರ ಮಕ್ಕಳೂ ಸೇರಿವೆ. ಕೆಲವು ಸಾರಿ ಮಾಹಿತಿ ನಿಮ್ಮ ಆಲೋಚನೆಗಿಂತ ಉತ್ತಮವಿರುತ್ತದೆ. ಬಹಳ ಜನರ ಪ್ರಕಾರ ಮಾಹಿತಿ ಸರಿಯಿರುವುದಿಲ್ಲ. ಅಲ್ಲಿ ಒಂದು ಅನಿಶ್ಚಯ ಅಂಶವಿದೆ, ಆದರೆ ನಾವು ಇಲ್ಲೆ ವ್ಯತ್ಯಾಸ ನೋಡಬಹುದು: ಕಾಂಬೋಡಿಯಾ, ಸಿಂಗಪೂರ್. ಇಲ್ಲಿ ವ್ಯತ್ಯಾಸಗಳು ಬಹಳ ದೊಡ್ಡವು ಮಾಹಿತಿಯ ದುರ್ಬಲತೆಗಿಂತ. ಪಶ್ಚಿಮ ಯೂರೋಪ್: ದೀರ್ಘಕಾಲದ ಸೋವಿಯೆತ್ ಆರ್ಥಿಕ ಸ್ಥಿತಿ, ಆದರೆ ಅವರು ಹತ್ತು ವರ್ಷಗಳ ನಂತರ ಹೊರಬರುತ್ತಾರೆ ತುಂಬಾ, ತುಂಬಾ ಭಿನ್ನವಾಗಿ. ಮತ್ತು ಅಲ್ಲಿ ಲ್ಯಾಟಿನ್ ಅಮೆರಿಕಾ ಇದೆ. ಈ ದಿನ ನಾವು ಲ್ಯಾಟಿನ್ ಅಮೆರಿಕಾದಲ್ಲಿ ಆರೋಗ್ಯವಂತ ರಾಷ್ಟ್ರವನ್ನು ಹುಡುಕಿಕೊಂಡು ಕ್ಯೂಬಾ ಗೆ ಹೋಗಬೇಕಿಲ್ಲ. ಇಲ್ಲಿಂದ ಕೆಲವು ವರ್ಷಗಳ ನಂತರ ಚಿಲಿಯ ಶಿಶು ಆಯುರ್ಮಾನ ದರ ಕ್ಯೂಬಾ ಗಿಂತ ಕಡಿಮೆಯಿರುತ್ತದೆ. ಇಲ್ಲಿ ಹೆಚ್ಚು ವರಮಾನದ ಓ.ಇ.ಸಿ.ಡಿ. ರಾಷ್ಟ್ರಗಳಿವೆ.
ಹಾಗೂ ನಾವು ಇಲ್ಲಿ ವಿಶ್ವದ ಸಂಪೂರ್ಣ ವಿನ್ಯಾಸ ಪಡೆಯುತ್ತೇವೆ. ಅದು ಹೆಚ್ಚು ಕಡಿಮೆ ಹೀಗಿದೆ. ಮತ್ತು ನಾವು ಅದನ್ನು ನೋಡಿದರೆ, ಅದು ಹೇಗೆ ಕಾಣುತ್ತದೆ -- ವಿಶ್ವ, 1960 ರಲ್ಲಿ, ಅದು ಚಲಿಸಲು ಪ್ರಾರಂಭಿಸುತ್ತದೆ. 1960. ಇದು ಮಾವೋ ತ್ಸೆ ತುಂಗ್. ಇವನು ಚೀಣಾಕ್ಕೆ ಆರೋಗ್ಯ ತಂದುಕೊಟ್ಟನು. ಅನಂತರ ಅವನು ಸತ್ತನು. ಆಮೇಲೆ ಡೆಂಗ್ ಕ್ಸಿಯಾಪಿಂಗ್ ಬಂದ ಹಾಗೂ ಚೀಣಾಕ್ಕೆ ಹಣ ತಂದ, ಅವರನ್ನು ಮತ್ತೆ ಮುಖ್ಯವಾಹಿನಿಗೆ ತಂದ. ಹೀಗೆ ನಾವು ಹೇಗೆ ರಾಷ್ಟ್ರಗಳು ಬೇರೆ ಬೇರೆ ದಿಕ್ಕಿನಲ್ಲಿ ಸಾಗುತ್ತವೆ ಎಂಬುದನ್ನು ನೋಡಿದ್ದೇವೆ, ಹಾಗಾಗಿ ಒಂದು ವಿಶ್ವದ ವಿನ್ಯಾಸವನ್ನು ತೋರಿಸುವ ಒಂದು ಉದಾಹರಣೆ ರಾಷ್ಟ್ರವನ್ನು ತೋರಿಸುವುದು ಕಷ್ಟ. ನಾನು ನಿಮ್ಮನ್ನು ಇಲ್ಲೆ ಹಿಂದಕ್ಕೆ 1960 ರ ಸುಮಾರಿಗೆ ಕರೆತರುತ್ತೇನೆ. ನಾನು ದಕ್ಷಿಣ ಕೋರಿಯಾ ಜೊತೆ ಹೋಲಿಸುತ್ತೇನೆ, ಇದು ಯಾವುದು, ಬ್ರಝಿಲ್ದೊಂದಿಗೆ. ಅದು ಇಲ್ಲಿ. ಅದರ ಲೇಬಲ್ ಹೊರಟುಹೋಗಿದೆ. ಹಾಗೆಯೇ ನಾನು ಉಗಾಂಡವನ್ನು ಹೋಲಿಸಬಯಸುತ್ತೇನೆ, ಅದು ಇಲ್ಲಿದೆ. ನಾನು ಅದನ್ನು ಮುಂದಕ್ಕೆ ನೂಕುತ್ತೇನೆ, ಹೀಗೆ. ಹಾಗೆಯೇ ದಕ್ಷಿಣ ಕೋರಿಯಾ ಹೇಗೆ ವೇಗವಾಗಿ ಮುಂದುವರೆಯುತ್ತಿದೆ ಎಂದು ನೀವು ನೋಡಬಹುದು, ಆದರೆ, ಬ್ರಝಿಲ್ ಬಹಳ ನಿಧಾನವಾಗಿದೆ.™©
ಮತ್ತು ನಾವು ಮತ್ತೆ ಹಿಂದಕ್ಕೆ ಹೋದರೆ, ಅವುಗಳ ಮೇಲೆ ಹಾದಿ ಮಾಡಿದರೆ, ಈ ರೀತಿ, ನೀವು ಮತ್ತೆ ಅಭಿವೃದ್ಧಿಯ ವೇಗವನ್ನು ನೋಡಬಹುದು ಅದು ಬಹಳ ವಿಭಿನ್ನವಾಗಿದೆ, ಮತ್ತು ರಾಷ್ಟ್ರಗಳು ಹೆಚ್ಚು ಕಡಿಮೆ ಹಣ ಮತ್ತು ಆರೋಗ್ಯದ ಗತಿಯಲ್ಲಿಯೇ ಚಲಿಸುತ್ತಿವೆ, ಆದರೆ ನೀವು ಇನ್ನೂ ವೇಗವಾಗಿ ಚಲಿಸಬಹುದು ನೀವು ಶ್ರೀಮಂತರಾಗಿರುವುದಕ್ಕಿಂತ ಮೊದಲು ಆರೋಗ್ಯವಂತರಾಗಿದ್ದರೆ. ನೀವು ಯುನೈಟೆಡ್ ಅರಬ್ ಎಮಿರೇಟ್ಸ್ ಹಾದಿಯಲ್ಲಿ ನಡೆಯಬಹುದು. ಅವರು ಇಲ್ಲಿಂದ ಬಂದರು, ಒಂದು ಖನಿಜ ಸಮೃದ್ಧ ರಾಷ್ಟ್ರ. ಅವರು ಎಲ್ಲ ತೈಲವನ್ನೂ ಹಿಡಿದರು, ಎಲ್ಲ ಹಣವನ್ನು ಪಡೆದರು, ಆದರೆ ಆರೋಗ್ಯ ಯಾವುದೋ ಸೂಪರ್ ಮಾರ್ಕೆಟ್ನಲ್ಲಿ ಕೊಳ್ಳುವ ವಸ್ತುವಲ್ಲ. ನೀವು ಆರೋಗ್ಯದಲ್ಲಿ ಹೂಡಿಕೆ ಮಾಡಬೇಕು. ನೀವು ಮಕ್ಕಳನ್ನು ಸ್ಕೂಲಿಗೆ ಹಾಕಬೇಕು. ನೀವು ಆರೋಗ್ಯ ಸಿಬ್ಬಂದಿಗೆ ತರಬೇತಿ ಕೊಡಬೇಕು. ಜನರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು. ಹಾಗೂ ಶೇಕ್ ಸೈಯದ್ ಅದನ್ನು ಸರಿಯಾದ ರೀತಿಯಲ್ಲೇ ಮಾಡಿದ. ತೈಲದ ದರಗಳು ಬೀಳುತ್ತಿದ್ದರೂ ರಾಷ್ಟ್ರವನ್ನು ಈ ಮಟ್ಟಕ್ಕೆ ತಂದ. ಆದ್ದರಿಂದ, ಇಲ್ಲಿ ನಮಗೆ ಇನ್ನೂ ಹೆಚ್ಚಿನ ವಿಶ್ವ ಮುಖ್ಯವಾಹಿನಿ ನೋಟವಿದೆ, ಎಲ್ಲಿ ಎಲ್ಲ ರಾಷ್ಟ್ರಗಳೂ ಹಣ ಉಪಯೋಗಿಸುತ್ತವೆ ಹಿಂದೆ ತಾವು ಉಪಯೋಗಿಸಿದ್ದಕ್ಕಿಂತ ಉತ್ತಮವಾಗಿ. ಈಗ, ಇದು, ಹೆಚ್ಚು-ಕಡಿಮ ವಾಸ್ತವ, ನೀವು ರಾಷ್ಟ್ರಗಳ ಸರಾಸರಿ ಅಂಕಿಅಂಶಗಳನ್ನು ನೋಡಿದರೆ. ಅವು ಹೀಗಿವೆ.
ಈಗ ಇದು ಅಪಾಯಕರ, ಸರಾಸರಿ ಅಂಶಗಳನ್ನು ಉಪಯೋಗಿಸುವುದು, ಏಕೆಂದರೆ ರಾಷ್ಟ್ರ ರಾಷ್ಟ್ರಗಳಲ್ಲಿ ಅಷ್ಟೊಂದು ವ್ಯತ್ಯಾಸಗಳಿವೆ. ಹಾಗಾಗಿ, ನಾನು ಇಲ್ಲಿ ನೋಡಿದರೆ, ದಕ್ಷಿಣ ಕೋರಿಯಾ 1960 ರಲ್ಲಿ ಎಲ್ಲಿತ್ತೋ ಅಲ್ಲಿ ಇಂದು ಉಗಾಂಡಾ ಇದೆ. ನಾನು ಉಗಾಂಡಾವನ್ನು ವಿಭಾಗಿಸಿದರೆ, ಉಗಾಂಡಾದೊಳಗೆ ಸಾಕಷ್ಟು ವ್ಯತ್ಯಾಸಗಳಿವೆ.ಇವು ಉಗಾಂಡಾದ ಕ್ವಿಂಟೈಲ್ ಗಳು. ಉಗಾಂಡಾದ ಅತಿ ಶ್ರೀಮಂತ ಶೇಕಡ 20 ಜನಸಂಖ್ಯೆ ಇಲ್ಲಿದ್ದಾರೆ. ಕಡು ಬಡವರು ಇಲ್ಲಿದ್ದಾರೆ. ನಾನು ದಕ್ಷಿಣ ಆಫ್ರಿಕಾವನ್ನು ವಿಭಾಗಿಸಿದರೆ, ಅದು ಹೀಗಿದೆ. ನಾನು ಇನ್ನೂ ಕೆಳಗಿಳಿದು ನೈಜರ್ ಕಡೆ ನೋಡಿದರೆ, ಅಲ್ಲಿ ಅತ್ಯಂತ ಭೀಕರ ಬರಗಾಲ ಇತ್ತು, ಕೊನೆಯಲ್ಲಿ ಅದು ಹೀಗಿದೆ. ನೈಜರ್ ನ ಶೇಕಡ 20 ಬಡವರು ಇಲ್ಲಿದ್ದಾರೆ, ಹಾಗೂ ಆಫ್ರಿಕಾದ ಅತಿ ಶ್ರೀಮಂತ ಶೇಕಡ 20 ಜನಸಂಖ್ಯೆ ಅಲ್ಲಿದ್ದಾರೆ, ಆದರೂ ಆಫ್ರಿಕಾಕ್ಕೆ ಯಾವ ಪರಿಹಾರಗಳು ಬೇಕು ಎಂಬುದರ ಬಗ್ಗೆ ಚರ್ಚೆಮಾಡುವ ಒಲವು ನಾವು ತೋರುತ್ತೇವೆ. ಈ ವಿಶ್ವದಲ್ಲಿರುವುದೆಲ್ಲ ಆಫ್ರಿಕಾದಲ್ಲಿದೆ. ಹಾಗೆಯೇ ನೀವು ಅಲ್ಲಿರುವ ಕ್ವಿಂಟೈಲ್ ಗೆ ಎಚ್.ಐ.ವಿ. ಔಷಧವನ್ನು ಸರ್ವರೂ ಪಡೆಯುವ ಬಗ್ಗೆ ಚರ್ಚಿಸಲಾಗುವುದಿಲ್ಲ¥ ಇಲ್ಲಿ ಉಪಯೋಗಿಸುವ ಕಾರ್ಯತಂತ್ರದ ರೀತಿಯಲ್ಲಿಯೇ. ಪ್ರಪಂಚದ ಅಭಿವೃದ್ಧಿ ಮಹತ್ತರವಾಗಿ ಸಂದರ್ಭೋಚಿತವಾಗಬೇಕು, ಹಾಗೂ ಅದನ್ನು ಇಲ್ಲಿ ಹೊಂದುವುದು ಅಪ್ರಸ್ತುತ ಪ್ರಾಂತೀಯ ಮಟ್ಟದಲ್ಲಿ. ನಾವು ಇನ್ನೂ ವಿವರಣಾತ್ಮಕವಾಗಿರಬೇಕು. ಇವುಗಳನ್ನು ಉಪಯೋಗಿಸುವಂತಾದಾಗ ವಿದ್ಯಾರ್ಥಿಗಳು ಉತ್ತೇಜಿತರಾಗುದನ್ನು ನಾವು ನೋಡಿದ್ದೇವೆ.
ಹಾಗೂ ಇನ್ನೂ ಹೆಚ್ಚು ಹೆಚ್ಚು ನೀತಿ ಸ್ಥಾಪನೆ ಮಾಡುವವರು ಮತ್ತು ಕಾರ್ಪೊರೇಟ್ ವಲಯಗಳು ಈ ವಿಶ್ವ ಹೇಗೆ ಬದಲಾಗುತ್ತಿದೆ ಎಂಬುದನ್ನು ನೋಡಬಯಸುತ್ತಾರೆ. ಈಗ, ಇದು ಏಕೆ ಸಂಭವಿಸುವುದಿಲ್ಲ? ನಮ್ಮಲ್ಲಿರುವ ಮಾಹಿತಿಯನ್ನು ನಾವೇಕೆ ಉಪಯೋಗ ಮಾಡುತ್ತಿಲ್ಲ? ನಾವು ವಿಶ್ವಸಂಸ್ಥೆಯಲ್ಲಿ ಮಾಹಿತಿ ಹೊಂದಿದ್ದೇವೆ, ರಾಷ್ಟ್ರೀಯ ಅಂಕಿ ಅಂಶಗಳ ಏಜೆನ್ಸಿಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮತ್ತು ಇತರ ಸರ್ಕಾರೇತರ ಸಂಸ್ಥೆಗಳಲ್ಲಿ. ಏಕೆಂದರೆ ಮಾಹಿತಿ ದತ್ತ ಸಂಚಯಗಳಲ್ಲಿ ಹುದುಗಿಕೊಂಡಿದೆ. ಹಾಗೂ ಸಾರ್ವಜನಿಕರು ಅಲ್ಲಿದ್ದಾರೆ, ಮತ್ತು ಇಂಟರ್ನೆಟ್ ಅಲ್ಲಿದೆ, ಆದರೆ ನಾವು ಅವುಗಳನ್ನು ಸಮರ್ಪಕವಾಗಿ ಉಪಯೋಗಿಸಿಲ್ಲ.
ನಾವು ನೋಡಿರುವ ವಿಶ್ವ ಬದಲಾಗುತ್ತಿರುವ ಎಲ್ಲ ಅಂಶಗಳೂ ಸಾರ್ವಜನಿಕ-ಹಣವಿನಿಯೋಗದಿಂದ ತಯಾರಿಸಿರುವ ಅಂಕಿ ಅಂಶಗಳಲ್ಲಿ ಸೇರುವುದಿಲ್ಲ. ಕೆಲವು ವೆಬ್ ಪೇಜುಗಳು ಇವೆ ಈ ರೀತಿ, ನಿಮಗೆ ಗೊತ್ತು, ಆದರೆ ಅವು ದತ್ತ ಸಂಚಯಗಳಿಂದ ಸ್ವಲ್ಪ ಆಹಾರ ಪಡೆಯುತ್ತವೆ, ಆದರೆ ಜನರು ಅದಕ್ಕೆ ಬೆಲೆ ಕಟ್ಟುತ್ತಾರೆ, ಮೂರ್ಖ ಪಾಸ್ವರ್ಡ್ಗಳು ಮತ್ತು ಬೇಸರದ ಅಂಕಿ ಅಂಶಗಳು. (ನಗು). (ಚಪ್ಪಾಳೆ)
ಇದು ಕೆಲಸ ಮಾಡುವುದಿಲ್ಲ. ಆದರೆ ಏನು ಅಗತ್ಯವಿದೆ? ನಮ್ಮಲ್ಲಿ ಮಾಹಿತಿಯಿದೆ. ನಿಮಗೆ ಬೇಕಾಗಿರುವುದು ಹೊಸ ಮಾಹಿತಿಯಲ್ಲ. ನಮ್ಮಲ್ಲಿ ಉತ್ಕೃಷ್ಟ ವಿನ್ಯಾಸ ಸಲಕರಣೆಗಳಿವೆ, ಜೊತೆಗೆ ಇನ್ನಷ್ಟು ಸೇರ್ಪಡಯಾಗುತ್ತಲೇ ಇರುತ್ತವೆ. ಹಾಗಾಗಿ ನಾವು ಒಂದು ಲಾಭರಹಿತ ಸಾಹಸ ಪ್ರಾರಂಭಿಸಿದೆವು, ಇದನ್ನು ನಾವು -- ಮಾಹಿತಿಗೆ ವಿನ್ಯಾಸ ಸಂಪರ್ಕ -- ನಾವು ಇದನ್ನು ಗ್ಯಾಪ್ ಮೈಂಡರ್ ಎನ್ನುತ್ತೇವೆ, ಲಂಡನ್ ನೆಲಮಾಳಿಗೆಯಿಂದ, ಅಲ್ಲಿ ನಿಮಗೆ ಎಚ್ಚರಿಕೆ ಕೊಡುತ್ತಾರೆ, "ಮೈಂಡ್ ದಿ ಗ್ಯಾಪ್." ಹಾಗಾಗಿ ನಾವು ಗ್ಯಾಪ್ ಮೈಂಡರ್ ಸೂಕ್ತ ಎಂದುಕೊಂಡೆವು. ಹಾಗೂ ಈ ರೀತಿ ಮಾಹಿತಿಗೆ ಸಂಪರ್ಕ ಕಲ್ಪಿಸುವ ತಂತ್ರಾಂಶ ಬರೆಯಲು ಪ್ರಾರಂಭಿಸಿದೆವು. ಅದು ಅಷ್ಟೊಂದು ಕಷ್ಟ ಎನಿಸಲಿಲ್ಲ. ಅದು ಒಬ್ಬ ವ್ಯಕ್ತಿಯ ಕೆಲವು ವರ್ಷಗಳು ಹಿಡಿಯಿತು, ನಾವು ಅನಿಮೇಶನ್ ಗಳನ್ನು ತಯಾರಿಸಿದೆವು. ನೀವು ಒಂದು ಮಾಹಿತಿ ಸೆಟ್ ತೆಗೆದುಕೊಂಡು ಅಲ್ಲಿ ಹಾಕಬಹುದು. ನಾವು ಯು.ಎನ್. ಮಾಹಿತಿಯನ್ನು ಬಿಡುಗಡೆ ಮಾಡುತ್ತಿದ್ದೇವೆ, ಕೆಲವು ಯು.ಎನ್. ಸಂಸ್ಥೆಗಳನ್ನು ಕೂಡ.
ಕೆಲವು ದೇಶಗಳು ತಮ್ಮಲ್ಲಿರುವ ಮಾಹಿತಿಯನ್ನು ವಿಶ್ವದ ಮೇಲೆ ಬಿಡುಗಡೆ ಮಾಡಬಹುದಾಗಿದೆಯೆಂದು ಒಪ್ಪಿಕೊಳ್ಳುತ್ತವೆ, ಆದರೆ, ನಮಗೆ ನಿಜವಾಗಿಯೂ ಬೇಕಾಗಿರುವುದು, ಒಂದು ಹುಡುಕುವ ಕ್ರಿಯೆ. ಒಂದು ಹುಡುಕುವ ಕ್ರಿಯೆ, ಅದರ ಮೂಲಕ ಹುಡುಕುವ ರೂಪದಲ್ಲಿ ಮಾಹಿತಿಯನ್ನು ನಕಲು ಮಾಡುವ ಸಾಧ್ಯತೆ ಹಾಗೂ ಅದನ್ನು ವಿಶ್ವಕ್ಕೆ ಬಿಡುಗಡೆ ಮಾಡುವುದು. ಹಾಗೂ ನಾವು ಹೊರ ಹೋದಾಗ ಏನು ಕೇಳುತ್ತೇವೆ? ನಾನು ಮುಖ್ಯ ಅಂಕಿ ಅಂಶಗಳ ವಿಷಯದಲ್ಲಿ ಮಾನವ ವಿಜ್ಞಾನ ಅನ್ವಯಿಸಿದ್ದೇನೆ. ಪ್ರತಿಯೊಬ್ಬರೂ ಹೇಳುತ್ತಾರೆ, "ಇದು ಸಾಧ್ಯವಿಲ್ಲ. ಇದು ಮಾಡಲಾಗದು. ನಮ್ಮ ಮಾಹಿತಿ ಎಷ್ಟು ವಿಚಿತ್ರ ವಿವರ ಹೊಂದಿದೆಯೆಂದರೆ ಇತರ ಮಾಹಿತಿ ಹುಡುಕಿದಂತೆ ಇದನ್ನು ಹುಡುಕಲಾಗದಷ್ಟು. ನಾವು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡಲಾಗದು, ವಿಶ್ವದ ಉದ್ಯಮಿಗಳಿಗೆ ಉಚಿತವಾಗಿ ಆಗದು." ಆದರೆ ನಾವು ಮಾಡಬಯಸುತ್ತಿರುವುದು ಇದೇ ಅಲ್ಲವೇ? ಸಾರ್ವಜನಿಕ ಹಣಸಾಹಾಯದ ಮಾಹಿತಿ ಇಲ್ಲಿ ಕೆಳಗೆ ಇದೆ. ಮತ್ತು ನಾವು ನೆಟ್ ನಲ್ಲಿ ಹೂವುಗಳು ಬೆಳೆಯಲಿ ಎಂದು ಆಶಿಸುತ್ತೇವೆ. ಹಾಗೂ ಒಂದು ಮುಖ್ಯ ಅಂಶವೆಂದರೆ ಅವನ್ನು ಹುಡುಕಲು ಸುಲಭವಾಗುವಂತೆ ಮಾಡುವುದು, ಆಗ ಜನರು ಅದನ್ನು ಬೇರೆ ಬೇರೆ ವಿನ್ಯಾಸ ಸಲಕರಣೆ ಉಪಯೋಗಿಸಿ ಅಲ್ಲಿ ಅನಿಮೇಟ್ ಮಾಡಬಹುದು. ಮತ್ತು ನಿಮಗೆ ನಾನು ಒಳ್ಳೆಯ ಸುದ್ದಿ ನೀಡುತ್ತೇನೆ. ನಾನು ಕೊಡುವ ಒಳ್ಳೆಯ ಸುದ್ದಿಯೆಂದರೆ, ಈಗಿನ ನೂತನ ಯು.ಎನ್. ಅಂಕಿ ಅಂಶಗಳ ಮುಖ್ಯಸ್ಥ, ಅದು ಅಸಾಧ್ಯವೆಂದು ಹೇಳುವುದಿಲ್ಲ. ಅವರು ಇಷ್ಟು ಮಾತ್ರ ಹೇಳುತ್ತಾರೆ, "ಇದು ನಾವು ಮಾಡಬಹುದು." (ನಗು). ಮತ್ತು ಅವರು ಬಹಳ ಬುದ್ಧಿವಂತ ವ್ಯಕ್ತಿ, ಹೊ? (ನಗು).
ಆದ್ದರಿಂದ ಮುಂಬರುವ ವರ್ಷಗಳಲ್ಲಿ ಮಾಹಿತಿಯಲ್ಲಿ ಹಲವು ಸಂಗತಿಗಳು ಸಂಭವಿಸುವುದನ್ನು ನಾವು ನೋಡುತ್ತೇವೆ. ಆದಾಯ ವಿಭಾಗಗಳನ್ನು ಸಂಪೂರ್ಣವಾಗಿ ಹೊಸ ವಿಧಾನಗಳಲ್ಲಿ ನಾವು ನೋಡಬಹುದಾಗಿರುತ್ತದೆ. ಇದು ಚೀನಾದ ಆದಾಯ ವಿಂಗಡಣೆ, 1970.® ಇದು ಯುನೈಟೆಡ್ ಸ್ಟೇಟ್ಸ್ ನ ಆದಾಯ ವಿಂಗಡಣೆ, 1970. ಒಂದರಮೇಲೊಂದೇನಿಲ್ಲ. ಒಂದರಮೇಲೊಂದೇನಿಲ್ಲ. ಆದರೆ ಆದದ್ದೇನು? ಏನು ಆಯಿತೆಂದರೆ ಇದಾಯಿತು: ಚೀನಾ ಬೆಳೆಯುತ್ತಿದೆ, ಅದು ಇನ್ನು ಮುಂದೆ ಎಂದಿಗೂ ಅಷ್ಟು ಸಮಾನವಲ್ಲ, ಹಾಗೂ ಅದು ಇಲ್ಲಿ ಕಾಣಿಸುತ್ತಿದೆ, ಯುನೈಟೆಡ್ ಸ್ಟೇಟ್ಸ್ ಮೇಲೆ. ಹೆಚ್ಚೂಕಡಿಮೆ ಪಿಶಾಚಿಯಂತೆ, ಅಲ್ಲವೇ, ಹುಂ? (ನಗು).
ಇದು ಹೆದರಿಕೆ ಹುಟ್ಟಿಸುವಂಥದು. ಆದರೆ ಈ ಎಲ್ಲ ಮಾಹಿತಿ ಹೊಂದಿರುವುದು ಬಹಳ ಮುಖ್ಯ. ನಾವು ಇದನ್ನು ನಿಜವಾಗಿಯೂ ನೋಡಬೇಕಾಗಿದೆ. ಹಾಗೂ ಇದರ ಕಡೆ ನೋಡುವ ಬದುಲು, ನಾನು ಒಂದು 1,000 ಕ್ಕೆ ಎಷ್ಟು ಜನ ಇಂಟರ್ ನೆಟ್ ಉಪಯೋಗಿಸುತ್ತಾರೆ ಎಂಬುದನ್ನು ತೋರಿಸಿ ಮುಗಿಸುತ್ತೇನೆ. ಈ ಸಾಫ್ಟ್ವೇರಿನಲ್ಲಿ ಎಲ್ಲ ರಾಷ್ಟ್ರಗಳ ಸುಮಾರು 500 ಚರಾಕ್ಷರಗಳನ್ನು ಸುಲಭವಾಗಿ ಉಪಯೋಗಿಸಿಕೊಳ್ಳಬಹುದು. ಇದಕ್ಕೆ ಬದಲಾಯಿಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ, ಆದರೆ ಅಕ್ಷಾಂಶಗಳ ಮೇಲೆ, ನಿಮಗೆ ಬೇಕಾದ ಚರಾಕ್ಷರವನ್ನು ಸುಲಭವಾಗಿ ಪಡೆಯಬಹುದು. ಹಾಗೂ ಮುಖ್ಯ ವಿಷಯವೆಂದರೆ ದತ್ತ ಸಂಚಯವನ್ನು ಉಚಿತವಾಗಿ ಪಡೆಯುವುದು, ಅವು ಹುಡುಕಲು ಅನುವಾಗುವಂತೆ ಮಾಡುವುದು, ಮತ್ತು ಎರಡನೆ ಕ್ಲಿಕ್ ವೊಂದಿಗೆ ಅವುಗಳನ್ನು ಪಡೆಯುವುದು ಗ್ರಾಫಿಕ್ ರೂಪದಲ್ಲಿ, ಅದರ ಮೂಲಕ ನೀವು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ. ಈಗ ಅಂಕಿಸಂಖ್ಯಾ ಶಾಸ್ತ್ರಜ್ಞರು ಇದನ್ನು ಇಷ್ಟಪಡುವುದಿಲ್ಲ, ಏಕೆಂದರೆ, ಅವರು ಹೇಳುತ್ತಾರೆ ಇವು ವಾಸ್ತವವನ್ನು ತೋರಿಸುವುದಿಲ್ಲ; ನಾವು ಸಂಖ್ಯಾಶಾಸ್ತ್ರದ, ವಿಶ್ಲೇಷಣೆ ವಿಧಾನ ಹೊಂದಿರಬೇಕು. ಆದರೆ ಇದು ಸಿದ್ಧಾಂತ-ರೂಪಣೆಯಾಗಿದೆ.
ನಾನೀಗ ವಿಶ್ವದ ವಿಚಾರದೊಂದಿಗೆ ಕೊನೆಗೊಳಿಸುತ್ತೇನೆ. ಅಲ್ಲಿ, ಇಂಟರ್ನೆಟ್ ಬರುತ್ತಿದೆ. ಇಂಟರ್ನೆಟ್ ಉಪಯೋಗಿಸುವವರ ಸಂಖ್ಯೆ ಹೀಗೆ ಏರುತ್ತಿದೆ. ಇದು ತಲಾದಾಯ ಜಿ.ಡಿ.ಪಿ. ಹಾಗೂ ಇದು ಬರುತ್ತಿರುವ ಹೊಸ ತಂತ್ರಜ್ಞಾನ, ಆದರೆ, ಅದು ಎಷ್ಟು ಆಶ್ಚರ್ಯಕರವಾಗಿ, ದೇಶಗಳ ಆರ್ಥಿಕ ಪರಿಸ್ಥಿತಿಗಳಿಗೆ ಹೊಂದುತ್ತಿವೆ. ಅದಕ್ಕೇ ಡಾಲರ್ 100 ನ ಒಂದು ಕಂಪ್ಯೂಟರ್ ಬಹಳ ಮುಖ್ಯವಾಗುತ್ತದೆ. ಆದರೆ ಇದು ಒಳ್ಳೆಯ ಪ್ರವೃತ್ತಿ. ಇದು ವಿಶ್ವವೇ ಚಪ್ಪಟೆಯಾದಂತೆ, ಹೌದಲ್ಲವೆ? ಈ ರಾಷ್ಟ್ರಗಳು ಆರ್ಥಿಕ ಸ್ಥಿತಿಗಿಂತ ಮೇಲೇರುತ್ತಿವೆ ಮತ್ತು ಬಹಳ ಆಸಕ್ತಿಕರವೆಂದರೆ ಇವುಗಳನ್ನು ವರ್ಷಪೂರ್ತಿ ಅನುಸರಿಸುವುದು, ನೀವು ಮಾಡಲು ಸಾಧ್ಯವಾಗುವುದು ನಾನು ಆಶಿಸುವಂತೆ ಎಲ್ಲ ಸಾರ್ವಜನಿಕ ಹಣದ ಸಹಾಯದಿಂದ ಪಡೆದ ಮಾಹಿತಿಯೊಂದಿಗೆ. ನಿಮಗೆ ತುಂಬಾ ಧನ್ಯವಾದಗಳು. (ಚಪ್ಪಾಳೆ).
You can share this video by copying this HTML to your clipboard and pasting into your blog or web page. This video will play with subtitles.
You either have JavaScript turned off or have an old version of the Adobe Flash Player. To view this rating widget you
need to get the latest Flash player.
If your browser allows only "trusted sites" to execute Javascript, you should add the "googleapis.com" domain to your whitelist to allow our Flash detection to work properly.
Got an idea, question, or debate inspired by this talk? Start a TED Conversation.
ಈ ರೀತಿ ಪ್ರಸ್ತುತಪಡಿಸಿದ ಡಾಟಾವನ್ನು ನೀವು ಹಿಂದೆಂದೂ ಕಂಡಿರಲಿಕ್ಕಿಲ್ಲ. ಸ್ಪೊರ್ಟ್ ಕಾಸ್ಟರ್ನ ನಾಟಕ ಮತ್ತು ತುರ್ತಿನಿಂದ ಸಂಖ್ಯಾಶಾಸ್ತ್ರ ಗುರು ಹ್ಯಾನ್ಸ್ ರೋಸ್ಲಿಂಗ್ ತಥಾಕಥಿತ "ಅಭಿವೃದ್ಧಿಶೀಲ ಪ್ರಪಂಚ"ದ ಬಗ್ಗೆ ಇರುವ ಭ್ರಮೆಗಳನ್ನು ಹೋಗಲಾಡಿಸಿದ್ದಾರೆ.
In Hans Rosling’s hands, data sings. Global trends in health and economics come to vivid life. And the big picture of global development—with some surprisingly good news—snaps into sharp focus. Full bio »
18:57 Posted: Jun 2007
Views 2,158,848 | Comments 221
16:51 Posted: May 2008
Views 428,856 | Comments 118
17:56 Posted: Aug 2010
Views 1,345,272 | Comments 248
Just follow the guidelines outlined under our Creative Commons license.
This comment will be attributed to . Not ? Sign Out.