ಮಹಿಳೆಯರಿಗೆ ಮತ್ತು ಮಹನೀಯರಿಗೆ ಶುಭೋದಯ ನನ್ನ ಹೆಸರು ಆರ್ಟ್ ಬೆಂಜಮಿನ್ ಮತ್ತು ನಾನೊಬ್ಬ "ಗಣಿತ ಜಾದುಗಾರ" ಹಾಗೆಂದರೆ, ನಾನು ನನ್ನ ಗಣಿತದ ಮೋಹ ಮತ್ತು ಜಾದುವನ್ನು ಒಂದುಗೂಡಿಸುತ್ತೇನೆ ನಾನು ಕರೆಯುವ "ಗಣಿತ ಜಾದು" ಮಾಡಲು. ಆದರೆ ನಾನು ಪ್ರಾರಂಬಿಸುವ ಮೊದಲು, ಪ್ರೇಕ್ಷಕರಿಗೆ ನನ್ನದೊಂದು ಶೀಘ್ರ ಪ್ರಶ್ನೆ ಇದೆ. ಅಪ್ಪಿತಪ್ಪಿ ಯಾರಾದರೂ ತಮ್ಮ ಜೊತೆ ಈ ದಿನ ಕ್ಯಾಲುಕಲೇಟರ್ ತಂದಿದ್ದೀರಾ? ಗಂಭೀರವಾಗಿ ಕೇಳುತ್ತಿದ್ದೇನೆ,ನಿಮ್ಮಲ್ಲಿ ಕ್ಯಾಲುಕಲೇಟರ್ ಇರುವವರು ತಮ್ಮ ಕೈಯನ್ನು ಎತ್ತಿ, ತಮ್ಮ ಕೈ ಎತ್ತಿ.
ನಾನು - ನಿಮ್ಮ ಕೈ ಮೇಲಕ್ಕೆ ಹೋಗುತ್ತದೆ? ಈಗ ಅದನ್ನು ಹೊರತೆಗೆಯಿರಿ,ಹೊರತೆಗೆಯಿರಿ. ಇನ್ನು ಯಾರಾದರೂ? ನನಗೆ ಕಾಣಿಸುತ್ತಿದೆ, ಅಲ್ಲಿ..ಹಿಂದೆ.. ಒಂದು ಕೈ ಕಾಣಿಸುತ್ತಿದೆ. ನೀವು ಸರ್, ಅಲ್ಲಿಗೆ ಮೂರು, ಮತ್ತು ಈ ಬದಿಯಲ್ಲಿ ಯಾರಾದರೂ? ಸರಿ, ನೀವು ಎಲ್ಲರೂ ಮೇಲಕ್ಕೆ ಹತ್ತಿ ಬನ್ನಿ. ನೀವು ನಾಲ್ಕೂ ಜನ ನಿಮ್ಮ ಕ್ಯಾಲುಕಲೇಟರ್ಗಳನ್ನು ತೆಗೆದುಕೊಂಡು, ನನ್ನೊಂದಿಗೆ ಸ್ಟೇಜಿನ ಮೇಲೆ ಸೇರಿ. ಮತ್ತು ನಾವು ಈ ಸ್ವಯಂಸೇವಕರಿಗೆ ಒಂದು ಸುತ್ತಿನ ಚಪ್ಪಾಳೆ ಹೊಡಿಯೋಣ
ಅದು ಸರಿ. ಈಗ, ನನಗೆ ಈ ಕ್ಯಾಲುಕಲೇಟರ್ಗಳ ಜೊತೆ ಕೆಲಸ ಮಾಡಲು ಅವಕಾಶವಿಲ್ಲದ್ದರಿಂದ, ಅವುಗಳೆಲ್ಲಾ ಸರಿಯಾಗಿ ಕೆಲಸ ಮಾಡುತ್ತಿವೆಯೆಂದು ಖಾತ್ರಿ ಪಡಿಸಿಕೊಳ್ಳಬೇಕು. ಯಾರಾದರೂ ನಮಗೆ ಎರಡು ಅಂಕಿಯ ಸಂಖ್ಯೆಯನ್ನು ನೀಡುವ ಮೂಲಕ ಪ್ರಾರಂಬಿಸಬಹುದೇ? ಯಾವುದಾದರೂ ಎರಡು ಅಂಕಿಯ ಸಂಖ್ಯೆ?
ಆರ್ಥರ್ ಬೆಂಜಮಿನ್: 22. ಮತ್ತು ಇನ್ನೊಂದು ಎರಡು ಅಂಕಿಯ ಸಂಖ್ಯೆ, ಸರ್?
ಆಬೆಂ: 22ನ್ನು 47 ರಿಂದ ಗುಣಿಸಿದರೆ, ನೀವು 1034 ಪಡೆಯುತ್ತೀರೆಂದು ಖಾತ್ರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಕ್ಯಾಲುಕಲೇಟರ್ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಿಮಗೆಲ್ಲರಿಗೂ 1034 ಬಂತಾ? 1034?
ಎಬಿ: 594. ನಾವು ಮೂರು ಜನರಿಗೆ ದೊಡ್ಡ ಚಪ್ಪಾಳೆ ನೀಡೋಣ.
ನೀವು ಅದರ ಬದಲು ಉತ್ತಮ ದರ್ಜೆಯ ಕ್ಯಾಲುಕಲೇಟರ್ ನಲ್ಲಿ ಪ್ರಯತ್ನಿಸಲು ಬಯಸುತ್ತೀರಾ, ಅಗತ್ಯವಿದ್ದರೆ? ಸರಿ, ಉತ್ತಮ ನಾನೇನು ಪ್ರಯತ್ನಿಸುತ್ತೇನ ಮತ್ತು ಮಾಡುತ್ತೇನೆ ಎಂದರೆ- ನಿಮ್ಮಲ್ಲಿ ಕೆಲವರು ಉತ್ತರ ಪಡೆಯಲು ಸ್ವಲ್ಪ ಸಮಯ ತೆಗೆದುಕೊಂಡುದನ್ನು ಗಮನಿಸಿದೆ. ಅದು ಪರವಾಗಿಲ್ಲ. ನಾನು ಗುಣಿಸಲು ನಿಮಗೊಂದು ಸುಲಭ ದಾರಿಯನ್ನು ತೋರಿಸುತ್ತೇನೆ ಕ್ಯಾಲುಕಲೇಟರ್ಗಿಂತಲೂ ವೇಗವಾಗಿ. ಸಂಖ್ಯೆಯ ವರ್ಗ ಎಂಬುದೊಂದು ಇದೆ ಅದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ - ಒಂದು ಸಂಖ್ಯೆಯನ್ನು ತೆಗೆದುಕೊಳ್ಳುವುದು ಮತ್ತು ಅದೇ ಸಂಖ್ಯೆಯಿಂದಲೇ ಅದನ್ನು ಗುಣಿಸುವುದು. ಉದಾಹರಣೆಗೆ, 5 ರ ವರ್ಗ?
ಎಬಿ: 25. ಈಗ, ನಾವು ಕ್ಯಾಲುಕುಲೇಟರ್ ನಲ್ಲಿ ವರ್ಗವನ್ನು ಮಾಡಲು - ನಾನು ಇದರಲ್ಲಿ ನಿಮಗೆ ತೋರಿಸುತ್ತೇನೆ - ಒಂದು ಸಂಖ್ಯೆಯನ್ನು ತೆಗೆದುಕೊಳ್ಳುವುದು, ಉದಾಹಣೆಗೆ ಐದು. "ಟೈಮ್ಸ್" ಒತ್ತುವುದು ಮತ್ತು "=" ಒತ್ತುವುದು. ಮತ್ತು ಹೆಚ್ಚಿನ ಕ್ಯಾಲುಕುಲೇಟರ್ ಗಳು ವರ್ಗವನ್ನು ನೀಡುತ್ತವೆ.™ ಕೆಲವು ಹಳೆಯ RPN ಕ್ಯಾಲುಕಲೇಟರ್ ಗಳಲ್ಲಿ "x squared" ಗುಂಡಿ ಇರುತ್ತದೆ. ಅದು ಇನ್ನೂ ವೇಗವಾಗಿ ಲೆಕ್ಕ ಮಾಡಲು ಸಹಾಯ ಮಾಡುತ್ತವೆ. ನಾನೀಗ ಏನು ಮಾಡಲು ಪ್ರಯತ್ನಿಸುತ್ತೇನೆಂದರೆ, ನನ್ನ ತಲೆಯೊಳಗೆ ನಾಲ್ಕು ಎರಡು-ಅಂಕಿಯ ಸಂಖ್ಯೆಯ ವರ್ಗವನ್ನು ಲೆಕ್ಕ ಹಾಕುತ್ತೇನೆ ಅವರು ಕ್ಯಾಲುಕುಲೇ್ಟರ್ನಲ್ಲಿ ಮಾಡುವುದಕ್ಕಿಂತ ವೇಗವಾಗಿ, ಸುಲಭ ವಿಧಾನ ಉಪಯೋಗಿಸಿಯೂ.. ಎರಡನೆ ಸಾಲಿನಲ್ಲಿರುವವರನ್ನು ನಾನು ಕರೆಯುತ್ತೇನೆ, ನಾಲ್ಕು ಜನರನ್ನು ಒಂದು, ಎರಡು, ಮೂರು, ನಾಲ್ಕು - ಪ್ರತಿಯೊಬ್ಬರೂ ಎರಡು-ಆಂಕಿಯ ಸಂಖ್ಯೆಯನ್ನು ಹೇಳಿ ಮತ್ತು ನೀವು ಮೊದಲ ಸಂಖ್ಯೆಯ ವರ್ಗ ಮಾಡಿ, ಮತ್ತು ನೀವು ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ಸಂಖ್ಯೆಯನ್ನು ವರ್ಗಮಾಡಿ. ನಾನು ಪ್ರಯತ್ನಿಸಿ ನಿಮಗೆ ಉತ್ತರವನ್ನು ಹೇಳುತ್ತೇನೆ, ಆಯಿತೆ? ವೇಗವಾಗಿ - ದಯವಿಟ್ಟು ಎರಡು-ಅಂಕಿಯ ಸಂಖ್ಯೆ
ಎಬಿ: 59 ರ ವರ್ಗ. ಸರಿ, ಮತ್ತು ಕೊನೆಗೆ?
ಎಬಿ: 93 ರ ವರ್ಗ. ನೀವು ನಿಮ್ಮ ಉತ್ತರವನ್ನು ದಯವಿಟ್ಟು ಗಟ್ಟಿಯಾಗಿ ಹೇಳಿ?
ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇನೆ. ನಾನು ಈ ಬಾರಿ ಮೂರು-ಅಂಕಿ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ. ನಾನು ಇದನ್ನು ಬರೆದುಕೊಳ್ಳುವುದೂ ಇಲ್ಲ - ಅವರು ಸಂಖ್ಯೆ ಹೇಳಿದಾಗ ನಾನು ಅದನ್ನು ಪುನರುಚ್ಚರಿಸುತ್ತೇನೆ. ನಾನು ಸೂಚಿಸುವ ಯಾರಾದರೂ ಒಂದು ಮೂರು-ಅಂಕಿಯ ಸಂಖ್ಯೆಯನ್ನು ಜೋರಾಗಿ ಹೇಳಿ. ನಮ್ಮ ತಂಡದ ಯಾರಾದರೊಬ್ಬರು ಉತ್ತರವನ್ನು ಪರೀಕ್ಷಿಸಿ. ಉತ್ತರ ಸರಿಯಾಗಿದ್ದರೆ ಏನಾದರೂ ಸಂಕೇತವನ್ನು ನೀಡಿ. ಒಂದು ಮೂರು-ಅಂಕಿಯ ಸಂಖ್ಯೆ, ಸರ್, ಹೇಳಿ?
ಸರಿ? ಒಳ್ಳೆಯದು. ಇನ್ನೊಂದು, ಇನ್ನೊಂದು ಮೂರು-ಅಂಕಿ - (ಚಪ್ಪಾಳೆ) - ಇನ್ನೊಂದು ಮೂರು-ಅಂಕಿ ಸಂಖ್ಯೆ, ಸರ್?
ಎಬಿ: 457 ರ ವರ್ಗ 205,849 205,849? ಹೌದಾ? ಸರಿ,ಇನ್ನೊಂದು ಇನ್ನೊಂದು ಮೂರು-ಅಂಕಿ ಸಂಖ್ಯೆ, ಸರ್?
ಪ್ರೇಕ್ಷಕ: 321 ಆಬೆಂ: 321 ರ 103,041. 103,041 ಸರಿ? ದಯವಿಟ್ಟು ಇನ್ನೂ ಒಂದು ಮೂರು-ಅಂಕಿ ಸಂಖ್ಯೆ.
ಪ್ರೇಕ್ಷಕ: ಆ..., 722 ಎಬಿ: 722 ರ ವರ್ಗ 500... ಊ..., ಅದು ಕಷ್ಟಕರ ಅದು 513,284 ಸರಿಯಾ?
ಎಬಿ: ಸರಿ? ಓ... ದಯವಿಟ್ಟು ಇನ್ನೊಂದು ಇನ್ನೊಂದು ಮೂರು-ಅಂಕಿ ಸಂಖ್ಯೆ, ಸರ್.
ಪ್ರೇಕ್ಷಕ:162 162 ರ ವರ್ಗ 26,244. ನಿಮಗೆ ಧನ್ಯವಾದಗಳು.
ನಾನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ಪ್ರಯತ್ನಿಸುತ್ತೇನೆ
ನಾನು ಈ ಬಾರಿ ನಾಲ್ಕು-ಅಂಕಿ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ. ಈಗ ನೀವು ನಿಮ್ಮದೇ ಸಮಯವನ್ನು ತೆಗೆದುಕೊಳ್ಳಬಹುದು; ನಾನು ನಿಮಗಿಂತ ಮೊದಲು ಉತ್ತರಿಸುವುದಿಲ್ಲ ಆದರೆ ನಾನು ಸರಿಯಾದ ಉತ್ತರ ನೀಡಲು ಪ್ರಯತ್ನಿಸುತ್ತೇನೆ. ಇದನ್ನು ಯಾದೃಚ್ಚಿಕ ಆಯ್ಕೆ ಮಾಡಲು ನಾವು ನಾಲ್ಕನೇ ಸಾಲಿನವರನ್ನು ಈ ಬಾರಿ ತೆಗೆದುಕೊಳ್ಳೋಣ ಅದೇ ಒಂದು, ಎರಡು, ಮೂರು, ನಾಲ್ಕು ಪ್ರತಿಯೊಬ್ಬರೂ ಸೊನ್ನೆ ಮತ್ತು ಒಂಭತ್ತರ ನಡುವಿನ ಒಂದು ಸಂಖ್ಯೆಯನ್ನು ಜೋರಾಗಿ ಹೇಳಿ. ಇದೇ ನಾನು ವರ್ಗ ಹೇಳುವ ನಾಲ್ಕು-ಅಂಕಿ ಸಂಖ್ಯೆಯಾಗಿರುತ್ತದೆ.
ಪ್ರೇಕ್ಷಕ: ಎಂಟು. ಎಬಿ: ಎಂಟು 9,758, ಇದು ನನ್ನ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ, ಆದರಿಂದ ದಯವಿಟ್ಟು ಸಹಿಸಿಕೊಳ್ಳಿ. 95,218,564?
ಈಗ, ನಾನು ಐದು-ಅಂಕಿಯ ಸಂಖ್ಯೆಯ ವರ್ಗ ಹೇಳಲು ಪ್ರಯತ್ನಿಸುತ್ತೇನೆ - ಮತ್ತು ನಾನು ಮಾಡಬಲ್ಲೆ - ಆದರೆ ದುರದೃಷ್ಟವಶಾತ್ ಹೆಚ್ಚಿನ ಕ್ಯಾಲುಕುಲೇಟರ್ಗಳು ಮಾಡಲಾರವು.
ಎಂಟು-ಅಂಕಿಯ ಸಾಮರ್ಥ್ಯ ಇದೆ - ನೀವು ಅದನ್ನು ದ್ವೇಷಿಸುವರೆನೋ? ಆದ್ದರಿಂದ ನಾವು ಕ್ಯಾಲುಕುಲೇಟರ್ಗಳ ಮಿತಿಯನ್ನು ತಲುಪಿರುವುದರಿಂದ - ಏನದು? ನಿಮ್ಮದು ಮಾಡುತ್ತದೆಯೆ -
ಎಬಿ: ನಿಮ್ಮ ಇನ್ನೂ ದೊಡ್ಡದನ್ನು ಮಾಡುತ್ತದೆಯೆ? ಒಹ್ - ನಿಮ್ಮದು ಮಾಡುತ್ತದೆ?
ಎಬಿ: ನಾನು ನಿಮ್ಮೊಂದಿಗೆ ಮತ್ತೆ ಮಾತಾಡುತ್ತೇನೆ. ಅಷ್ಟರೊಳಗೆ, ನನ್ನ ಪ್ರದರ್ಶನದ ಮೊದಲ ಭಾಗವನ್ನು ಬೇರೆ ಸ್ವಲ್ಪ ಚಮತ್ಕಾರ ತೋರಿಸಿ ನಾನು ಮುಗಿಸುತ್ತೇನೆ ಈ ಬೋರ್ಡ್ ಮೇಲಿರುವ ಸಂಖೆಯಲ್ಲಿ ಅತ್ಯಂತ ದೊಡ್ಡ ಸಂಖ್ಯೆಯನ್ನು ನಾವು ತೆಗೆದುಕೊಳ್ಳೋಣ, 8649 ನೀವು ಈ ಸಂಖ್ಯೆಯನ್ನು ನಿಮ್ಮ ಕ್ಯಾಲುಕುಲೇಟರ್ನಲ್ಲಿ ಒತ್ತುತ್ತೀರಾ? ಮತ್ತು ಈ ಬಾರಿ ವರ್ಗ ಮಾಡುವ ಬದಲು ನೀವು ಅ ಸಂಖ್ಯೆಯನ್ನು ತೆಗೆದುಕೊಂಡು ಗುಣಿಸಿ ಯಾವುದಾದರೂ ನಿಮಗಿಷ್ಟವಾದ ಮೂರು-ಅಂಕಿ ಸಂಖ್ಯೆಯಿಂದ. ನೀವು ಯಾವು ಸಂಖ್ಯೆಯಿಂದ ಗುಣಿಸುತ್ತೀರೆಂದು ನನಗೆ ಹೇಳಬೇಡಿ ಯಾವುದಾದರೂ ಮೂರು-ಅಂಕೆ ಸಂಖ್ಯೆಯಿಂದ ಗುಣಿಸಿ ನೀವೊಂದು ಉತ್ತರ ಪಡೆಯುತ್ತೀರಿ ಒಂದು ಆರು-ಅಂಕಿಗಳ ಸಂಖ್ಯೆ ಅಥವಾ ಬಹುಶಃ ಒಂದು ಏಳು-ಅಂಕಿ ಸಂಖ್ಯೆ ನಿಮಗೆ ಎಷ್ಟು ಅಂಕಿ ಬಂದಿದೆ, ಆರು ಅಥವಾ ಏಳು?
ಎಬಿ: ಏಳು? ಏಳು? ಮತ್ತು, ಅನಿರ್ದಿಷ್ಟ.
ಎಬಿ: ಏಳು. ಅದು ನನಗೆ ಹೇಗಾದರೂ ತಿಳಿದಿರುವ ಸಾಧ್ಯತೆ ಇದೆಯೇ? ನಿಮಲ್ಲಿರುವ ಆ ಏಳು ಸಂಖ್ಯೆ ಯಾವುದೆಂದು? "ಇಲ್ಲ" ಎಂದು ಹೇಳಿ
ಒಳ್ಳೆಯದು. ಹಾಗಾದರೆ ನಾನು ಅಸಾಧ್ಯವಾದುದನ್ನು ಪ್ರಯತ್ನಿಸುತ್ತೇನೆ - ಅಥವಾ ಕನಿಷ್ಠ ನಂಬಲು ಕಷ್ಟವಾದದ್ದನ್ನು. ನೀವು ಪ್ರತಿಯೊಬ್ಬರೂ ಏನು ಮಾಡಬೇಕೆಂದು ಇಷ್ಟ ಪಡುತ್ತೇನೆಂದರೆ - ನಿಮ್ಮ ಏಳು ಸಂಖ್ಯೆಯಲ್ಲಿ ಆರು ಸಂಖ್ಯೆಗಳನ್ನು, ಯಾವುದಾದರೂ ಆರು ಸಂಖ್ಯೆಗಳನ್ನು ನಿಮಗಿಷ್ಟವಾದ ಯಾವುದೇ ಅನುಕ್ರಮದಲ್ಲಿ ಹೇಳಿ.
ಒಂದು ಬಾರಿ ಒಂದು ಸಂಖ್ಯೆ, ನಾನು ನೀವು ಬಿಟ್ಟಿರುವ ಸಂಖ್ಯೆಯನ್ನು ಊಹಿಸಲು ಪ್ರಯತ್ನಿಸುತ್ತೇನೆ. ಹಾಗಾದರೆ, ನಿಮ್ಮ ಏಳು-ಅಂಕಿ ಸಂಖ್ಯೆಯಿಂದ ಪ್ರಾರಂಭಿಸೋಣ. ಯಾವುದಾದರೂ ಆರು ಸಂಖ್ಯೆಯನ್ನು ದಯವಿಟ್ಟು ಹೇಳಿ.
ಮಹಿಳೆ: ಹೌದು. ಆಬೆಂ: ಒಳ್ಳೆಯದು, ಸರಿ. ಅದೇ. ನಿಮ್ಮ ಬಳಿ ಒಂದು ಏಳು-ಅಂಕಿ ಸಂಖ್ಯೆ ಇದೆ, ಅದರಲ್ಲಿ ಯವುದಾದರೂ ಆರು ಸಂಖ್ಯೆಯನ್ನು ಜೋರಾಗಿ ಹೇಳಿ.
ಆಬೆಂ: ನನಗೆ ಕೇವಲ ಐದು ಸಂಖ್ಯೆ ಮಾತ್ರ ಕೇಳಿಸಿತು. 1 - ತಡೆಯಿರಿ - 44875 - ನೀವು 6 ಸಂಖ್ಯೆಯನ್ನು ಬಿಟ್ಟಿದ್ದೀರಾ?
ಮಹಿಳೆ: ಹೌದು. ಆಬೆಂ: ಅವರು ಹೇಳಿದ ಹಾಗೆ, ಸರಿ. ನಿಮ್ಮಲ್ಲಿ ಏಳು-ಅಂಕಿ ಸಂಖ್ಯೆಯಿದೆ - ಜೋರಾಗಿ ಮತ್ತು ಸ್ಪಷ್ಟವಾಗಿ ಯಾವುದಾದರೂ ಆರು ಸಂಖ್ಯೆಯನ್ನು ಹೇಳಿ.
ಆಬೆಂ: ನನಗನ್ನಿಸುತ್ತದೆ ನೀವು ಸಂಖ್ಯೆ 3 ನ್ನು ಬಿಟ್ಟಿದ್ದೀರಾ? ಅದು ಮೂರು. ಉಆದೃಚ್ಛಿಕವಾಗಿ ಊಹಿಸಿದರೆ ನಾನು ಎಲ್ಲ್ಲಾ ನಾಲ್ಕು ಸಂಖ್ಯೆಯನ್ನು ಸರಿಯಾಗಿ ಹೇಳುವ ಅವಕಾಶ 10000: 10 ರ ಘಾತ 4. ಸರಿ. ಅದರಲ್ಲಿ ಯಾವುದಾದರೂ ಆರು. ಅದನ್ನು ದಯವಿಟ್ಟು ಈ ಬಾರಿ ಸರಿಯಾಗಿ ಅದಲು ಬದಲು ಮಾಡಿ ಹೇಳಿ.
ಆಬೆಂ: ನೀವು 7 ಸಂಖ್ಯೆಯನ್ನು ಬಿಟ್ಟು ಬಿಟ್ಟಿದ್ದೀರಾ? ನಾವು ಈ ಎಲ್ಲಾ ನಾಲ್ಕು ಜನರಿಗೂ ಒಂದು ಸುತ್ತಿನ ಚಪ್ಪಾಳೆ ತಟ್ಟೋಣ. ನಿಮಗೆಲ್ಲರಿಗೂ ಧನ್ಯವಾದಗಳು. ನನ್ನ ಮುಂದಿನ ಸಂಖ್ಯೆ - (ನಗು) ನನ್ನ ಬ್ಯಾಟರಿಗಳನ್ನು ಮಾನಸಿಕವಾಗಿ ಚಾರ್ಜ್ ಮಾಡುತ್ತಿರುವಾಗ ಪ್ರೇಕ್ಷಕರಿಗೆ ನನ್ನಿಂದ ಇನ್ನೂ ಒಂದು ಪ್ರಶ್ನೆ ಇದೆ. ಅನಿರೀಕ್ಷಿತವಾಗಿ, ಯಾರಿಗಾದರೂ ತಮ್ಮ ಹುಟ್ಟಿದ ದಿನದ ವಾರ ಗೊತ್ತಿದೆಯಾ? ನಿಮಗೆ ನಿಮ್ಮ ಹುಟ್ಟಿದ ವಾರ ಗೊತ್ತಿರುವವರು, ಕೈ ಎತ್ತಿ. ನೋಡೋಣ, ನಾವು ಈ ಮಹನೀಯರಿಂದ ಪ್ರಾರಂಭಿಸೋಣ ಸರಿ ಸರ್, ಮೊದಲನೆಯದಾಗಿ ಅದು ಯಾವ ವರ್ಷವಾಗಿತ್ತು? ಅದಕ್ಕೆ ನಾನು ಈ ಮಹನೀಯರಿಂದ ಪ್ರಾರಂಭಿಸಿದೆ. ಯಾವ ವರ್ಷ?
ಪ್ರೇಕ್ಷಕ: ನವಂಬರ್ ಎಬಿ: ನವಂಬರ್ ಯಾವಾಗ?
ಎಬಿ: 23 - ಅದು ಸೋಮವಾರ ಆಗಿತ್ತಾ? ಪ್ರೇಕ್ಷಕ: ಹೌದು. ಸರಿ, ಒಳ್ಳೆಯದು, ಬೇರೆ ಯಾರಾದರೂ? ಬೇರೆ ಯಾರೂ ಪ್ರಯತ್ನಿಸುತ್ತೀರಾ - ನೋಡಿ, ನಾನು ಮಹಿಳೆಯರು ಕೈ ಮೇಲೆ ಮಾಡಿದ್ದನ್ನು ನೋಡಿಲ್ಲ. ಸರಿ, ನೀವು, ಯಾವ ವರ್ಷ?
ಪ್ರೇಕ್ಷಕ: 1949. ಎಬಿ: 1949, ಮತ್ತು ತಿಂಗಳು?
ಪ್ರೇಕ್ಷಕ: ಅಕ್ಟೋಬರ್. ಎಬಿ: ಅಕ್ಟೋಬರ್ ಯಾವಾಗ?
ಆಬೆಂ: ಐದು - ಅದು ಬುಧವಾರ ಆಗಿತ್ತಾ? ಸರಿ, ನಾನೀಗ ನೇರವಾಗಿ ಹಿಂದಿನ ಸಾಲಿಗೆ ಹೋಗುತ್ತೇನೆ. ನಿಮ್ಮದು? ಜೋರಾಗಿ ಹೇಳಿ, ಯಾವ ವರ್ಷ? ಪ್ರೇಕ್ಷಕ: 1959.
ಪ್ರೇಕ್ಷಕ: 1959, ಮತ್ತು ಯಾವ ತಿಂಗಳು?
ಎಬಿ: ಫೆಬ್ರವರಿ ಯಾವಾಗ? ಪ್ರೇಕ್ಷಕ: ಆರರಂದು.
ಎಬಿ: ಆರು - ಅದು ಶುಕ್ರವಾರ ಆಗಿತ್ತಾ? ಪ್ರೇಕ್ಷಕ: ಹೌದು. ಒಳ್ಳೆಯದು, ಅವರ ಹಿಂದುಗಡೆ ಇರುವ ವ್ಯಕ್ತಿ? ಹೇಳಿ - ಹೇಳಿ - ಅದು ಯಾವ ವರ್ಷವಾಗಿತ್ತು?
ಪ್ರೇಕ್ಷಕ: 1947 ಎಬಿ: 1947, ಯಾವ ತಿಂಗಳು?
ಪ್ರೇಕ್ಷಕ: ಏಳು ಎಬಿ: ಏಳು - ಅದು ಬುಧವಾರ ಆಗಿತ್ತಲ್ಲವೆ?
ಎಬಿ: ನಿಮಗೆ ಹತ್ಪೂರ್ವಕ ಧನ್ಯವಾದಗಳು.♫
ಯಾರಾದರೂ ತಮ್ಮ ಹುಟ್ಟಿದ ದಿನದ ವಾರವನ್ನು ತಿಳಿಯಲು ಬಯಸುತ್ತೀರಾ? ನಾವು ಆ ರೀತಿ ಮಾಡಬಹುದು. ನಾನು ನಿಮಗೆ ಉತ್ತರವನ್ನು ಕೊಡಬಲ್ಲೆ, ಹೇಗೆಂದು ನಿಮಗೆ ತಿಳಿಯುದಿಲ್ಲ. ಆದ್ದರಿಂದ ನಾನು ಅದಕ್ಕೆ ತಯಾರಾಗಿ ಬಂದಿದ್ದೇನೆ. ನಾನು ನನ್ನೊಂದಿಗೆ ಕ್ಯಾಲಂಡರ್ ಗಳ ಒಂದು ಪುಸ್ತಕವನ್ನು ತಂದಿದ್ದೇನೆ. ಅದು 1800 ರವರೆಗೂ ಹಿಂದಕ್ಕೆ ಹೋಗಬಲ್ಲದು. ಏಕೆಂದರೆ ಹೇಳಲಿಕ್ಕಾಗದು
ನಾನು ನಿಮ್ಮನ್ನು ನೋಡಿ ಹೇಳ್ತಾ ಇಲ್ಲ, ಸರ್ - ನೀವು ಅಲ್ಲಿ ಕೂತಿದ್ದೀರಿ ಅಷ್ಟೆ. ಕ್ರಿಸ್, ನಿಮಗೆ ಬೇಸರವಿಲ್ಲದಿದ್ದರೆ ನೀವು ನನಗೆ ಸಹಾಯ ಮಾಡಿ. ಇದು ಕ್ಯಾಲೆಂಡರ್ ಗಳ ಪುಸ್ತ್ಕಕ. ಮತ್ತು ನಾನು ಕೇಳುತ್ತೇನೆ - ಯಾರು ತಮ್ಮ ಹುಟ್ಟಿದ ದಿನದ ವಾರವನ್ನು ತಿಳಿಯಬಯಸುತ್ತೀರಾ? ನೀವು ಸರ್? ಸರಿ. ಮೊದಲನೆಯದಾಗಿ ಅದು ಯಾವ ವರ್ಷವಾಗಿತ್ತು?
ಎಬಿ: 66 - ಕ್ಯಾಲೆಂಡರ್ ನಲ್ಲಿ 1966 ಕ್ಕೆ ತಿರುಗಿಸಿ - ಮತ್ತು ಯಾವ ತಿಂಗಳು?
ಪ್ರೇಕ್ಷಕ: ಎಪ್ರಿಲ್. ಎಬಿ: ಎಪ್ರಿಲ್ ಯಾವಾಗ?
ಪ್ರೇಕ್ಷಕ: 17. ಆಬೆಂ: 17 - ನಾನು ಅಂದು ಭಾನುವಾರ ಎಂದು ನಂಬುತ್ತೇನೆ. ಕ್ರಿಸ್, ನೀವು ಖಚಿತಪಡಿಸುತ್ತೀರಾ?
ಕ್ರಿಸ್ ಆಂಡರ್ಸನ್: ಹೌದು. ಎಬಿ: ಸರಿ. ಕ್ರಿಸ್ ನಾನು ಏನು ಗೊತ್ತ ಆ ಪುಸ್ತಕ ನಿಮ್ಮ ಮುಂದೆ ಇರುವವರೆಗೆ ನನಗೊಂದು ಸಹಾಯ ಮಾಡಿ, 1900 ಇಸವಿಯಿಂದ ಹೊರಗೆ ಹೋಗಿ. 1800 ಕ್ಕೆ ಅಥವಾ ಮುಂದಕ್ಕೆ 2000 ಕಡೆಗೆ - ಅದು ನನಗೆ ಅತ್ಯಂತ ದೊಡ್ಡ ಸವಾಲು. ಕ್ರಿಸ್, ನೀವು ಯಾವ ವರ್ಷ ಇಷ್ಟ ಪಡುತ್ತೀರಾ?
ಎಬಿ: 1824, ಸರಿ. ಮತ್ತು ಯಾವ ತಿಂಗಳು? ಕ್ರಿಸ್: ಜೂನ್.
ಎಬಿ: ಜೂನ್ ಯಾವಾಗ? ಕ್ರಿಸ್: ಆರರಂದು.
ಎಬಿ: ಆರರಂದು - ಅದು ಭಾನುವಾರವಾಗಿತ್ತೇ?
ಕ್ರಿಸ್: ಅದು ಆಗಿತ್ತು. ಎಬಿ: ಮತ್ತು ಮೋಡಮಯವಾಗಿತ್ತು. ಒಳ್ಳೆಯದು, ತುಂಬಾ ಧನ್ಯವಾದಗಳು.
ಆದರೆ ನಾನೀಗ ಎಲ್ಲವನ್ನೂ ಮುಚ್ಚಿ ಹಿಂದಕ್ಕೆ ಹೋಗಲು ಬಯಸುತ್ತೇನೆ. ನನ್ನ ಮಂಡನೆಯ ಪ್ರಾರಂಭದ ನಿರೂಪಣೆ ಕಡೆಗೆ ಹೋಗುತ್ತೇನೆ. ಅಲ್ಲೊಬ್ಬ ಸಭ್ಯ ವ್ಯಕ್ತಿಯ ಬಳಿ 10 ಅಂಕಿಯ ಕ್ಯಾಲುಕುಲೇಟರ್ ಇತ್ತು. ಅವರೆಲ್ಲಿದ್ದಾರೆ? ದಯವಿಟ್ಟು ನಿಂತುಕೊಳ್ಳುತ್ತೀರಾ? 10-ಅಂಕಿಯ ವ್ಯಕ್ತಿ? ಸರಿ, ಒಳ್ಳೆಯದು ಸ್ವಲ್ಪ ಹೊತ್ತು ನನಗಾಗಿ ನಿಲ್ಲಿ ಏಕೆಂದರೆ ನೀವೆಲ್ಲಿದ್ದೀರಾ ಎಂದು ನಾನು ನೋಡಬಹುದು. ಸರಿ, ಓ, ಸರಿ - ಸರ್, ನಿಮ್ಮ ಬಳಿ 10-ಅಂಕಿಯ ಕ್ಯಾಲುಕುಲೇಟರ್ ಕೂಡ ಇದೆ? ಸರಿ, ನಾನೀಗ ಏನು ಮಾಡಲು ಪ್ರಯತ್ನಿಸುತ್ತೇನೆ ಮತ್ತು ಮಾಡುತ್ತೇನೆಂದರೆ, ನನ್ನ ತಲೆಯೊಳಗೆ ಒಂದು ಐದು-ಅಂಕಿಯ ಸಂಖ್ಯೆಯನ್ನು ವರ್ಗ ಮಾಡುವುದು ಅದಕ್ಕೆ 10 ಅಂಕೆಯ ಕ್ಯಾಲುಕಲೇಟರ್ನ ಅವಶ್ಯಕತೆಯಿದೆ. ಆದರೆ ನನ್ನ ಕೆಲಸ ನಿಮಗೆ ಹೆಚ್ಚು ಆಸಕ್ತಿದಾಯಕವಾಗಲು, ನನಗೂ ಕೂಡ, ನಾನು ಈ ಸಮಸ್ಯೆಯನ್ನು ಪರಿಹರಿಸುವಾಗ ಜೋರಾಗಿ ಹೇಳಿಕೊಂಡು ಯೋಚನೆ ಮಾಡುತ್ತೇನೆ. ಆದರಿಂದ ನೀವು ನಿಜವಾಗಿ, ಪ್ರಾಮಾಣಿಕವಾಗಿ ನನ್ನ್ನ ಮನಸ್ಸಿನೊಳಗೆ ನಡೆಯುತ್ತಿರುವುದನ್ನು ಕೇಳಬಹುದು ನಾನು ಈ ದೊಡ್ಡ ಮೊತ್ತದ ಲೆಕ್ಕ ಮಾಡುವಾಗ.
ನಾನೀಗ, ನಮ್ಮ ಜಾದುಗಾರ ಗೆಳೆಯ ಲೆನಾರ್ಟ್ ಗ್ರೀನ್ ಬಳಿ ಕ್ಷಮೆ ಕೇಳಬೇಕು. ಒಬ್ಬ ಜಾದೂಗಾರ ನಾಗಿ ನಾವು ರಹಸ್ಯವನ್ನು ಬಹಿರಂಗ ಪಡಿಸಬಾರದೆಂದು ನನಗೆ ಗೊತ್ತು. ಆದರೆ ಬೇರೆಯವರು ನನ್ನ ಪ್ರದರ್ಶನವನ್ನು ಮುಂದಿನ ವಾರ ಮಾಡಲು ಪ್ರಾರಂಭಿಸುತ್ತಾರೆಂದು ನನಗೆ ಭಯವಿಲ್ಲ, ಆದ್ದರಿಂದ - ನಾವು ಸುರಕ್ಷಿತವೆಂದು ನನಗನ್ನಿಸುತ್ತ್ದದೆ. ಅದ್ದರಿಂದ, ನಾವು ಪ್ರಾರಂಭಿಸೋಣ, ನಾವು - ಬೇರೆ ಸಾಲಿನ ಜನರನ್ನು ತೆಗೆದುಕೊಳ್ಳೋಣ, ನಿಮ್ಮಿಂದ ಪ್ರಾರಂಭಿಸಿ. ನಾನು ಐದು ಅಂಕೆಯನ್ನು ಪಡೆಯುತ್ತೇನೆ: ಒಂದು, ಎರಡು, ಮೂರು, ನಾಲ್ಕು - ಓ, ನಾನು ಈ ಸಾಲನ್ನು ಆಗಲೇ ಉಪಯೋಗಿಸಿದ್ದೇನೆ. ನಿಮ್ಮ ಮುಂದಿನ ಸಾಲು ಸರ್, ನಿಮ್ಮಿಂದ ಪ್ರಾರಂಭಿಸೋಣ: ಒಂದು, ಎರಡು, ಮೂರು, ನಾಲ್ಕು, ಐದು. ಒಂದಂಕಿಯನ್ನು ಜೋರಾಗಿ ಹೇಳಿ - ಅದು ಐದು-ಅಂಕಿಯ ಸಂಖ್ಯೆಯಾಗುತ್ತದೆ. ಇದರ ವರ್ಗವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ. ಪ್ರಾರಂಭಿಸಿ.
ಪ್ರೇಕ್ಷಕ: ಮೂರು. ಎಬಿ: ಮೂರು. 57,683. ವರ್ಗ. ಒಂದು ನಿಮಿಷ.
ನಾನು ನಿಮಗೆ ವಿವರಿಸುತ್ತೇನೆ ಹೇಗೆ ಈ ಸಮಸ್ಯೆಯನ್ನು ಬಗೆಹರಿಸಲು ಪ್ರತ್ನಿಸುತ್ತೇನೆಂದು. ನಾನು ಈ ಸಮಸ್ಯೆಯನ್ನು ಮೂರು ಭಾಗಗಳಾಗಿ ವಿಭಾಗಿಸುತೇನೆ. ನಾನು 57,000 ರ ವರ್ಗ ಮಾಡುತ್ತೇನೆ, 683 ರ ವರ್ಗವನ್ನು ಕೂಡಿಸುತ್ತೇನೆ, 57,000 ಬಾರಿ ಕೂಡಿಸುತ್ತೇನೆ 683 ಬಾರಿ ಎರಡು. ಮತ್ತು ಆ ಎಲ್ಲಾ ಸಂಖ್ಯೆಗಳನ್ನು ಒಟ್ಟುಗೂಡಿಸಿ ಮತ್ತು ಏನಾದರೂ ಅದೃಷ್ಟವಿದ್ದರೆ ಉತ್ತರವನ್ನು ತಲುಪುತ್ತೇನೆ. ಈಗ, ನಾನೀಗ ಪುನರಾವಲೋಕನ ಮಾಡುತ್ತೇನೆ. ನಿಮಗೆ ಧನ್ಯವಾದಗಳು. ನಾನು ಬೇರೆ ಏನಾದರೂ ವಿವರಿಸುವಾಗ - - ನೀವು ಉಪಯೋಗಿಸಬಹುದೆಂದು ನನಗೆ ಗೊತ್ತು, ಸರಿತಾನೇ? ನಾನು ಈ ಲೆಕ್ಕವನ್ನು ಮಾಡಬೇಕಾದರೆ, ನೀವು ಕೆಲವೊಂದು ಪದಗಳನ್ನು ಕೇಳಬಹುದು ಸಂಖ್ಯೆಗಳ ಬದಲು ಪದಗಳು ಲೆಕ್ಕಾಚಾರದ ಮಧ್ಯೆ ನುಸುಳಬಹುದು. ಅದು ಏನೆಂದು ನಿಮಗೆ ವಿವರಿಸುತ್ತೇನೆ. ಇದು ಫೊನೆಟಿಕ್ ಕೋಡ್ ಇದೊಂದು ನಾನು ಉಪಯೋಗಿಸುವ ಜ್ಞಾಪಕ ಸಾಧನ ನನಗೆ ಅದು ಸಂಖ್ಯೆಗಳನ್ನು ಪದಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತವೆ. ನಾನು ಅವುಗಳನ್ನು ಪದಗಳಾಗಿ ಸಂಗ್ರಹಿಸುತ್ತೇನೆ, ಮತ್ತು ಮುಂದೆ ಸಂಖ್ಯೆಗಳಾಗಿ ಮತ್ತೆ ವಾಪಸ್ಸು ಪಡೆಯುತ್ತೇನೆ. ಅದು ಜಟಿಲವಾಗಿ ಕೇಳಿಸುತ್ತದೆ ಎಂದು ನನಗೆ ಗೊತ್ತು, ಆದರೆ ಅದು ಜಟಿಲವಲ್ಲ - ಇಲ್ಲಿ "ಮಳೆ ಮನುಷ್ಯ" ನಿಂದ ನೀವು ಏನೋ ನೋಡುತ್ತೀರಾ ಎಂದು ನೀವು ಯೋಚಿಸಬಾರದೆಂದು ನನ್ನ ಇಚ್ಛೆ
ನನ್ನ ಹುಚ್ಚುತನಕ್ಕೆ ಖಂಡಿತವಾಗಿ ಒಂದು ಕ್ರಮವಿದೆ - ಖಂಡಿತವಾಗಿ, ಖಂಡಿತವಾಗಿ. ಕ್ಷಮಿಸಿ.
ನೀವು ADHD ಬಗ್ಗೆ ನನ್ನೊಂದಿಗೆ ಮಾತಾಡ ಬಯಸುವುದಾದರೆ ನೀವು ಮುಂದೆ ಮಾತಾಡಬಹುದು. ಸರಿಯಾ - ಅಷ್ಟರೊಳಗೆ, ಒಂದು ಕೊನೆಯ ಸೂಚನೆ. ಕ್ಯಾಲುಕುಲೇಟರ್ ಹೊಂದಿರುವ ನನ್ನ ತೀರ್ಪುಗಾರರಿಗೆ - ಸರಿ, ನಿಮಗೆ ಗೊತ್ತು ನೀವು ಯಾರೆಂದು - ಇಲ್ಲಿ ಕನಿಷ್ಠ ಶೇಕಡ 50 ಅವಕಾಶವಿದೆ ನಾನು ತಪ್ಪುಮಾಡಬಹುದು. ನಾನು ತಪ್ಪು ಮಾಡಿದರೆ, ನನಗೆ ತಪ್ಪೇನೆಂದು ಹೇಳಬೇಡಿ; ಕೇವಲ, "ನೀವು ಹತ್ತಿರದಲ್ಲಿದ್ದೀರಿ" ಎಂದು ಹೇಳಿ ಅಥವಾ ಅದರಂತೆ ಏನಾದರೂ ಸೂಚನೆ ಕೊಡಿ. ಮತ್ತು ನಾನು ಮತ್ತೊಮ್ಮೆ ಸರಿಯಾದ ಉತ್ತರವನ್ನು ಗುರುತಿಸಲು ಪ್ರಯತ್ನಿಸುತ್ತೇನೆ - ಇದೇ ಸಾಕಷ್ಟು ಮನರಂಜನೆ ಕೊಡುತ್ತದೆ. ಒಂದು ವೇಳೆ, ನಾನು ಸರಿಯಾದರೆ, ನೀವೇನಾದರೂ ಮಾಡಿ, ಆದರೆ ನಿಮ್ಮಲ್ಲಿಯೇ ಇಟ್ಟುಕೊಳ್ಳಬೇಡಿ, ಓಕೆ?
ನಾನು ಸರಿಯಾದ ಉತ್ತರವನ್ನು ಪಡೆದೆ ಎಂಬುದನ್ನು ಖಂಡಿತವಾಗಿ ಎಲ್ಲರೂ ತಿಳಿಯುವಂತೆ ಮಾಡಿ. ಯಾಕೆಂದರೆ ಇದು ನನ್ನ ದೊಡ್ಡ ಮುಕ್ತಾಯ, ಓಕೆ. ಇನ್ನೂ ಯಾವ ತಡೆ ಇಲ್ಲದೇ ನಾವು ಮುಂದುವರಿಯೋಣ. ನಾನು ಸಮಸ್ಯೆಯ ಮಧ್ಯದಿಂದ ಪ್ರಾರಂಭಿಸುತ್ತೇನೆ, 57 ಬಾರಿ 683. ಈಗ, 57 ಬಾರಿ 68 ಅದು 3400, ಪ್ಲಸ್ 476 ಅಂದರೆ 3876 ಅದು 38,760 ಪ್ಲಸ್ 171, 38,760 ಪ್ಲಸ್ 171 ಅದು 38,931 38,931; ಅದ್ದನ್ನು ಎರಡು ಪಟ್ಟು ಮಾಡಿದರೆ ನಮಗೆ ಸಿಗುತ್ತದೆ 77,862. 77,862 ಕುಕ್ಕಿ ಫಿಸ್ಸನ್ ಆಗುತ್ತದೆ, ಕುಕ್ಕಿ ಫಿಸ್ಸನ್ ಅಂದರೆ 77,822. ಅದು ಸರಿ ಎಂದೆನಿಸುತ್ತದೆ. ನಾನು ಮುಂದುವರಿಯುತ್ತೇನೆ. ಕುಕ್ಕಿ ಫಿಸ್ಸನ್, ಸರಿ. ಮುಂದಕ್ಕೆ, ನಾನು 57 ರ ವರ್ಗ ಮಾಡುತ್ತೇನೆ, ಅದು 3,249, ಆದರಿಂದ ನಾನು ಹೇಳಬಹುದು, ಮೂರು ಬಿಲಿಯನ್. 249 ತೆಗೆದುಕೊಂಡು, ಅದನ್ನು ಕುಕ್ಕಿಗೆ ಸೇರಿಸಿ, 249. ಊಫ್, ಆದರೆ ನಾನು ಶೇಷ ಬರುತ್ತಾ ಇರುವುದನ್ನು ನೋಡುತ್ತೀದ್ದೇನೆ - 249 - ಅದನ್ನು ಕುಕ್ಕಿಗೆ ಕೂಡಿಸಿ, 250 ಪ್ಲಸ್ 77, ಅಂದರೆ 327 ಮಿಲಿಯನ್ - ಫಿಸ್ಸನ್, ಫಿಸ್ಸನ್, ಸರಿ, ಅಂತಿಮವಾಗಿ, ನಾವು 683 ರ ವರ್ಗ ನೋಡೋಣ, ಅದೆಂದರೆ 700 ಬಾರಿ 666, ಪ್ಲಸ್ 17ರ ವರ್ಗ ಅದು 466,489, ಅದನ್ನು ತಿರುಗಿಸು ನನಗೆ ಬೇಕಾದರೆ ಸುತ್ತು ತಿರುಗಿಸು, 466 ನ್ನು ತೆಗೆದುಕೊಂಡು ಅದನ್ನು ಫಿಸ್ಸನ್ ಗೆ ಕೂಡಿಸು, ಪಡೆಯಲು ಓ ಪಡೆ - 328.489.
ನಿಮಗೆ ಹತ್ಪೂರ್ವಕ ಧನ್ಯವಾದಗಳು. ನೀವು ಗಣಿತಜಾದುವನ್ನು ಸಂತೋಷಪಟ್ಟೀದ್ದೀರಾ ಎಂದು ಆಶಿಸುತ್ತೇನೆ. ಧನ್ಯವಾದಗಳು.
You can share this video by copying this HTML to your clipboard and pasting into your blog or web page. This video will play with subtitles.
You either have JavaScript turned off or have an old version of the Adobe Flash Player. To view this rating widget you
need to get the latest Flash player.
If your browser allows only "trusted sites" to execute Javascript, you should add the "googleapis.com" domain to your whitelist to allow our Flash detection to work properly.
Got an idea, question, or debate inspired by this talk? Start a TED Conversation.
ಈ ಸ್ವಾರಸ್ಯವಾದ ಪ್ರದರ್ಶನದಲ್ಲಿ, ಆರ್ಥರ್ ಬೆಂಜಮಿನ್ ಕ್ಯಾಲುಕೇಟರ್ಗಳ ತಂಡಕ್ಕಿಂತ ವೇಗವಾಗಿ 3-ಅಂಕಿ ಸಂಖ್ಯೆಯ ವರ್ಗವನ್ನು ಕಂಡುಹಿಡಿಯುತ್ತಾರೆ, ಮತ್ತೊಂದು ದೊಡ್ಡ ಮಾನಸಿಕ ಸೂತ್ರವನ್ನು ಬಿಡಿಸುತ್ತಾರೆ ಮತ್ತು ಕೆಲವು ಹುಟ್ಟಿದ ದಿನಗಳನ್ನು ಊಹಿಸುತ್ತಾರೆ. ಅವರು ಅದನ್ನು ಹೇಗೆ ಮಾಡುತ್ತಾರೆ? ಅವರೇ ನಿಮಗೆ ತಿಳಿಸುತ್ತಾರೆ.
Using daring displays of algorithmic trickery, lightning calculator and number wizard Arthur Benjamin mesmerizes audiences with mathematical mystery and beauty. Full bio »
Translated into Kannada by Srinivas Natekar
Reviewed by Jagadish Kadri
Comments? Please email the translators above.
14:33 Posted: Apr 2007
Views 896,273 | Comments 80
19:49 Posted: Jul 2008
Views 4,339,566 | Comments 503
31:08 Posted: Aug 2008
Views 1,558,060 | Comments 95
Just follow the guidelines outlined under our Creative Commons license.
This comment will be attributed to . Not ? Sign Out.