ನಾನು ಎರಡು ವರ್ಷಗಳ ಹಿಂದೆ 2,000 ಸಲ ನಡೆಸಿಕೊಟ್ಟಿದ್ದ ಸ್ಲೈಡ್ ಶೋ ಈಗ ನಡೆಸಿಕೊಟ್ಟಿದ್ದೇನೆ. ನಾನು ಇಂದು ಬೆಳಿಗ್ಗೆ ಒಂದು ಚಿಕ್ಕ ಸ್ಲೈಡ್ ಶೋ ಕೊಡುತ್ತಿದ್ದೇನೆ ಅದನ್ನು ನಾನು ಪ್ರಥಮ ಬಾರಿಗೆ ಕೊಡುತ್ತಿದ್ದೇನೆ, ಹಾಗಾಗಿ -- ಸರಿ ಅದು -- ನನಗೆ ಅಡ್ಡಿಯನ್ನು ಏರಿಸಲು ಇಷ್ಟವೂ ಇಲ್ಲ ಅಥವಾ ಅಗತ್ಯವೂ ಇಲ್ಲ, ನಾನು ವಾಸ್ತವವಾಗಿ ಅಡ್ಡಿ ಕಡಿಮೆಮಾಡಲು ಪ್ರಯತ್ನಿಸುತ್ತಿದ್ದೇನೆ. ಏಕೆಂದರೆ, ಇವನ್ನು ಜೊತೆಯಾಗಿ ಸೇರಿಸಿದ್ದೇನೆ ಈ ಋತುವಿನ ಸವಾಲನ್ನು ಎದುರಿಸಲು.
ಹಾಗೂ ನನಗೆ ಕರೇನ್ ಆರ್ಮ್ಸ್ಟ್ರಾಂಗ್ನ ಅದ್ಭುತ ನಿರೂಪಣೆ ನೆನಪಿಗೆ ಬರುತ್ತದೆ ಧರ್ಮ ನಿಜವಾಗಿಯೂ ಸರಿಯಾಗಿ ಅರ್ಥಮಾಡಿಕೊಂಡರೆ ಅದು ನಂಬಿಕೆ ಬಗ್ಗೆ ಅಲ್ಲ, ಆದರೆ ಅದು ವರ್ತನೆ ಬಗ್ಗೆ. ಬಹುಶಃ ನಾವು ಆಶಾವಾದದ ಬಗ್ಗೆಯೂ ಇದನ್ನೇ ಹೇಳಬಹುದು. ನಾವು ಆಶಾವಾದಿಗಳಾಗುವುದಕ್ಕೆ ನಮಗೆ ಎಷ್ಟು ಧೈರ್ಯ? ಆಶಾವಾದವನ್ನು ಒಂದೊಂದು ಸಾರಿ ನಂಬಿಕೆ ಎಂದು ವರ್ಗೀಕರಿಸಲಾಗುತ್ತದೆ, ಒಂದು ಬುದ್ಧಿವಂತಿಕೆ ಸೋಗು. ಮಹಾತ್ಮ ಗಾಂಧಿ ಪ್ರಸಿದ್ಧವಾಗಿ ಹೇಳಿದಂತೆ, "ಪ್ರಪಂಚದಲ್ಲಿ ನೀವು ಕಾಣಬಯಸುವ ಬದಲಾವಣೆ ನೀವೇ ಆಗಬೇಕು." ಅದರ ಫಲವೆಂದರೆ ನಾವು ಆಶಾವಾದಿಗಳಾಗಿರಬೇಕೆಂಬ ಇಚ್ಛೆ ಕೇವಲ¼ ನಂಬಿಕೆಯಿಂದ ಉಂಟುಮಾಡಲಾಗದು, ಒಂದೆಂದರೆ ನಂಬಿಕೆ ವರ್ತನೆಯಲ್ಲಿ ಹೊಸತನ ತರುತ್ತದೆ. ಆದರೆ "ವರ್ತನೆ" ಪದ ಈ ಅರ್ಥದಲ್ಲಿ ಕೆಲವು ಸಾರಿ ಅಪಾರ್ಥ ಮಾಡಿಕೊಳ್ಳಲಾಗುತ್ತದೆ. ನಾನು ಲೈಟ್ ಬಲ್ಬುಗಳನ್ನು ಬದಲಾಯಿಸುವುದು ಮತ್ತು ಹೈಬ್ರಿಡ್ ಗಳನ್ನು ಮತ್ತು ಟಿಪ್ಪರ್ ಗಳನ್ನು ಕೊಳ್ಳುವುದರ ಸಮರ್ಥಕ ಹಾಗೂ ನಮ್ಮ ಮನೆಯ ಮೇಲೆ 33 ಸೋಲಾರ್ ಪ್ಯಾನೆಲ್ ಗಳನ್ನು ಇರಿಸಿದ್ದೇನೆ,♪ ಮತ್ತು ಜಿಯೋಥರ್ಮಲ್ ಬಾವಿಗಳನ್ನು ತೋಡಿದ್ದೇನೆ, ಮತ್ತು ಇತರ ಎಲ್ಲವನ್ನೂ ಮಾಡಿದ್ದೇನೆ. ಆದರೆ, ಬಲ್ಬುಗಳನ್ನು ಬದಲಾಯಿಸುವುದು ಎಷ್ಟು ಮುಖ್ಯವೋ, ಕಾನೂನುಗಳನ್ನು ಬದಲಾಯಿಸುವುದೂ ಅಷ್ಟೇ ಮುಖ್ಯ. ಮತ್ತು ನಾವು ನಮ್ಮ ನಿತ್ಯ ಜೀವನದಲ್ಲಿ ನಮ್ಮ ವರ್ತನೆಯನ್ನು ಬದಲಾಯಿಸಿಕೊಂಡಾಗ, ನಾವು ಕೆಲವು ಸಾರಿ ನಮ್ಮ ನಾಗರಿಕ ಭಾಗವನ್ನು ಮತ್ತು ಪ್ರಜಾಪ್ರಭುತ್ವ ಭಾಗವನ್ನು€ ಬಿಟ್ಟು ಬಿಡುತ್ತೇವೆ. ಈ ಬಗ್ಗೆ ಆಶಾವಾದ ಹೊಂದಬೇಕಾದರೆ, ನಾವು ನಮ್ಮ ಪ್ರಜಾಪ್ರಭುತ್ವದಲ್ಲಿ ಉತ್ಕೃಷ್ಟ ನಾಗರಿಕರಾಗಬೇಕು. ವಾತಾವರಣದ ಸಮಸ್ಯೆ ಪರಿಹರಿಸಬೇಕಾದರೆ, ನಾವು ಪ್ರಜಾಪ್ರಭುತ್ವದ ಸಮಸ್ಯೆಯನ್ನು ಪರಿಹರಿಸಬೇಕು. (ಚಪ್ಪಾಳೆ). ಹಾಗೂ ನಮ್ಮ ಬಳಿ ಒಂದಿ ಇದೆ.
ನಾನು ಈ ಕಥೆಯನ್ನು ಹೇಳಲು ಬಹಳ ದಿನದಿಂದ ಪ್ರಯತ್ನಿಸುತ್ತಿದ್ದೇನೆ. ಅದನ್ನು ಈಚೆಗೆ ಒಬ್ಬ ಮಹಿಳೆ ನನಗೆ ನೆನಪಿಸಿದಳು ಅವಳು ನನ್ನ ಟೇಬಲ್ ಮುಂದೆ ಹಾದುಹೋದಳು, ಹೋಗುತ್ತಾ ನನ್ನನ್ನು ದಿಟ್ಟಿಸಿ ನೋಡಿದಳು. ಅವಳು ತನ್ನ 70 ರ ವಯಸ್ಸಿನಲ್ಲಿದ್ದಳು, ಅವಳಿಗೆ ಕರುಣಾಮಯ ಮುಖವಿತ್ತು. ಅದರ ಬಗ್ಗೆ ನಾನು ಯೋಚಿಸಿರಲಿಲ್ಲ ನಾನು ಅವಳನ್ನು ನನ್ನ ಕಣ್ಣಿನ ಮೂಲೆಯಿಂದ ನೋಡುವವರೆಗೂ ಅವಳು ನನಗೆ ಎದುರು ದಿಕ್ಕಿನಿಂದ ನಡೆದು ಬರುತ್ತಿದ್ದಳು, ಹಾಗೂ ನನ್ನನ್ನು ದಿಟ್ಟಿಸಿ ನೋಡುತ್ತಿದ್ದಳು. ಹಾಗಾಗಿ ನಾನು ಹೇಳಿದೆ, "ಹೇಗಿದ್ದೀರ?" ಹಾಗೂ ಅವಳು ಹೇಳಿದಳು, "ನಿಮಗೆ ಗೊತ್ತೆ, ನೀವು ನಿಮ್ಮ ಕೂದಲಿಗೆ ಕಪ್ಪು ಬಣ್ಣ ಹಚ್ಚಿದರೆ, ನೀವು ನಿಜವಾಗಿಯೂ ಅಲ್ ಗೋರೆ ತರಹ ಕಾಣುತ್ತೀರ."
ಬಹಳ ವರ್ಷಗಳ ಹಿಂದೆ, ನಾನು ಒಬ್ಬ ಯುವಕ ಕಾಂಗ್ರೆಸ್ಸಿಗನಾಗಿದ್ದಾಗೆ, ನಾನು ಬಹಳ ಕ್ಲಿಷ್ಟ ಸಮಯವನ್ನು ಕಳೆದೆ ಅಣುಶಸ್ತ್ರ ನಿಯಂತ್ರಣದ ಸವಾಲು ಎದುರಿಸಲು -- ಅಣು ಶಸ್ತ್ರಾಸ್ತ್ರ ಸ್ಫರ್ಧೆ. ಮತ್ತು ಮಿಲಿಟರಿ ಚರಿತ್ರಕಾರರು ನನಗೆ ಬೋಧಿಸಿದರು ಆ ಶೋಧನೆ ಸಮಯದಲ್ಲಿ ಮಿಲಿಟರಿ ಘರ್ಷಣೆಗಳು ಒಂದು ನಮೂನೆಯಲ್ಲಿ ಮೂರು ವರ್ಗಗಳಾಗಿ ಮಾಡಲಾಗುತ್ತದೆ: ಸ್ಥಳೀಯ ಯುದ್ಧಗಳು, ಪ್ರಾಂತೀಯ ಅಥವಾ ಠಿಯೇಟರ್ ಯುದ್ಧಗಳು, ಮತ್ತು ಅಪರೂಪವಾದ ಆದರೆ ಎಲ್ಲದರಲ್ಲೂ ಬಹಳ ಮುಖ್ಯವಾದ ಜಾಗತಿಕ, ಮಹಾ ಯುದ್ಧ. ಕಾರ್ಯತಂತ್ರ ಘರ್ಷಣೆಗಳು. ಹಾಗೂ ಪ್ರತಿ ಮಟ್ಟದ ಘರ್ಷಣೆಗೂ ಬೇರೆ ಬೇರೆ ಸಂಪನ್ಮೂಲ ಹಂಚಬೇಕಾಗುತ್ತದೆ ಒಂದು ಬೇರೆಯೇ ಆದ ದೃಷ್ಟಿಕೋನ, ಬೇರೆ ಸಂಸ್ಥಾತ್ಮಕ ನಮೂನೆ. ಪರಿಸರ ಸವಾಲುಗಳು ಇದೇ ಮೂರು ವರ್ಗಗಳಿಗೆ ಸೇರುತ್ತವೆ, ಹಾಗೂ ನಾವು ಯೋಚಿಸುವ ಬಹಳಷ್ಟು ವಿಷಯಗಳು ಸ್ಥಳೀಯ ಪರಿಸರ ಸಮಸ್ಯೆಗಳು: ವಾಯು ಮಾಲಿನ್ಯ, ಜಲ ಮಾಲಿನ್ಯ, ಅಪಾಯಕರ ತ್ಯಾಜ್ಯವನ್ನು ಸುರಿಯುವುದು. ಹಾಗೆಯೇ ಪ್ರಾಂತೀಯ ಸಮಸ್ಯೆಗಳೂ ಇವೆ, ಆಮ್ಲ ಮಳೆ ಮಧ್ಯಪಶ್ಚಿಮದಿಂದ ಉತ್ತರಪೂರ್ವಕ್ಕೆ, ಮತ್ತು ಪಶ್ಚಿಮ ಯೂರೋಪ್ ನಿಂದ ಅರ್ಕಿಟಿಕ್ ನ ವರೆಗೆ, ಹಾಗೂ ಮಧ್ಯಪಶ್ಚಿಮದಿಂದ ಮಿಸ್ಸಿಸ್ಸಿಪ್ಪಿಯ ಆಚೆ ಮೆಕ್ಸಿಕೋ ಕೊಲ್ಲಿಯಿ ಡೆಡ್ ಜೋನ್ ವರೆಗೆ. ಹಾಗೂ ಅಂತಹವು ಬಹಳಷ್ಟಿವೆ. ಆದರೆ ವಾತಾವರಣ ಬಿಕ್ಕಟ್ಟು ಅಪರೂಪ ಆದರೆ ಅತಿ ಮುಖ್ಯ ಜಾಗತಿಕ ಅಥವಾ ಕಾರ್ಯತಾಂತ್ರಿಕ, ಘರ್ಷಣೆ. ಎಲ್ಲದರ ಮೇಲೂ ಪರಿಣಾಮವಾಗುತ್ತದೆ. ಹಾಗೂ ನಾವು ನಮ್ಮ ಪ್ರತಿಕ್ರಿಯೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ನಮಗೆ ವಿಶ್ವವ್ಯಾಪಿ, ಜಾಗತಿಕವಾಗಿ ಸಜ್ಜುಗೊಳಿಸಬೇಕು ನವೀಕರಿಸಬಹುದಾದ ಶಕ್ತಿ, ರಕ್ಷಣೆ, ಸಾಮರ್ಥ್ಯ ಮತ್ತು ಕಡಿಮೆ-ಕಾರ್ಬನ್ ಆರ್ಥಿಕ ಸ್ಥಿತಿಗೆ ಜಾಗತಿಕ ಬದಲಾವಣೆ. ನಮಗೆ ಮಾಡುವುದಕ್ಕೆ ಕೆಲಸವಿದೆ. ಹಾಗೂ ನಾವು ಸಂಪನ್ಮೂಲಗಳನ್ನು ಹೊಂದಿಸಬಹುದು ಮತ್ತು ರಾಜಕೀಯ ಮನಃಸತ್ವ. ಆದರೆ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ರಾಜಕೀಯ ಮನಃಸತ್ವವನ್ನು ಸಜ್ಜುಗೊಳಿಸಬೇಕು.
ಇಲ್ಲಿ ನಿಮಗೆ ನಾನು ಸ್ಲೈಡುಗಳನ್ನು ತೋರಿಸುತ್ತೇನೆ. ನಾನು ಲೋಗೋ ಇಂದ ಪ್ರಾರಂಭಿಸಬೇಕೆಂದಿದ್ದೆ. ಇಲ್ಲಿ ಏನು ಕಾಣುತ್ತಿಲ್ಲ, ಅದು, ನಾರ್ತ್ ಪೋಲಾರ್ ಐಸ್ ಕ್ಯಾಪ್. ಗ್ರೀನ್ ಲ್ಯಾಂಡ್ ಹಾಗೇ ಇದೆ. 28 ವರ್ಷಗಳ ಹಿಂದೆ ಹೀಗಿತ್ತು ಪೋಲಾರ್ ಐಸ್ ಕ್ಯಾಪ್ -- ನಾರ್ತ್ ಪೋಲಾರ್ ಐಸ್ ಕ್ಯಾಪ್.-- ಬೇಸಿಗೆ ಕೊನೆ ಈಕ್ವಿನಾಕ್ಸ್ ನಂತರ. ಕಳೆದ ಸಾರಿ ನಾನು ಕೊಲರಾಡೊ ದ ಬೌಲ್ಡರ್ ನಲ್ಲಿರುವ ಸ್ನೋ ಮತ್ತು ಐಸ್ ಡಾಟಾ ಸೆಂಟರ್ ಗೆ ಹೋಗಿದ್ದೆ ಹಾಗೂ ಅಲ್ಲಿನ ಸಂಶೋಧಕರೊಂದಿಗೆ ಮಾತಾಡಿದೆ ಇಲ್ಲಿ ಮೋಟೆರೇ ನಲ್ಲಿರುವ ನೇವಲ್ ಪೋಸ್ಟ್ ಗ್ರಾಜುಯೇಟ್ ಲ್ಯಾಬೊರೇಟರಿಯಲ್ಲಿ. ಕಳೆದ 28 ವರ್ಷಗಳಲ್ಲಿ ಆಗಿದ್ದು ಇದು. ಕಣ್ಣಿಗೆ ಕಂಡಂತೆ ಹಿಂದಿನ ದಾಖಲೆ 2005. ಕಳೆದ ಸಾರಿ ಏನಾಯಿತೆಂದರೆ ಅದು ನಿಜವಾಗಿಯೂ ಸಂಶೋಧಕರ ಧೃತಿಗೆಡಿಸಿತು. ನಾರ್ತ್ ಪೋಲಾರ್ ಐಸ್ ಕ್ಯಾಪ್ ಭೌಗೋಳಿಕವಾಗಿ ಒಂದೇ ಗಾತ್ರವಿದೆ. ಅದೇ ಗಾತ್ರವಿರುವಂತೆ ಕಾಣುವುದಿಲ್ಲ, ಆದರೆ ಅದು ಕರಾರುವಕ್ಕಾಗಿ ಅರಿಝೋನಾ ರಾಜ್ಯದ ವಿಸ್ತೀರ್ಣ ಕಳೆದು,¥¥¥ ಸುಮಾರು ಯುನೈಟೆಡ್ ಸ್ಟೇಟ್ಸ್ ನ ಗಾತ್ರವಿದೆ. 2005 ರಲ್ಲಿ ಕಾಣೆಯಾದ ಪ್ರಮಾಣ ಮಿಸ್ಸಿಸ್ಸಿಪ್ಪಿಯ ಪೂರ್ವಕ್ಕಿರುವ ಎಲ್ಲ ವಿಸ್ತೀರ್ಣಕ್ಕೆ ಸಮ. ಕಳೆದ ಸಾರಿ ಕಾಣೆಯಾದ ಹೆಚ್ಚುವರಿ ಪ್ರಮಾಣ ಇಷ್ಟಕ್ಕೆ ಸಮನಾಗಿತ್ತು. ಅದು ಮತ್ತೆ ಚಳಿಗಾಲದಲ್ಲಿ ಹಿಂದಕ್ಕೆ ಬರುತ್ತದೆ, ಆದರೆ ಶಾಶ್ವತ ಮಂಜುಗಡ್ಡೆ ರೂಪದಲ್ಲಿ ಅಲ್ಲ: ತೆಳುವಾದ ಮಂಜುಗಡ್ಡೆ ರೂಪದಲ್ಲಿ. ಕಾಣೆಯಾಗುವುದಕ್ಕೆ ಅವಕಾಶವಿದೆ. ಉಳಿದದ್ದು ಸಂಪೂರ್ಣವಾಗಿ ಹೋಗಿಬಿಡಬಹುದು ಬೇಸಿಗೆಯಲ್ಲಿ, ಅತಿ ಕಡಿಮೆ ಐದು ವರ್ಷಗಳ ಕಾಲದಲ್ಲಿ. ಇದು ಗ್ರೀನ್ ಲ್ಯಾಂಡ್ ಮೇಲೆ ಸಾಕಷ್ಟು ಒತ್ತಡ ತರುತ್ತದೆ. ಈಗಾಗಲೇ ಅರ್ಕಿಟಿಕ್ ವೃತ್ತದ ಸುತ್ತ -- ಇದು ಅಲಾಸ್ಕಾದಲ್ಲಿರುವ ಪ್ರಸಿದ್ಧ ಗ್ರಾಮ. ಇದು ಒಂದು ಪಟ್ಟಣ ಹೊಸದಾಗಿ ಕಡುಹಿಡಿದ ಭೂಪ್ರದೇಶದಲ್ಲಿ. ಅಂಟಾರ್ಕಿಟಿಕಾ. NASA ದ ಇತ್ತೀಚಿನ ಅಧ್ಯಯನ. ಸಾಮಾನ್ಯದಿಂದ ಅತಿ ತೀವ್ರ ಮಂಜು ಕರಗುವಿಕೆ ಪ್ರಮಾಣ ಕ್ಯಾಲಿಫೋರ್ನಿಯಾ ವಿಸ್ತೀರ್ಣಕ್ಕೆ ಸಮವಾಗಿದೆ.
"ಅವು ಬಹಳ ಒಳ್ಳೆಯ ದಿನಗಳು, ಅವುಗಳು ಬಹಳ ಕಷ್ಟದ ದಿನಗಳು." ಇದು ಇಂಗ್ಲೀಷ್ ಸಾಹಿತ್ಯದಲ್ಲಿ ಬಹಳ ಪ್ರಸಿದ್ಧ ವಾಕ್ಯ. ನಾನು ಸಂಕ್ಷಿಪ್ತವಾಗಿ ಹಂಚಿಕೊಳ್ಳಬೇಕೆಂದಿದ್ದೇನೆ "ಎರಡು ಗ್ರಹಗಳ ಗಾಥೆ." ಭೂಮಿ ಮತ್ತು ಶುಕ್ರ ಎರಡು ಒಂದೇ ಸಮನಾದ ಗಾತ್ರ ಹೊಂದಿವೆ. ಭೂಮಿಯ ವ್ಯಾಸ ಸುಮಾರು 400 ಕಿಲೋಮೀಟರ್ ಗಳಷ್ಟು ದೊಡ್ಡದು, ಆದರೆ ಎರಡೂ ಒಂದೇ ಗಾತ್ರ ಹೊಂದಿವೆ. ಅವರೆಡೂ ಸರಿಯಾಗಿ ಒಂದೇ ಪ್ರಮಾಣದ ಕಾರ್ಬನ್ ಹೊಂದಿವೆ. ವ್ಯತ್ಯಾಸವೆಂದರೆ, ಭೂಮಿಯ ಮೇಲೆ, ಬಹಳಷ್ಟು ಕಾರ್ಬನ್ ಕಾಲಾನುಕ್ರಮದಲ್ಲಿ ವಾತಾವರಣದಿಂದ ಹೀರಿಕೆಯಾಗಿ, ನೆಲದಲ್ಲಿ ಕಲ್ಲಿದ್ದಿಲು, ತೈಲ, ನೈಸರ್ಗಿಕ ಅನಿಲ ಮುಂತಾದ ರೂಪದಲ್ಲಿ ಶೇಖರಣೆಯಾಗಿದೆ. ಶುಕ್ರಗ್ರಹದಲ್ಲಿ, ಅದರಲ್ಲಿ ಬಹಳಷ್ಟು ವಾತಾವರಣದಲ್ಲಿದೆ. ವ್ಯತ್ಯಾಸವೆಂದರೆ ನಮ್ಮ ವಾತಾವರಣ ಸರಾಸರಿ 59 ಡಿಗ್ರಿಗಳು. ವೀನಸ್ ನೇಲೆ, ಅದು 855. ಇದು ನಮ್ಮ ಪ್ರಸಕ್ತ ಕಾರ್ಯತಂತ್ರ ಆದಷ್ಟು ಕಾರ್ಬನ್ ನ್ನು ಆದಷ್ಟು ಶೀಘ್ರವಾಗಿ ನೆಲದಿಂದ ಹೊರಕ್ಕೆ ತೆಗೆಯುವುದು ಹಾಗೂ ಅದನ್ನು ವಾತಾವರಣಕ್ಕೆ ಬಿಡುವುದು ಸೂಕ್ತವಾಗಿದೆ. ಅದು ಶುಕ್ರಗ್ರಹ ಸೂರ್ಯನಿಗೆ ಸ್ವಲ್ಪ ಹತ್ತಿರ ಎಂಬ ಕಾರಣದಿಂದಲ್ಲ. ಅದು ಸೂರ್ಯ ಗ್ರಹದ ಪಕ್ಕದಲ್ಲೇ ಇರುವ ಬುಧಗ್ರಹಕ್ಕಿಂತ ಮೂರು ಪಟ್ಟು ಬಿಸಿಯಾಗಿದೆ. ಈಗ, ಸಂಕ್ಷಿಪ್ತವಾಗಿ, ಈ ಚಿತ್ರ ನೀವು ನೋಡಿರುವ ಅತಿ ಹಳೆಯ ಚಿತ್ರಗಳಲ್ಲಿ ಒಂದು, ನಾನು ಇದನ್ನು ನಿಮಗೆ ಸಂಕ್ಷಿಪ್ತವಾಗಿ ಕೊಡಲು ತೋರಿಸುತ್ತಿದ್ದೇನೆ CSI: ವಾತಾವರಣ.
ವಿಶ್ವ ವೈಜ್ಞಾನಿಕ ಸಮುದಾಯ ಹೇಳುತ್ತದೆ, ಮಾನವ-ನಿರ್ಮಿತ ಜಾಗತಿಕ ತಾಪಮಾನ ಏರುವಿಕೆ ಮಾಲಿನ್ಯ, ವಾತಾವರಣದೊಳಕ್ಕೆ ಬಿಡುಗಡೆ ಮಾಡಿ,£ ಇದನ್ನು ಮಂದ ಮಾಡಿರುವ ಕಾರಣ ಹೊರಹೋಗುವ ಬಹಳಷ್ಟು ಇನ್ ಫ್ರಾ ರೆಡ್ ಇಲ್ಲಿಯೇ ಸಿಕ್ಕಿಕೊಂಡಿದೆ. ಅದೆಲ್ಲ ನಿಮಗೆ ತಿಳಿದಿದೆ. ಕಳೆದ ಸಾರಾಂಶದಲ್ಲಿ, ವಿಜ್ಞಾನಿಗಳು ಏನು ಹೇಳಬೇಕೆಂದಿದ್ದರೆಂದರೆ, "ನಿಮಗೆಷ್ಟು ಖಾತ್ರಿಯಿದೆ?" ಅವರು ಅದನ್ನು "ಶೇಕಡ 99" ಉತ್ತರಿಸಬೇಕೆಂದಿದ್ದರು ಚೀನಿಯರು ಆಕ್ಷೇಪಿಸಿದರು, ಹಾಗಾಗಿ ಸಂಧಾನ ಮಾಡಿದ್ದೇನೆಂದರೆ♪ "ಶೇಕಡ 90 ಕ್ಕಿಂತ ಹೆಚ್ಚು." ಈಗ, ಸಂದೇಹವಾದಿಗಳು ಹೇಳುತ್ತಾರೆ, "ಓಹ್, ಒಂದು ನಿಮಿಷ, ಇದು, ಇದರಲ್ಲಿ ವ್ಯತ್ಯಾಸ ಇರಬಹುದು -- ಈ ಶಕ್ತಿಯಲ್ಲಿ ಸೂರ್ಯನಿಂದ ಒಳ ಬರುತ್ತಿರುವುದು." ಅದು ನಿಜವಾಗಿದ್ದರೆ, ವಾಯುಮಂಡಲ ಮೂಡ ಬಿಸಿಯಾಗುತ್ತದೆ ಜೊತೆಗೆ ಕೆಳಸ್ತರದ ವಾತಾವರಣ ಕೂಡ, ಅದು ಇನ್ನೂ ಹೆಚ್ಚು ಒಳಕ್ಕೆ ಬರುತ್ತಿದ್ದರೆ. ಹೊರಕ್ಕೆ ಹೋಗಲಾಗದೆ ಅದು ಹೆಚ್ಚು ಹೆಚ್ಚು ಸಿಕ್ಕಿಕೊಳ್ಳುತ್ತಿದ್ದರೆ, ಆಗ ನೀವು ಇಲ್ಲಿ ಬಿಸಿ, ಇಲ್ಲಿ ತಂಪಾಗಿರುವುದನ್ನು ನಿರೀಕ್ಷಿಸಬಹುದು. ಇಲ್ಲೆ ಕೆಳಸ್ತರದ ವಾತಾವರಣ ಇದೆ. ಇಲ್ಲಿ ವಾಯುಮಂಡಲ ಇದೆ. ತಂಪಾಗಿದೆ. CSI: ವಾತಾವರಣ
ಈಗ, ಇಲ್ಲೊಂದು ಒಳ್ಳೆ ಸುದ್ದಿ. 68% ಅಮೆರಿಕನ್ನರು ಜಾಗತಿಕ ತಾಪಮಾನ ಏರಿಕೆಗೆ ಮಾನವನ ಚಟುವಟಿಕೆ ಕಾರಣವೆಂದು ನಂಬುತ್ತಾರೆ. ಶೇಕಡ 69 ರಷ್ಟು ಜನರು ಭೂಮಿ ಮಹತ್ತರವಾಗಿ ಬಿಸಿಯಾಗುತ್ತಿದೆ ಎಂದು ನಂಬುತ್ತಾರೆ. ಅಭಿವೃದ್ಧಿ ಇದೆ ಆದರೆ ಕಾರಣ ಇಲ್ಲಿದೆ: ಎದುರಿಸಬೇಕಾದ ಸವಾಲುಗಳ ಪಟ್ಟಿಯಲ್ಲಿ ಜಾಗತಿಕ ತಾಪಮಾನ ಇನ್ನೂ ತಳದಲ್ಲಿಯೇ ಇದೆ. ಇಲ್ಲಿ ಕಾಣೆಯಾಗಿರುವುದು ಏನೆಂದರೆ ಆತುರತೆ. ನೀವು ವಾಸ್ತವಿಕತೆ ವಿಶ್ಲೇಷಣೆ ಒಪ್ಪಿಕೊಂಡು, ಅದು ಎಷ್ಟು ಬೇಗ ಆಗಬೇಕು ಎಂದು ಅರ್ಥಮಾಡಿಕೊಳ್ಳದಿದ್ದರೆ ಅದು ನಿಮ್ಮನ್ನು ಎಲ್ಲಿಗೆ ಬಿಡುತ್ತದೆ? ಸರಿ, ಅಲಯೆನ್ಸ್ ಫಾರ್ ಕ್ಲೈಮೇಟ್ ಪ್ರೊಟೆಕ್ಷನ್ ಗೆ, ನಾನು ಕರೆಂಟ್ ಟಿ.ವಿ. ಜೊತೆ ಮುಖ್ಯಸ್ಥನಾಗಿದ್ದೆ -- ಇದನ್ನು ತಯಾರಿಸಿದವರು, ಇದನ್ನು ವಿಶ್ವಾದ್ಯಂತ ಹೇಗೆ ಪ್ರಚುರಪಡಿಸುವುದು ಎಂಬುದರ ಬಗ್ಗೆ ವಾಣಿಜ್ಯ ಜಾಹಿರಾತುಗಳನ್ನು ಮಾಡಿದ್ದರು. ಇದು ಗೆದ್ದಿದೆ.
NBC-- ನಾನು ಇಲ್ಲಿ ಎಲ್ಲ ನೆಟ್ವರ್ಕ್ ಗಳನ್ನೂ ತೋರಿಸುತ್ತೇನೆ -- ಹೆಸರಾಂತ ಪತ್ರಿಕಾ ಪ್ರತಿನಿಧಿಗಳು NBC ಗಾಗಿ 2007 ರಲ್ಲಿ ಅಧ್ಯಕ್ಷ ಸ್ಥಾನದ ಉಮೇದುವಾರರ ಬಗ್ಗೆ 956 ಪ್ರಶ್ನೆಗಳನ್ನು ಕೇಳಿದರು: ಅವುಗಳಲ್ಲಿ ಎರಡು ವಾತಾವರಣ ಬಿಕ್ಕಟ್ಟಿನ ಬಗ್ಗೆ ಇದ್ದವು. ABC:844 ಪ್ರಶ್ನೆಗಳು, ಎರಡು ವಾತಾವರಣ ಬಿಕ್ಕಟ್ಟಿನ ಬಗ್ಗೆ ಇದ್ದವು. Fox: ಎರಡು. CNN: ಎರಡು. CBS: ಸೊನ್ನೆ. ನಗುವಿನಿಂದ ಕಣ್ಣೀರಿಗೆ. ಇದು ಒಂದು ಹಳೆಯ ಹೊಗೆಸೊಪ್ಪು ಜಾಹಿರಾತು. ನಾವು ಮಾಡುತ್ತಿರುವುದು ಇಲ್ಲಿದೆ ನೋಡಿ. ಇದು ಈ ಎಲ್ಲಾ ದೇಶಗಳಲ್ಲಿ ಉಪಯೋಗಿಸುವ ಗ್ಯಾಸೊಲಿನ್. ಮತ್ತು ನಾವು. ಆದರೆ ಇದು ಕೇವಲ ಅಭಿವೃದ್ಧಿ ಹೊಂದಿದ ದೇಶಗಳು ಮಾತ್ರ. ಅಭಿವೃದ್ಧಿಶೀಲ ರಾಷ್ಟ್ರಗಳು ನಮ್ಮನ್ನು ಅನುಸರಿಸುತ್ತಿವೆ ಮತ್ತು ತಮ್ಮ ವೇಗವನ್ನು ಹೆಚ್ಚಿಸಿಕೊಳ್ಳುತ್ತಿವೆ. ಹಾಗೂ ವಾಸ್ತವದಲ್ಲಿ, ಅವೆಲ್ಲದರ ಒಟ್ಟು ಹೊಗೆ ವಿಸರ್ಜನೆ ಈ ವರ್ಷ ನಾವು ಇದ್ದ 1965 ಕ್ಕೆ ಸಮವಾಗಿದೆ. ಹಾಗೂ ಅವರು ಹತ್ತಿರ ಬರುತ್ತಿದ್ದಾರೆ ಅದೂ ಬಹಳ ನಾಟಕೀಯವಾಗಿ. ಒಟ್ಟು ಕೇಮ್ದ್ರೀಕರಣಗಳು: 2025 ರ ಹೊತ್ತಿಗೆ, ಅವರು ಅಗತ್ಯವಾಗಿ ನಾವು 1985 ರಲ್ಲಿ ಎಲ್ಲಿದ್ದೆವೋ ಅಲ್ಲಿರುತ್ತಾರೆ ಶ್ರೀಮಂತ ರಾಷ್ಟ್ರಗಳು ಪೂರ್ತಿಯಾಗಿ ಚಿತ್ರದಲ್ಲಿ ಕಾಣದಿದ್ದರೂ ಕೂಡ ನಾವು ಈ ಸಂಕಷ್ಟವನ್ನು ಹೊಂದಿರುತ್ತೇವೆ. ಆದರೆ ನಾವು ಪ್ರಗತಿಶೀಲ ರಾಷ್ಟ್ರಗಳಿಗೆ ತಂತ್ರಜ್ಞಾನಗಳು ಮತ್ತು ಆಲೋಚನಾ ವಿಧಾನವನ್ನು ಕೊಟ್ಟಿದ್ದೇವೆ ಸಂಕಷ್ಟವನ್ನು ಸೃಷ್ಟಿಮಾಡುತ್ತಿರುವ ಕಾರಣಗಳ ಬಗ್ಗೆ. ಇದು ಬೊಲೀವಿಯಾನಲ್ಲಿದೆ. ಮೂವತ್ತು -- ಮೂವತ್ತು ವರ್ಷಗಳಾಯಿತು.
ಇದು ಮೀನುಗಾರಿಕೆಯ ಅಧಿಕ ಪ್ರಮಾಣ ಕೆಲವು ಸೆಕೆಂಡುಗಳಲ್ಲಿ. 60 ರಲ್ಲಿ 70 ರಲ್ಲಿ. 80 ರಲ್ಲಿ. 90 ರಲ್ಲಿ.ನಾವು ಇದನ್ನು ನಿಲ್ಲಿಸಬೇಕು.ಸಂತಸದ ಸುದ್ದಿಯೆಂದರೆ ನಮಗೆ ಇದು ಸಾಧ್ಯ. ನಮ್ಮಲ್ಲಿ ತಂತ್ರಜ್ಞಾನಗಳಿವೆ. ಇದನ್ನು ಹೇಗೆ ಸಾಧಿಸಬಹುದು ಎಂಬುದರ ಬಗ್ಗೆ ನಾವು ಏಕರೂಪದ ದೃಷ್ಟಿಕೋನ ಹೊಂದಿರಬೇಕು: ವಿಶ್ವದ ಬಡತನದ ವಿರುದ್ಧ ಹೋರಾಟ ಮತ್ತು ಶ್ರೀಮಂತ ರಾಷ್ಟ್ರಗಳ ಹೊಗೆ ಹೊರಚೆಲ್ಲುವಿಕೆಯನ್ನು ಕಡಿಮೆಮಾಡುವುದು, ಇವೆಲ್ಲಕ್ಕೂ ಒಂದೇ ಒಂದು ಸರಳ ಪರಿಹಾರವಿದೆ.
ಜನ ಕೇಳುತ್ತಾರೆ, "ಏನು ಈ ಪರಿಹಾರ?" ಅದು ಇಲ್ಲಿದೆ. ಕಾರ್ಬನ್ ಮೇಲೆ ಒಂದು ದರ ಹಾಕಿ. ಒಂದು CO2 ತೆರಿಗೆ ನಮಗೆ ಅಗತ್ಯವಿದೆ, ರೆವೆನ್ಯೂ-ನ್ಯೂಟ್ರಲ್ ಉದ್ಯೋಗ ತೆರಿಗೆ ತೆಗೆದುಹಾಕಲು, ಇದನ್ನು ಬಿಸ್ಮಾರ್ಕ್ ಕಂಡುಹಿಡಿದನು -- ಹಾಗೂ ಕೆಲವೆಲ್ಲಾ ಬದಲಾಗಿವೆ 19 ನೇ ಶತಮಾನದಿಂದೀಚೆಗೆ. ಬಡ ವಿಶ್ವದಲ್ಲಿ, ನಾವು ಸಮಾಧಾನಗಳನ್ನು ಬಡತನಕ್ಕೆ ವಾತಾವರಣ ಸಮಸ್ಯೆಗಳ ಪರಿಹಾರದೊಂದಿಗೆ ಏಕೀಕರಿಸಬೇಕು. ಉಗಾಂಡಲ್ಲಿ ವಾತಾವರಣ ಸಮಸ್ಯೆ ಪರಿಹಸದಿದ್ದರೆ ಬಡತನದ ವಿರುದ್ಧ ಹೋರಾಡಲು ಯೋಜನೆಗಳನ್ನು ಸೂಚಿಸಲಾಯಿತು.
ಆದರೆ ಸಮಾಧಾನಗಳು ವಾಸ್ತವವಾಗಿ ದೊಡ್ಡ ವ್ಯತ್ಯಾಸ ತರಬಹುದು ಬಡ ರಾಷ್ಟ್ರಗಳಲ್ಲಿ. ಇದೊಂದು ಅನುಮೋದನೆ ಇದು ಯೂರೂಪ್ ನಲ್ಲಿ ಸಾಕಷ್ಟು ಪ್ರಸ್ತಾಪವಾಗಿದೆ. ಇದು ನೇಚರ್ ಪತ್ರಿಕೆಯಲ್ಲಿದ್ದದ್ದು. ಇವು ಕೇಂದ್ರೀಕೃತವಾಗುತ್ತಿರುವ ಸೋಲಾರ್ ರಿನ್ಯುವಬಲ್-ಎನರ್ಜಿ ಸ್ಥಾವರಗಳು, ಸೂಪರ್ ಗ್ರಿಡ್ ಎಂಬುದಕ್ಕೆ ಸಂಪರ್ಕಿಸಲಾಗಿದೆ ಎಲ್ಲ ವಿದ್ಯುಚ್ಚಕ್ತಿಯನ್ನು ಯೂರೋಪ್ ಗೆ ಸರಬರಾಜು ಮಾಡಲು, ಪ್ರಮುಖವಾಗಿ ಪ್ರಗತಿಶೀಲ ರಾಷ್ಟ್ರಗಳಿಂದ. ಹೈ ವೋಲ್ಟೇಜ್ DC ಕರೆಂಟ್ ಗಳು. ಇದು "ಅಕಾಶದಲ್ಲಿರುವ ಚೂರಲ್ಲ," ಇದನ್ನು ಮಾಡಬಹುದು.
ನಾವು ನಮ್ಮ ಆರ್ಥಿಕ ವ್ಯವಸ್ಥೆಗೆ ಮಾಡಬೇಕಿದೆ. ಇತ್ತೀಚಿನ ಅಂಕಿಅಂಶಗಳು ಹಳೆಯ ನಮೂನೆ ಕೆಲಸಮಾಡುತ್ತಿಲ್ಲ ಎಂದು ತೋರಿಸುತ್ತಿವೆ. ನೀವು ಮಾಡಬಹುದಾದ ಬೃಹತ್ ಹೂಡಿಕೆಗಳು ನೀವು ಮಾಡಬಹುದಾಗಿದೆ. ನೀವು ಡಾಮರು ಮರಳು ಅಥವಾ ಜೇಡಿಮಣ್ಣಿರುವ ತೈಲದಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಹೂಡಿಕೆ ಸಬ್-ಪ್ರೈಮ್ ಕಾರ್ಬನ್ ಆಸ್ತಿಗಳಿಂದ ತುಂಬಿಹೋಗಿದೆ. ಹಾಗೂ ಅದು ಒಂದು ಹಳೆ ನಮೂನೆ ಆಧಾರದ ಮೇಲಿದೆ. ಜಂಕೀಗಳು ತಮ್ಮ ಕಾಲು ಬೆರಳುಗಳಲ್ಲಿ ರಕ್ತನಾಳಗಳನ್ನು ಕಾಣುತ್ತವೆ ಅವುಗಳ ಕಂಕುಳು ಮತ್ತು ಕಾಲುಗಳ ನಾಳಗಳು ಮುರುದುಬಿದ್ದಾಗೆ. ಡಾಮರು ಮರಳು¼ ಮತ್ತು ಜೇಡಿ ಕಲ್ಲಿದ್ದಲನ್ನು ಅಭಿವೃದ್ಧಿಪಡಿಸುವುದು ಒಂದೆ. ಇಲ್ಲಿ ಕೆಲವು ಹೂಡಿಕೆಗಳಿವೆ ಇವು ವಿವೇಚನಾತ್ಮಕವಾದುವು ಎಂದು ನನಗೆ ಅನ್ನಿಸುತ್ತದೆ. ಇದರಲ್ಲಿ ನನ್ನ ಹೂಡಿಕೆಯೂ ಇದೆ, ಹಾಗಾಗಿ ನನ್ನ ನಿರಾಕರಣೆಯೂ ಇದೆ. ಆದರೆ ಜಿಯೋಥರ್ಮಲ್, ಕೇಂದ್ರೀಕೃತವಾಗುತ್ತಿರುವ ಸೋಲಾರ್, ಅಭಿವೃದ್ಧಿಪಡಿಸಿದ ಫೋಟೊವೋಲ್ಟಾಯಿಕ್ಸ್, ಸಮರ್ಥತೆ ಮತ್ತು ಸಂರಕ್ಷಣೆ.
ನೀವು ಈ ಸ್ಲೈಡ್ ನ್ನು ಈ ಹಿಂದೆ ನೋಡಿದ್ದೀರ, ಆದರೆ ಇಲ್ಲೆ ಬದಲಾವಣೆಯಿದೆ. ಇದನ್ನು ಅನುಮೋದಿಸದ ಎರಡು ರಾಷ್ಟ್ರಗಳೆಂದರೆ -- ಮತ್ತು ಈಗ ಒಂದೇ ಒಂದಿದೆ. ಆಸ್ಟ್ರೇಲಿಯಾದಲ್ಲಿ ಮತದಾನವಿತ್ತು. ಮತ್ತು ಆಸ್ಟ್ರೇಲಿಯಾದಲ್ಲಿ ಒಂದು ಆಂದೋಳನ ಇತ್ತು ಅದರಲ್ಲಿ ಟೆಲಿವಿಶನ್ ಮತ್ತು ಇಂಟರ್ ನೆಟ್ ಮತ್ತು ರೇಡಿಯೋ ವಾಣಿಜ್ಯ ಜಾಹಿರಾತುಗಳು ಇಲ್ಲಿನ ಜನರಲ್ಲಿ ತುರ್ತು ಅಗತ್ಯದ ಬಗ್ಗೆ ಅರಿವು ಮೂಡಿಸಲು. ಹಾಗೂ ನಾವು 250 ಜನರಿಗೆ ಸ್ಲೈಡ್ ಶೋ ನಡೆಸಿಕೊಡಲು ತರಬೇತಿ ನೀಡಿದೆವು ಪ್ರತಿ ಪಟ್ಟಣ ಮತ್ತು ಹಳ್ಳಿ ಮತ್ತು ಆಸ್ಟ್ರೇಲಿಯಾ ನಗರದಲ್ಲಿ. ಬೇಕಾದಷ್ಟು ಇತರ ವಿಷಯಗಳು ಅದಕ್ಕೆ ಕೊಡುಗೆ ನೀಡಿವೆ, ಆದರೆ ಹೊಸ ಪ್ರಧಾನ ಮಂತ್ರಿ ಪ್ರಕಟಿಸಿದರು ಏನೆಂದರೆ ಅವರ ಮೊದಲ ಆದ್ಯತೆ ಆಸ್ಟ್ರೇಲಿಯಾದ ಸ್ಥಾನವನ್ನು ಬದಲಾಯಿಸುವುದು ಕ್ಯೋಟೊ ಬಗ್ಗೆ ಹಾಗೂ ಅವರು ಅದನ್ನು ಮಾಡಿದ್ದಾರೆ. ಈಗ, ಅವರು ಒಂದು ಅರಿವಿಗೆ ಬಂದರು ಭಾಗಶಃ ಅವರು ಅನುಭವಿಸಿದ ತೀವ್ರ ಬರಗಾಲದ ಕಾರಣದಿಂದ. ಇದು ಲೇಕ್ ಲೇನಿಯರ್. ನನ್ನ ಸ್ನೇಹಿತ ಹೈಡಿ ಕುಲ್ಲಿನ್ಸ್ ಹೇಳಿದ ನಾವು ಚಂಡಮಾರುತಕ್ಕೆ ಹೆಸರುಗಳನ್ನು ಕೊಟ್ಟಂತೆ ಬರಗಾಲಗಳಿಗೂ ಕೊಟ್ಟರೆ, ಆಗ ನಾವು ದಕ್ಷಿಣಪೂರ್ವದ ಒಂದನ್ನು, ಈಗ ಕಟ್ರೀನ, ಹಾಗೂ ಅದು ಅಟ್ಲಾಂಟಾ ಕಡೆ ಹೋಗುತ್ತಿದೆ ಎಂದು ನಾವು ಹೇಳಬಹುದು. ನಾವು ಆಸ್ಟ್ರೇಲಿಯಾ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದಂಥ ಬರಗಾಲಕ್ಕಾಗಿ ಕಾಯಲಾಗುವುದಿಲ್ಲ. ಇಲ್ಲಿ ಇನ್ನೂ ಸ್ವಲ್ಪ ಒಳ್ಳೆಯ ಸುದ್ದಿಯಿದೆ. ಯು.ಎಸ್.ನಲ್ಲಿ ಕ್ಯೋಟೋ ಗೆ ಬೆಂಬಲ ಕೊಡುವ ನಗರಗಳು 780 ಕ್ಕೆ ಏರಿದೆ -- ನಾನು ಅಲ್ಲಿ ಒಂದು ಹೊರಟುಹೋಗುವುದನ್ನು ನೋಡಿದ್ದೇನೆಂದುಕೊಂಡೆ, ಸುಮ್ಮನೆ ಇದನ್ನು ಸ್ಥಳೀಕರಿಸಲು. ಅದೊಂದು ಒಳ್ಳೆಯ ಸಮಾಚಾರ.
ಈಗ ಮುಕ್ತಾಯಮಾಡಲು, ನಾನು ಕೆಲವು ದಿನಗಳ ಹಿಂದೆ ಕೇಳಿದ್ದೆವು ಒಬ್ಬ ವೈಯುಕ್ತಿಕ ನಾಯಕತ್ವ ರೂಪಿಸುವುದು ಎಷ್ಟು ಸಾಮಾನ್ಯವೆಂದರೆ ಅದು ಅತಿ ಸಾಮಾನ್ಯ ಅಥವಾ ಮಾಮೂಲು ಆಗಿಬಿಡುತ್ತದೆ. ನಮಗೆ ಅಗತ್ಯವಿರುವುದು ಮತ್ತೊಂದು ನಾಯಕ ಪೀಳಿಗೆ. ಅಮೆರಿಕದಲ್ಲಿ ಜೀವಂತವಾಗಿರುವ ನಮ್ಮಂಥವರು ಅದರಲ್ಲೂ ಈಗ, ಹಾಗೆಯೇ ಪ್ರಪಂಚದಲ್ಲಿ ಉಳಿದವರು ಹೇಗಾದರೂ ಅರ್ಥಮಾಡಿಕೊಳ್ಳಬೇಕು ಏನೆಂದರೆ ಚರಿತ್ರೆ ನಮಗೆ ಒಂದು ಆಯ್ಕೆ ಕೊಟ್ಟರೆ -- ಜಿಲ್ ಬೋಲ್ಟೆ ಟೇಲರ್ ಯೋಚಿಸುತ್ತಿದ್ದಂತೆ ಹೇಗೆ ತನ್ನ ಜೀವವನ್ನು ತಾನು ಎದುರಿಸುತ್ತಿರುವ ದಿಗ್ಭ್ರಮಿಸುವ ಅನುಭವದಿಂದ ರಕ್ಷಿಸಿಕೊಳ್ಳಬೇಕು ಎಂದು. ನಾವು ಈಗ ದಿಗ್ಭ್ರಮೆಯ ಸಂಸ್ಕೃತಿ ಹೊಂದಿದ್ದೇವೆ. ಆದರೆ ನಮಗೆ ಈಗ ಗ್ರಹಗಳ ಕುರಿತಾದ ತುರ್ತುಸ್ಥಿತಿ ಇದೆ. ನಾವು ಸೃಷ್ಟಿಮಾಡುವ ಒಂದು ದಾರಿಯನ್ನು ಕಂಡುಕೊಳ್ಳಬೇಕು, ಈಗ ಜೀವಂತವಾಗಿರುವವರ ಪೀಳಿಗೆಯಲ್ಲಿಯೇ, ಪೀಳಿಗೆ ಗುರಿಯ ಭಾವನೆ. ಇದನ್ನು ಅರ್ಥಮಾಡಿಸುವ ಪದಗಳು ನನಗೆ ದೊರೆಯುತ್ತವೆ ಎಂದು ಆಶಿಸುತ್ತೇನೆ. ಇದು ಇನ್ನೊಂದು ನಾಯಕ ಪೀಳಿಗೆ ಈ ಗ್ರಹಕ್ಕ ಪ್ರಜಾಪ್ರಭುತ್ವ ತಂದದ್ದು. ಮತ್ತೊಂದು ಗುಲಾಮಗಿರಿ ಕೊನೆಗೊಳಿಸಿದ್ದು. ಹಾಗೂ ಅದು ಮಹಿಳೆಯರಿಗೆ ಮತದಾನದ ಹಕ್ಕು ಕೊಟ್ಟಿತು. ನಾವು ಇದನ್ನು ಮಾಡಬಹುದು. ನಮಗೆ ಇದನ್ನು ಮಾಡಲು ಸಾಮರ್ಥ್ಯವಿಲ್ಲ ಎಂದು ಹೇಳಬೇಡಿ. ನಮ್ಮ ಹತ್ತಿರ ಒಂದು ವಾರದ ಇರಾಕ್ ಯುದ್ಧಕ್ಕೆ ಖರ್ಚಾಗುವಷ್ಟು ಇದ್ದರೆ ಈ ಸವಾಲನ್ನು ಪರಿಹರಿಸುವ ಹಾದಿಯಲ್ಲಿರುತ್ತೇವೆ. ಅದನ್ನು ಮಾಡುವ ಸಾಮರ್ಥ್ಯ ನಮಗಿದೆ.
ಒಂದು ಕೊನೆಯ ಮಾತು. ನಾನು ಆಶಾವಾದಿಯಾಗಿದ್ದೇನೆ, ಏಕೆಂದರೆ ನನಗೆ ನಂಬಿಕೆಯಿದೆ ನಮಗೆ ಸಾಮರ್ಥ್ಯವಿದೆಯೆಂದು, ಬೃಹತ್ ಸವಾಲುಗಳ ಸಮಯದಲ್ಲಿ, ದಿಗ್ಭ್ರಮೆ ಕಾರಣಗಳನ್ನು ಪಕ್ಕಕ್ಕಿಟ್ಟು ಚರಿತ್ರೆ ನಮಗೆ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸಲು. ಕೆಲವುಸಲ ನಾನು ಕೇಳಿಸಿಕೊಳ್ಳುತ್ತೇನೆ ವಾತಾವರಣ ಬಿಕ್ಕಟ್ಟಿನ ಕಾಡಿಸುವ ನಿಜಸ್ಥಿತಿಗಳ ಬಗ್ಗೆ ಜನರು ಹೇಳುವುದನ್ನು, "ಓಹ್ ಇದು ಎಷ್ಟು ಭಯಂಕರ. ನಮಗೆ ಎಂತಹ ತೊಂದರೆ ಇದು." ಈ ಪ್ರಶ್ನೆಯನ್ನು ಬೇರೆ ರೀತಿ ಕೇಳಿ ಎಂದು ನಿಮ್ಮನ್ನು ಕೇಳಬಯಸುತ್ತೇನೆ. ಎಷ್ಟು ಪೀಳಿಗೆಗಳು ಮಾನವನ ಚರಿತ್ರೆಯಲ್ಲಿ ಅವಕಾಶವನ್ನು ಪಡೆದದ್ದೆವು ನಮ್ಮ ಉತ್ಕೃಷ್ಟ ಪ್ರಯತ್ನಗಳನ್ನು ಉಪಯೋಗಿಸಿ ಸವಾಲು ಎದುರಿಸಲು? ನಾವು ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ ನಮ್ಮಿಂದ ಮಾಡಿಸಿದಂಥ ಸವಾಲು? ನನ್ನ ಪ್ರಕಾರ ನಾವು ಈ ಸವಾಲನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಬೇಕು ಹಾಗೂ ನಮ್ಮಲಿ ಕ್ರೂತಜ್ಞತೆ ಭಾವನೆ ಇರಬೇಕು ಏಕೆಂದರೆ ನಾವೊಂದು ಪೀಳಿಗೆ ಇದರ ಬಗ್ಗೆ, ಇಲ್ಲಿಂದ ಸಾವಿರ ವರ್ಷಗಳ ನಂತರ, ಸಂಗೀತಪ್ರೇಮ ಉಳ್ಳ ಸಂಗೀತ ತಂಡಗಳು ಮತ್ತು ಕವಿಗಳು ಮತ್ತು ಹಾಡುಗಾರರು ಆಚರಿಸುತ್ತಾರೆ ಈ ರೀತಿ ಹೇಳುತ್ತಾ, ಇವರೇ ತಮ್ಮಲ್ಲಿಯೇ ಬಿಕ್ಕಟ್ಟು ಪರಿಹರಿಸಲು ಕಂಡುಕೊಂಡರು ಮತ್ತು ಪ್ರಕಾಶಮಾನವಾದ ಮತ್ತು ಆಶಾವಾದದ ಮಾನವನ ಭವಿಷ್ಯಕ್ಕೆ ಬುನಾದಿ ಹಾಕಿದರು.
ನಾವು ಅದನ್ನು ಮಾಡೋಣ. ಬಹಳ ಧನ್ಯವಾದಗಳು.
ಕ್ರಿಸ್ ಆಂಡರ್ ಸನ್: TED ಯಲ್ಲಿ ಬಹಳ ಜನರಿಗೆ ಒಂದು ಆಳವಾದ ನೋವಿದೆ ಅದು ಮೂಲತಃ ಒಂದು ವಿನ್ಯಾಸದ ವಿಚಾರ -- ದಿನದ ಅಂತ್ಯದಲ್ಲಿ, ಮತದಾನದ ಫಾರಂ ಮೇಲೆ ಒಂದು ವಿನ್ಯಾಸದ ವಿಚಾರ -- ಒಂದು ಕೆಟ್ಟ ವಿನ್ಯಾಸ ವಿಚಾರ ಎಂದರೆ ನಿಮ್ಮ ಧ್ವನಿ ಯಾರೂ ಕೇಳುತ್ತಿಲ್ಲ ಕಳೆದ ಎಂಟು ವರ್ಷಗಳಿಂದ ಇರುವ ಸ್ತಿತಿಯಂತೆ ನೀವು ಈ ಸಂಗಂತಿಗಳು ನಿಜವಾಗುವಂತೆ ಮಾಡಿದಂತೆ. ಅದು ನೋವು ಕೊಡುತ್ತದೆ.
ಅಲ್ ಗೋರೆ: ನಿಮಗೆ ಅದರ ಬಗ್ಗೆ ಏನೂ ಗೊತ್ತಾಗಿರುವುದಿಲ್ಲ. (ನಗು).
CA: ನೀವು ನಿಮ್ಮ ಪಕ್ಷದ ಪ್ರಸಿದ್ಧ ಅಭ್ಯರ್ಥಿಗಳು ಈಗೇನು ಮಾಡುತ್ತಿದ್ದಾರೆ ಎಂದು ನೋಡಿದರೆ -- ಅಂದರೆ, -- ಜಾಗತಿಕ ತಾಪಾಮಾನ ಏರಿಕೆ ಬಗ್ಗೆ ಅವರ ಯೋಜನೆಗಳು ನಿಮ್ಮನ್ನು ಭಾವೋದ್ರೇಕಗೊಳಿಸುತ್ತವೆಯೆ?©
AG: ಈ ಪ್ರಶ್ನೆಗೆ ಉತ್ತರ ಕೊಡುವುದು ನನಗೆ ಕಷ್ಟ ಏಕೆಂದರೆ, ಒಂದು ಕಡೆ, ನನಗನ್ನಿಸುತ್ತದೆ ನಾವು ಒಂದು ವಿಚಾರದ ಬಗ್ಗೆ ಸಂತೋಷಪಡಬೇಕು ಏನೆಂದರೆ ರಿಪಬ್ಲಿಕನ್ ಅಭ್ಯರ್ತಿ -- ಒಬ್ಬ ಅಭ್ಯರ್ಥಿ -- ಜಾನ್ ಮೆಕೈನ್, ಮತ್ತು ಫೈನಲ್ಗೆ ಬಂದ ಡೆಮಾಕ್ರೆಟಿಕ್ ಅಭ್ಯರ್ಥಿಗಳು -- ಮೂರೂ ಜನರೂ ವಿಭಿನ್ನ ಮತ್ತು ಮುಂದಕ್ಕೆ-ಬಾಗಿರುವ ಸ್ಥಿತಿಯಲ್ಲಿದ್ದಾರೆ ವಾತಾವರಣ ಬಿಕ್ಕಟ್ಟಿನ ಬಗ್ಗೆ. ಮೂರೂ ಜನರು ನಾಯಕತ್ವ ಕೊಡುತ್ತೇವೆನ್ನುತ್ತಾರೆ, ಹಾಗೂ ಮೂರೂ ಜನರು ಈಗನ ಆಡಳಿತದ ದೃಷ್ಟಿಕೋನದ ಬಗ್ಗೆ ಬೇರೆಯೇ ಅಭಿಪ್ರಾಯ ಹೊಂದಿದ್ದಾರೆ. ಹಾಗೂ ನನಗನ್ನಿಸುತ್ತದೆ ಮೂರೂ ಜನರು ಯೋಜನೆಗಳು ಮತ್ತು ಅನುಮೋದನೆಗಳನ್ನು ಕೂಡ ಮುಂದಿಡಲು ಕಾರಣರಾಗಿದ್ದಾರೆ. ಆಂದೋಳನದ ಮಾತುಕತೆ -- ಪ್ರಶ್ನೆಗಳು ಸೂಚಿಸುವಂತೆ -- ಅವನ್ನು ಕೇಳಿದ ಲೀಗ್ ಆಫ್ ಕನ್ ಸರ್ವೇಶನ್ ವೋಟರ್ಸ್, ಹಾಗೆಯೇ, ಎಲ್ಲ ಪ್ರಶ್ನೆಗಳ ವಿಶ್ಲೇಷಣೆ -- ಹಾಗೆಯೇ ಎಲ್ಲ ವಾದಗಳೂ ಕೂಡ ಓರ್ವೆಲ್ಲಿಯನ್ ಲೇಬಲ್ ಪ್ರಸ್ತುತಪಡಿಸಿದ "ಕ್ಲೀನ್ ಕೋಲ್". ಇದನ್ನು ಯಾರಾದರೂ ಗಮನಿಸಿದ್ದೀರಾ? ಪ್ರತಿಯೊಂದು ವಾದವನ್ನೂ "ಕ್ಲೀನ್ ಕೋಲ್" ಪ್ರಸ್ತುತಪಡಿಸಿದೆ. "ಈಗ, ಇನ್ನೂ ಲೋವರ್ ಎಮಿಶನ್ಸ್!"
ಮಾತುಕತೆಯ ಶ್ರೀಮಂತಿಕೆ ಮತ್ತು ಪೂರ್ಣತೆ ನಮ್ಮ ಪ್ರಜಾಪ್ರಭುತ್ವದಲ್ಲಿ ನಿಜವಾಗಲೂ ಅಗತ್ಯವಿರುವ ಧೈರ್ಯವಾದ ಉಪಕ್ರಮಕ್ಕೆ ಬುನಾದಿ ಹಾಕಿಕೊಡಲಿಲ್ಲ. ಹಾಗಾಗಿ ಅವರು ಸರಿಯಾದ ವಿಚಾರಗಳನ್ನು ಹೇಳುತ್ತಿದ್ದಾರೆ ಹಾಗೂ ಅವರು -- ಯಾರಾದರೂ ಚುನಾಯಿತರಾಗಲಿ - ಸರಿಯಾದದ್ದನ್ನೇ ಮಾಡಬಹುದು, ಆದರೆ ಒಂದು ನಾನು ಹೇಳುತ್ತೇನೆ: ನಾನು ಕ್ಯೋಟೊಯಿಂದ ಹಿಂದಿರುಗಿ ಬಂದಾಗ 1997 ರಲ್ಲಿ ಅತ್ಯಂತ ಸಂತೋಷಕರ ಭಾವನೆಯಿಂದ ಅಲ್ಲಿ ನಮಗೆ ಒಂದು ದಾರಿ ಸಿಕ್ಕಿದೆ ಎಂದು, ನಂತರ ಯುನೈಟೆಡ್ ಸ್ಟೇಟ್ಸ್ ಸೆನೇಟನ್ನು ಎದುರಿಸಿದೆವು, 100 ಜನ ಸೆನೇಟರ್ಗಳಲ್ಲಿ ಒಬ್ಬರು ಮಾತ್ರ ಮತ ಹಾಕಲು ತಯಾರಾಗಿದ್ದರು ಆ ಒಡಂಬಡಿಕೆಯನ್ನು ಸ್ಥಿರಗೊಳಿಸಲು, ಪ್ರಮಾಣೀಕರಿಸಲು. ಅಭ್ಯರ್ಥಿಗಳು ಏನು ಹೇಳಿದರೂ ಅದನ್ನು ಜನಗಳ ಹೇಳಿಕೆಗಳ ಜೊತೆಯಲ್ಲಿ ಇರಿಸಬೇಕು.
ಈ ಸವಾಲು ನಮ್ಮ ನಾಗರೀಕತೆ ರಚನೆಯ ಒಂದು ಭಾಗ. CO2 ನಮ್ಮ ನಾಗರೀಕತೆ ಬಿಡುವ ಉಸಿರು, ನಿಜವಾಗಿಯೂ. ಹಾಗೂ ಈ ಪ್ರಕ್ರಿಯೆಯನ್ನು ನಾವು ಯಾಂತ್ರಿಕಗೊಳಿಸಿದ್ದೇವೆ. ಈ ವಿನ್ಯಾಸ ಬದಲಾವಣೆ ಮಾಡಲು ಒಂದು ಅವಕಾಶ, ಒಂದು ಪ್ರಮಾಣ, ಒಂದು ಬದಲಾವಣೆ ಗತಿ ಅದು ನಾವು ಮಾಡಿರುವುದಕ್ಕಿಂತ ಮಿಗಿಲಾದುದಾಗಿರಬೇಕು. ಅದಕ್ಕೇ ನಾನು ಪ್ರಾಂಭದಲ್ಲಿ ಹೇಳಿದ್ದು, ನೀವು ಏನು ಮಾಡುವಿರೋ ಅದರ ಬಗ್ಗೆ ಆಶಾವಾದವಿರಲಿ, ಆದರೆ ಒಬ್ಬ ಚುರುಕು ನಾಗರಿಕರಾಗಿರಿ ಆಗ್ರಹಿಸಿ -- ಲೈಟ್ ಬಲ್ಬ್ ಬದಲಾಯಿಸಿ, ಆದರೆ ಕಾನೂನು ಬದಲಾವಣೆ ಮಾಡಿ. ವಿಶ್ವ ಒಡಂಬಡಿಕೆಗಳನ್ನು ಬದಲಾವಣೆ ಮಾಡಿ. ನಾವು ಮಾತಾಡಬೇಕು. ನಾವು ಈ ಪ್ರಜಾಪ್ರಭುತ್ವವನ್ನು ಪರಿಹರಿಸಬೇಕು -- ಇದು -- ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಗಟ್ಟಿಯಾದ ಭಾಗವಿದೆ, ಅದನ್ನು ನಾವು ಬದಲಾಯಿಸಬೇಕು. ಇಂಟರ್ ನೆಟ್ ಉಪಯೋಗಿಸಿ. ಇಂಟರ್ ನೆಟ್ ನೋಡಿ. ಜನಗಳ ಜೊತೆ ಸಂಪರ್ಕ ಕಲ್ಪಿಸಿ. ಚುರುಕು ನಾಗರಿಕರಾಗಿ. ಒಂದು ಅವಧಿ ನಿಗದಿಮಾಡಿ --ನಾವು ಯಾವುದೇ ಹೊಸ ಕಲ್ಲಿದ್ದಲಿನಿಂದ ಬೆಂಕಿ ಉತ್ಪತ್ತಿ ಮಾಡುವ CO2 ನ್ನು ಹಿಡಿದು ಶೇಖರಿಸಿಡುವಂಥೆ ಸಾಮರ್ಥ್ಯವಿಲ್ಲದಿರುವಂಥ ಸ್ಥಾವರಗಳನ್ನು ಹೊಂದಬಾರದು. ಅಂದರೆ ನಾವು ತುರ್ತಾಗಿ ನವೀಕರಿಸಬಹುದಾದ ಮೂಲಗಳನ್ನು ನಿರ್ಮಿಸಬೇಕು. ಈಗ, ಯಾರೂ ಈ ಪ್ರಮಾಣದಲ್ಲಿ ಮಾತಾಡುತ್ತಿಲ್ಲ. ಆದರೆ ನನಗೆ ನಂಬಿಕೆಯಿದೆ ಈಗಿನಿಂದ ನವೆಂಬರ್ ಒಳಗೆ ಅದು ಸಾಧ್ಯವಾಗುತ್ತದೆ. ಈ ಅಲಯೆನ್ಸ್ ಫಾರ್ ಕ್ಲೈಮೇಟ್ ಪ್ರೊಟೆಕ್ಷನ್ ಒಂದು ರಾಷ್ಟ್ರವ್ಯಾಪಿ ಆಂದೋಳನ ಪ್ರಾರಂಭಿಸುತ್ತದೆ -- ನೆಲಮಟ್ಟದ ಸಜ್ಜು, ಟೆಲಿವಿಶನ್ ಜಾಹಿರಾತುಗಳು, ಇಂಟರ್ ನೆಟ್ ಜಾಹಿರಾತುಗಳು, ರೇಡಿಯೋ, ವೃತ್ತಪತ್ರಿಕೆಗಳು -- ಎಲ್ಲರ ಸಹಭಾಗಿತ್ವದೊಂದಿಗೆ ಗರ್ಲ್ ಸ್ಕೌಟ್ಗಳಿಂದ ಹಿಡಿದು ಬೇಟೆಗಾರರು ಮತ್ತು ಮೀನುಗಾರರವರೆಗೆ.©
ನಮಗೆ ಸಹಾಯ ಬೇಕು.ನಮಗೆ ಸಹಾಯ ಬೇಕು.
CA: ನಿಮ್ಮ ವೈಯುಕ್ತಿಕ ಪಾತ್ರ ಮುಂಚೂಣಿಯಲ್ಲಿರುವ ರೀತಿಯಲ್ಲಿ, ಅಲ್, ಇನ್ನೇನಾದರೂ ಅದಕ್ಕಿಂತ ಹೆಚ್ಚಿಗೆ ಇದೆಯೇ ನೀವು ಮಾಡಬೇಕೆಂದಿರುವುದು?
AG: ನನಗೆ ಅದಕ್ಕೆ ಉತ್ತರ ಸಿಗಲೆಂದು ನಾನು ಪ್ರಾರ್ಥಿಸಿದ್ದೇನೆ ಆ ಪ್ರಶ್ನೆಗೆ. ನಾನಿನ್ನೇನು ಮಾಡಲಿ? ಬಕ್ ಮಿನಿಸ್ಟರ್ ಫುಲ್ಲರ್ ಒಮ್ಮೆ ಹೀಗೆ ಬರೆದರು, "ಭವಿಷ್ಯದ ಎಲ್ಲ ನಾಗರಿಕತೆಗಳೂ ನನ್ನನ್ನು ಅವಲಂಬಿಸಿದರೆ, ನಾನೇನು ಮಾಡಬಹುದು? ನಾನು ಹೇಗಿರಬಹುದು?" ಅದು ನಿಜವಾಗಿಯೂ ನಮ್ಮೆಲ್ಲರನ್ನು ಅವಲಂಬಿಸಿದೆ, ಆದರೆ, ಕೇವಲ ಲೈಟ್ ಬಲ್ಬುಗಳು ಮಾತ್ರವಲ್ಲ. ಇಲ್ಲಿ, ನಾವು ಬಹಳಷ್ಟು ಜನ ಅಮೆರಿಕನ್ನರು. ನಮ್ಮಲಿ ಒಂದು ಪ್ರಜಾಪ್ರಭುತ್ವವಿದೆ. ನಾವು ಬದಲಾವಣೆಗಳನ್ನು ಮಾಡಬಹುದು, ಆದರೆ ನಾವು ಸಕ್ರಿಯವಾಗಿ ಬದಲಾಗಬೇಕು. ಈಗ ವಾಸ್ತವದಲ್ಲಿ ಬೇಕಾಗಿರುವುದೇನೆಂದರೆ ಉನ್ನತ ಮಟ್ಟದ ತಿಳಿವು. ಮತ್ತು ಅದು ಕಷ್ಟ -- ಸೃಷ್ಟಿಮಾಡುವುದು ಬಹಳ ಕಷ್ಟ -- ಆದರೆ ಅದು ಬರುತ್ತಿದೆ. ಒಂದು ಹಳೇ ಆಫ್ರಿಕಾದ ಗಾದೆಯಿದೆ, ನಿಮಗೆ ಗೊತ್ತಿರಬಹುದು ಅದೇನೆಂದರೆ, "ನೀವು ತುರ್ತಾಗಿ ಹೋಗಬೇಕೆಂದರೆ, ಒಬ್ಬರೇ ಹೋಗಿ, ನೀವು ದೂರ ಹೋಗಬೇಕೆಂದರೆ ಜೊತೆಯಲ್ಲಿ ಹೋಗಿ." ನಾವು ಬಹಳ ದೂರ ತುರ್ತಾಗಿ ಹೋಗಬೇಕು. ಹಾಗಾಗಿ ನಾವು ನಮ್ಮ ತಿಳಿವಿಗೆ ಬದಲಾವಣೆ ತರಬೇಕು. ಬದ್ಧತೆಗೆ ಒಂದು ಬದಲಾವಣೆ. ಅವಸರದ ಹೊಸ ಮನಸು. ಸೌಲಭ್ಯಕ್ಕೊಂದು ಹೊಸ ಮುಚ್ಚುಗೆ ನಾವು ಈ ಸವಾಲನ್ನು ಕೈಗೊಳ್ಳುತ್ತಿದ್ದೇವೆ ಎಂದು.
You can share this video by copying this HTML to your clipboard and pasting into your blog or web page. This video will play with subtitles.
You either have JavaScript turned off or have an old version of the Adobe Flash Player. To view this rating widget you
need to get the latest Flash player.
If your browser allows only "trusted sites" to execute Javascript, you should add the "googleapis.com" domain to your whitelist to allow our Flash detection to work properly.
Got an idea, question, or debate inspired by this talk? Start a TED Conversation.
ಭಾವನಾತ್ಮಕವಾದ ಭಾಷಣದಲ್ಲಿ, ಮೆಕ್ಅರ್ಥರ್ ಪುರಸ್ಕಾರ ವಿಜೇತ ಹೋರಾಟಗಾರ್ತಿ ಮೆಜೋರಾ ಕಾರ್ಟೆರ್ ಪರಿಸರ ನ್ಯಾಯಕ್ಕಾಗಿ ಸೌತ್ ಬ್ರಾಂಕ್ಸ್ನಲ್ಲಿ ಆಕೆ ನಡೆಸಿದ ಹೋರಾಟದ ವಿವರ ನೀಡುತ್ತಾರೆ ಮತ್ತು ಹೇಗೆ ಅಲ್ಪಸಂಖ್ಯಾತ ಆಯಕಟ್ಟಿನ ಪ್ರದೇಶಗಳು ನಗರ ನಿರ್ಮಾಣ ಯೋಜನೆಯ ಹುಳುಕುಗಳಿಂದಾಗಿ ತೊಂದರೆ ಅನುಭವಿಸುತ್ತಿವೆ ಎಂಬ ವಿವರಗಳನ್ನು ನೀಡುತ್ತಾರೆ.
Once the US Vice President, then star of An Inconvenient Truth, now Nobel Peace Prize winner, Al Gore found a way to focus the world's attention on climate change. In doing so, he has invented a new medium -- the Keynote movie -- and reinvented himself. Full bio »
17:52 Posted: May 2007
Views 342,231 | Comments 150
15:58 Posted: Nov 2007
Views 527,418 | Comments 235
17:34 Posted: Apr 2007
Views 537,619 | Comments 94
Just follow the guidelines outlined under our Creative Commons license.
This comment will be attributed to . Not ? Sign Out.